ನಿರ್ಣಯಾಧಿಕಾರ; ತೀರ್ಮಾನಿಸುವ – ಶಕ್ತಿ, ಅಧಿಕಾರ: once England held the balance among nations ಹಿಂದೊಮ್ಮೆ ನಿರ್ಣಯಾಧಿಕಾರವು ಇಂಗ್ಲಂಡಿನದೇ ಆಗಿತ್ತು; ಹಿಂದೊಮ್ಮೆ ಇಂಗ್ಲಂಡ್ ಹೇಳಿದ್ದೇ ಕೊನೆಯ ತೀರ್ಮಾನವಾಗಿತ್ತು.
ಸಮಗಟ್ಟುವ ತೂಕ; ಪ್ರತಿತೂಕ; ಪ್ರತಿಭಾರ; ಎದುರುಭಾರ.
(ತೂಕ ಯಾ ಪ್ರಮಾಣದ) ಸಮತೆ; ಸಮಸ್ಥಿತಿ.
(ಕಲೆ) (ವಿನ್ಯಾಸ ಹಾಗೂ ಪ್ರಮಾಣಗಳಲ್ಲಿ) ಸಮತೆ; ಸಾಂಗತ್ಯ; ಸಾಮರಸ್ಯ.
(ಪ್ರಶ್ನೆ, ವಾದ, ಮೊದಲಾದವುಗಳನ್ನು, ಒಂದನ್ನು ಇನ್ನೊಂದರೊಡನೆ) ತೂಗು; ತೂಕ ಮಾಡು; ತೂಗಿನೋಡು; ತುಲನೆ ಮಾಡು.
(ಒಂದು ವಸ್ತುವನ್ನು ಇನ್ನೊಂದರೊಡನೆ) ತೂಗಿನೋಡು; ಹೋಲಿಸಿ ನೋಡು; ಸರಿದೂಗು; ತುಲನೆ ಮಾಡು.
(ವಸ್ತುವನ್ನು ಯಾ ತನ್ನನ್ನು) ಸಮತೂಕಕ್ಕೆ ತರು; ಸಮತೂಕದಲ್ಲಿರಿಸು.
(ಪ್ರತಿತೂಕದಿಂದ) ಸಮನಾಗಿಸು; ಸಮತೂಕ ಮಾಡು.
ಸರಿದೂಗಿಸು; ಸರಿಹೊಂದಿಸು; (ಸಾಲದೆ ಹೋದದ್ದನ್ನು) ತುಂಬಿಸು; ಭರ್ತಿಮಾಡು: the advantages more than balance the disadvantages ಅನುಕೂಲಗಳು ಪ್ರತಿಕೂಲಗಳನ್ನು ಸರಿದೂಗಿಸುವುದಕ್ಕಿಂತ ಹೆಚ್ಚಾಗಿಯೇ ಇವೆ.
(ಯಾವುದರಲ್ಲೇ ಯಾವ ಒಂದು ಅಂಶವೂ ಹೆಚ್ಚಾಗಿರದಂತೆ) ಸಮತೂಕದಲ್ಲಿರಿಸು; ಸಮಸ್ಥಿತಿಯಲ್ಲಿರಿಸು.
(ಯಾವುದನ್ನೇ) ಸ್ಥಿರವಾಗಿಸು; ಆಧಾರ ಕೊಟ್ಟು ಸಮವಾಗಿ ಯಾ ನೆಟ್ಟಗೆ ನಿಲ್ಲಿಸು: balance oneself on stilts ಗಣೆಗಳ ಮೇಲೆ ಸ್ಥಿರವಾಗಿ ಯಾ ಸಮವಾಗಿ ನಿಂತುಕೋ. balance a stick on the end of your nose ನಿನ್ನ ಮೂಗಿನ ತುದಿಯ ಮೇಲೆ ಒಂದು ಕಡ್ಡಿಯನ್ನು ನಿಲ್ಲಿಸು.