logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

abysmal
ಗುಣವಾಚಕ
  • (ಮುಖ್ಯವಾಗಿ ರೂಪಕವಾಗಿ) ತಳವಿಲ್ಲದ; ತುಂಬಾ ಆಳವಾದ; ಅಗಾಧ: abysmal ignorance ಅಗಾಧವಾದ ಅಜ್ಞಾನ.
  • (ಆಡುಮಾತು) ತುಂಬಾ ಕೆಟ್ಟ; ತೀರ ಕೆಟ್ಟುಹೋದ: his taste is abysmal ಅವನದು ತುಂಬಾ ಕೆಟ್ಟ ಅಭಿರುಚಿ.

  • abysmally
    ಕ್ರಿಯಾವಿಶೇಷಣ
  • ಅಗಾಧವಾಗಿ.
  • ಬಹಳ ಕೆಟ್ಟದಾಗಿ.

  • abyss
    ನಾಮವಾಚಕ
  • ಸೃಷ್ಟಿಪೂರ್ವ ಕೂಪ; ವಿಪ್ಲವಕೂಪ; ಸೃಷ್ಟಿಗೆ ಪೂರ್ವದಲ್ಲಿ ಎಲ್ಲವೂ ಅಸ್ತವ್ಯಸ್ತವಾಗಿದ್ದ ಅಗಾಧ ಕೂಪ.
  • ಭೂಗರ್ಭ ಕುಹರ.
  • ಪಾತಾಳ; ಅಧೋಲೋಕ; ನರಕ ಕೂಪ.
  • ಅಗಾಧವಾದ ಕಮರಿ.
  • ಸಮುದ್ರದ ತಲದ ಜಲರಾಶಿ.
  • (ರೂಪಕವಾಗಿ) ಅಗಾಧ ಕೂಪ; ಅಗಾಧವಾದ ಆಳ: abyss of despair ನಿರಾಶೆಯ ಅಗಾಧ ಕೂಪ.

  • abyssal
    ಗುಣವಾಚಕ
  • ಅಗಾಧವಾದ.
  • ಸಮುದ್ರತಳದ; ಸಮುದ್ರತಳ ನೆಲದ; ಮುಖ್ಯವಾಗಿ ಸಮುದ್ರದ ಅತ್ಯಂತ ತಳಭಾಗದಲ್ಲಿಯ ಜಲರಾಶಿಯ ಸ್ತರದ.
  • (ಭೂವಿಜ್ಞಾನ) = (^1\)plutonic.

  • AC
    ಸಂಕ್ಷಿಪ್ತ
  • (ಬ್ರಿಟಿಷ್‍ ಪ್ರಯೋಗ) Aircraftman.
  • (ಯಾ a.c.) alternating current.
  • before Christ (Latin ante christum ಇಂದ).
  • Companion of the Order of Australia.

  • ac-
    ಪೂರ್ವಪ್ರತ್ಯಯ
  • c, k, g ಗಳಿಂದ ಪ್ರಾರಂಭವಾಗುವ ಶಬ್ದಗಳ ಹಿಂದೆ ಬರುವ ad- ಪ್ರತ್ಯಯದ ಆದೇಶರೂಪ.
  • a-ಗೆ ಬದಲು ತಪ್ಪಾಗಿ ಬಳಸಿದ ಪೂರ್ವಪ್ರತ್ಯಯ: acknowledge.
  • ad-(2) ನೋಡಿ.

  • Ac.
    ಸಂಕೇತ
    actinium.

    acacia
    ನಾಮವಾಚಕ ಪದಗುಚ್ಛ
    false acacia = acacia(2)
  • ಅಕೇಷ; ಜಾಲಿ ಕುಲದ, ಗೋಂದು ಸ್ರವಿಸುವ ಕೆಲವು ಜಾತಿ ಗೊಬ್ಬಳಿ ಮರಗಳು.
  • ಲೋಕಸ್ಟ್‍ ಮರ; ಇಂಗ್ಲೆಂಡಿನಲ್ಲಿ ಅಲಂಕಾರಕ್ಕಾಗಿ ಬೆಳೆಸುವ ಒಂದು ಮರ.
  • ಅಕೇಷ (ಬಣ್ಣ); ತಿಳಿ ಹಸುರು ಹಳದಿ.

  • academe
    ನಾಮವಾಚಕ ನುಡಿಗಟ್ಟು
    (ಗ್ರಾಂಥಿಕ ಪ್ರಯೋಗ) ಶಿಕ್ಷಣ ಸಂಸ್ಥೆ; ಕಾಲೇಜು ಯಾ ವಿಶ್ವವಿದ್ಯಾನಿಲಯ.grove(s) of Academe ವಿಶ್ವವಿದ್ಯಾನಿಲಯದ – ಪ್ರದೇಶ, ಪರಿಸರ.

    academic
    ಗುಣವಾಚಕ
  • ಪ್ಲೇಟೋವಿನ ತಾತ್ತ್ವಿಕ ಪಂಥಕ್ಕೆ ಸೇರಿದ.
  • ಸಂದೇಹ ದೃಷ್ಟಿಯ; ಸಂಶಯದೃಷ್ಟಿಯಿಂದ ಕೂಡಿದ.
  • ವಿದ್ವತ್ಪೂರ್ಣ; ಪಾಂಡಿತ್ಯವುಳ್ಳ; ಪ್ರೌಢ.
  • ಶೈಕ್ಷಣಿಕ; ವ್ಯಾಸಂಗಕ್ಕೆ, ಅಧ್ಯಯನಕ್ಕೆ–ಸಂಬಂಧಿಸಿದ.
  • ಅವ್ಯಾವಹಾರಿಕ; ಕ್ರಿಯಾತ್ಮಕವಲ್ಲದ; ಕಾರ್ಯಕಾರಿಯಲ್ಲದ; (ಕೇವಲ ಪಾಂಡಿತ್ಯದ ಫಲವಾಗಿ) ಕಾರ್ಯಕ್ಕೆ ಒದಗದ: an academic discussion ಅವ್ಯಾವಹಾರಿಕ ಯಾ ನಿಷ್ಫಲ ಚರ್ಚೆ.
  • ಒಣ ತರ್ಕದ; ಶುಷ್ಕತರ್ಕದ.
  • ಒಣ ವಿದ್ವತ್ತಿನ; ಶುಷ್ಕಪಾಂಡಿತ್ಯದ.
  • ವಿಶ್ವವಿದ್ಯಾನಿಲಯ, ಕಾಲೇಜು, ಮೊದಲಾದವಕ್ಕೆ ಸಂಬಂಧಿಸಿದ: academic costume = academicals.
  • (ಕಲೆ) ಸಾಂಪ್ರದಾಯಿಕ; ಸಂಪ್ರದಾಯಶರಣ; ರೂಢಿಯಲ್ಲಿರುವ ಸಂಪ್ರದಾಯ, ಸಂಸ್ಥೆ, ಮೊದಲಾದವುಗಳ ತತ್ತ್ವ, ಸೂತ್ರಗಳಿಗೆ ಕಟ್ಟುಬಿದ್ದಿರುವ.
  • (ಅಮೆರಿಕನ್‍ ಪ್ರಯೋಗ) ತಾಂತ್ರಿಕವಲ್ಲದ ಯಾ ಆನ್ವಯಿಕವಲ್ಲದ (ಉದಾಹರಣೆಗೆ ಶುದ್ಧ ಗಣಿತ, ಸಾಹಿತ್ಯ, ಪ್ರಾಚೀನ ಭಾಷೆಗಳು) ವಿಷಯಗಳ ಅಧ್ಯಯನಕ್ಕೆ ಸಂಬಂಧಿಸಿದ: academic subjects ತಾಂತ್ರಿಕವಲ್ಲದ ಯಾ ಆನ್ವಯಿಕವಲ್ಲದ ಪಠ್ಯ ವಿಷಯಗಳು.


  • logo