logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

unbidden
ಗುಣವಾಚಕ
  • ಆಜ್ಞೆ ಕೊಟ್ಟಿಲ್ಲದ; ಅಪ್ಪಣೆ ಮಾಡಿರದ.
  • ಅನಾಹೂತ; ಆಹ್ವಾನಿಸಿಲ್ಲದ; ಕರೆಯದೆ, ಹೇಳದೆಕೇಳದೆ – ಬರುವ: arrived unbidden ಕರೆಯದೆ ಬಂದ.

  • unbind
    ಸಕರ್ಮಕ ಕ್ರಿಯಾಪದ
    ಬಂಧನ ಬಿಚ್ಚು; ಕಟ್ಟು ಕಳಚು.

    unbirthday
    ಗುಣವಾಚಕ
    (ಉಡುಗೊರೆ ಮೊದಲಾದವುಗಳ ವಿಷಯದಲ್ಲಿಹಾಸ್ಯವಾಗಿ ಹೇಳುವಾಗ) ಹುಟ್ಟುಹಬ್ಬದ್ದಲ್ಲದ; ಜನ್ಮದಿನೇತರದ.

    unbirthday
    ನಾಮವಾಚಕ
    (ಕೆಲವೊಮ್ಮೆ ವಿಶೇಷಣವಾಗಿ)
  • (ಹಾಸ್ಯ ಪ್ರಯೋಗ) (ಒಬ್ಬನ ಹುಟ್ಟಿದ ದಿನವನ್ನು ಬಿಟ್ಟು) ಬೇರಾವುದೇ ದಿನ; ಜನ್ಮೇತರ ದಿನ.
  • (ಹುಟ್ಟಿದ ದಿನ ಬಿಟ್ಟು) ಬೇರೆ ದಿನ ಏರ್ಪಡಿಸಿದ ಸಂತೋಷಕೂಟ.

  • unbleached
    ಗುಣವಾಚಕ
  • ಬಣ್ಣ ಕಳೆಯದ; ಬಿಳಿದಾಗಿಸದ; ಚೆಲುವೆ ಮಾಡದ.
  • ಬಣ್ಣ ಹೋಗದ; ಬಿಳಿದಾಗದ.

  • unblemished
    ಗುಣವಾಚಕ
    ಕಳಂಕವಿಲ್ಲದ; ಮಲಿನಗೊಳಿಸದ; ಶುದ್ಧ.

    unblessed
    ಗುಣವಾಚಕ
  • ಆಶೀರ್ವದಿಸದ; ಹರಸದ.
  • ಅಪವಿತ್ರವಾದ; ಅಶುಭವಾದ; ಪವಿತ್ರಗೊಳಿಸದ.
  • ಕೇಡಿನ; ಸಂಕಟದ.

  • unblest
    ಗುಣವಾಚಕ
    = unblessed.

    unblinking
    ಗುಣವಾಚಕ
  • ಎವೆಯಿಕ್ಕದ; ಅನಿಮೇಷ; ಕಣ್ಣು ಮಿಟುಕಿಸದ.
  • ನಿರ್ಭಾವವಾದ; (ಆಶ್ಚರ್ಯ, ಗಲಿಬಿಲಿ, ಖೇದ, ಮೊದಲಾದ) ಯಾವೊಂದು ಪ್ರತಿಕ್ರಿಯೆ, ಭಾವ, ಮೊದಲಾದವನ್ನು ಪ್ರದರ್ಶಿಸದ.
  • ಹಿಂಜರಿಯದ; ನಿರ್ಭಯವಾದ; ದೃಢವಾದ.

  • unblinkingly
    ಕ್ರಿಯಾವಿಶೇಷಣ
  • ಕಣ್ಣು ಮಿಟುಕಿಸದೆ.
  • ನಿರ್ಭಾವದಿಂದ; ಪ್ರತಿಕ್ರಿಯೆ ವ್ಯಕ್ತಪಡಿಸದೆ.
  • ಹಿಂಜರಿಯದೆ; ನಿರ್ಭಯವಾಗಿ; ದೃಢವಾಗಿ.


  • logo