logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

tangerine orange
ನಾಮವಾಚಕ
ಟಾಂಜರೀನ್‍ ಕಿತ್ತಳೆ; ಕಡುಹಳದಿ ಬಣ್ಣದ, ಚಪ್ಪಟೆಯಾಕಾರದ, ತೆಳುಸಿಪ್ಪೆಯುಳ್ಳ, ಸಿಹಿರುಚಿಯ, ನಿಂಬೆಹಣ್ಣಿನ ಕುಲದ ಒಂದು ಚಿಕ್ಕ ಹಣ್ಣು.

tangibility
ನಾಮವಾಚಕ
  • ಸ್ಪ ಶ್ಯತೆ; ಸ್ಪರ್ಶಗ್ರಾಹ್ಯತೆ; ಮುಟ್ಟಿ ತಿಳಿಯಬಹುದಾದ ಸ್ಥಿತಿ, ಗುಣ.
  • ನಿಷ್ಕೃಷ್ಟತೆ; ಸ್ಪಷ್ಟತೆ; ಸ್ಫುಟತೆ.
  • ವಾಸ್ತವತೆ.

  • tangible
    ಗುಣವಾಚಕ
  • ಮುಟ್ಟಲಾಗುವ; ಮುಟ್ಟಿ ತಿಳಿಯಬಹುದಾದ; ಸ್ಪೃಶ್ಯ; ಸ್ಪರ್ಶಗ್ರಾಹ್ಯ.
  • ನಿಷ್ಕೃಷ್ಟ; ವಿಸ್ಪಷ್ಟ; ಸ್ಫುಟ; ಕಲ್ಪನೆಯದಲ್ಲದ; ವಾಸ್ತವ: tangible advantages ಸ್ಪಷ್ಟವಾದ ಅನುಕೂಲಗಳು. the tangible benefits of sunshine ಸೂರ್ಯನ ಬೆಳಕಿನ ವಾಸ್ತವ ಪ್ರಯೋಜನಗಳು.
  • (ನ್ಯಾಯಶಾಸ್ತ್ರ) ವಾಸ್ತವಿಕ; ವಸ್ತುಭೂತ; ಮೂರ್ತ: tangible assets ವಾಸ್ತವಿಕ ಆಸ್ತಿ, ಸ್ವತ್ತು.

  • tangibleness
    ನಾಮವಾಚಕ
    = tangibility.

    tangibly
    ಕ್ರಿಯಾವಿಶೇಷಣ
  • ಸ್ಪಷ್ಟವಾಗಿ; ನಿಷ್ಕೃಷ್ಟವಾಗಿ.
  • ವಾಸ್ತವವಾಗಿ; ಮೂರ್ತವಾಗಿ.

  • tangle
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
  • (ದಾರದ ಎಳೆಗಳು, ಕೂದಲು, ಮೊದಲಾದವುಗಳ ವಿಷಯದಲ್ಲಿ) ಬೊಂತೆಗಟ್ಟಿಸು; ಜಡೆಗಟ್ಟಿಸು; ಗೋಜು, ಸಿಕ್ಕು –ಮಾಡು.
  • ತೊಡಕಿಗೆ, ಬಲೆಗೆ–ಸಿಕ್ಕಿಸು.
  • ಗೋಜಲಾಗಿಸು; ಜಟಿಲಗೊಳಿಸು; ತೊಡಕುಮಾಡು: a tangled affair ತೊಡಕಾದ ಪ್ರಸಂಗ.

  • tangle
    ನಾಮವಾಚಕ
  • ಗೋಜು; ಸಿಕ್ಕು; ಬೊಂತೆ; ಜಡೆ: a tangle of ropes ಗೋಜಾದ ಹಗ್ಗದ ಬೊಂತೆ.
  • ತೊಡಕು; ಗೋಜು; ಗೋಜಲು; ಗೊಂದಲದ ಸ್ಥಿತಿ: business is in a tangle ವ್ಯವಹಾರ ಗೊಂದಲದಲ್ಲಿದೆ. a tangle of contradictory statements ವಿರೋಧಾಭಾಸದ ಹೇಳಿಕೆಗಳ ಗೋಜಲು.

  • tangle
    ನಾಮವಾಚಕ
    ಮುಖ್ಯವಾಗಿ ಲ್ಯಾಮಿನೇರಿಯ ಯಾ ಫೂಕಸ್‍ ಕುಲದ, ಒಂದು ಬಗೆಯ, ಸಮುದ್ರದ ಜೊಂಡು, ಕಳೆ.

    tangly
    ಗುಣವಾಚಕ
  • ಗೋಜಾದ; ಸಿಕ್ಕಾದ; ತೊಡಕಾದ; ಬೊಂತೆಗಟ್ಟಿದ; ಜಡೆಗಟ್ಟಿದ.
  • ಅವ್ಯವಸ್ಥೆಗೊಂಡ; ಗೊಂದಲದ.

  • tango
    ನಾಮವಾಚಕ
    ಟ್ಯಾಂಗೋ:
  • (ಮಧ್ಯ ಆಹ್ರಿಕದಿಂದ ಬಂದಿತೆನ್ನಲಾದ) ದಕ್ಷಿಣ ಅಮೆರಿಕದ ಮಂದಗತಿಯ ನೃತ್ಯ.
  • ಈ ನೃತ್ಯದಲ್ಲಿನ ಮಂದಗತಿಯ ಸಂಗೀತ.


  • logo