ಆಕ್ಟೇನ್ ಸಂಖ್ಯೆ; ಮೋಟಾರ್ ಇಂಧನದ ಸ್ಫೋಟನ ರೋಧಕ ಗುಣದ ಸೂಚ್ಯಂಕ; ನಿರ್ದಿಷ್ಟ ಮೋಟಾರ್ ಇಂಧನದ ಸ್ಫೋಟನ ರೋಧಕ ಗುಣ ಎಷ್ಟೋ ಅಷ್ಟೇ ಸ್ಫೋಟನ ರೋಧಕ ಗುಣ ಉಳ್ಳ ಐಸೊಆಕ್ಟೇನ್–ನಾರ್ಮಲ್ ಹೆಪ್ಟೇನ್ ಮಿಶ್ರಣದಲ್ಲಿ ಐಸೋ ಆಕ್ಟೇನಿನ ಶೇಕಡಾ ಅಂಶ.
octane rating
ನಾಮವಾಚಕ
= octane number.
octant
ನಾಮವಾಚಕ
ಅಷ್ಟಾಂಶಕ:
ವರ್ತುಲದ ಪರಿಧಿಯಲ್ಲಿ ಎಂಟನೆಯ ಒಂದು ಭಾಗದಷ್ಟಿರುವ ಕಂಸ.
ವರ್ತುಲದಲ್ಲಿ ಪರಸ್ಪರ 45 ಡಿಗ್ರಿ ಕೋನದಲ್ಲಿರುವ ಎರಡು ತ್ರಿಜ್ಯಗಳಿಂದ ಮತ್ತು ಆ ತ್ರಿಜ್ಯಗಳ ತುದಿಗಳನ್ನು ಸೇರಿಸುವ ಕಂಸದಲ್ಲಿ ಆವೃತವಾದ (ವರ್ತುಲದ ವಿಸ್ತೀರ್ಣದ) ಎಂಟನೆಯ ಒಂದು ಭಾಗ.
ಮುಖ್ಯವಾಗಿ ಪರಸ್ಪರ ಲಂಬವಾಗಿರುವ ಮೂರು ಸಮತಲಗಳು ತಾವು ಸಂಧಿಸುವ ಬಿಂದುವಿನ ಸುತ್ತಲ ಪ್ರದೇಶವನ್ನು ಯಾ ಘನಕಾಯವನ್ನು ವಿಭಾಗಿಸುವ ಎಂಟು ಪ್ರದೇಶಗಳಲ್ಲಿ ಒಂದು.
(ಖಗೋಳ ವಿಜ್ಞಾನ) ಅಷ್ಟಕ; ಬೇರೊಂದು ಖಗೋಳ ಕಾಯಕ್ಕೆ ಸಂಬಂಧಿಸಿದಂತೆ ಖಗೋಳ ಕಾಯವೊಂದು 45 ಡಿಗ್ರಿ ಅಂತರದಲ್ಲಿರುವಾಗಿನ ಅದರ ಸ್ಥಾನ.
ಹಡಗಿನಿಂದ ಯಾ ವಿಮಾನದಿಂದ ಖಗೋಳ ಕಾಯಗಳ ಔನ್ನತ್ಯವನ್ನು ಅಳೆಯುವುದಕ್ಕಾಗಿ ಉಪಯೋಗಿಸುವ, ಪ್ರತಿಫಲನ ಕನ್ನಡಿಗಳ ನಡುವೆ ಗರಿಷ್ಠ 45 ಡಿಗ್ರಿ ಕೋನವುಳ್ಳ ಒಂದು ಸಾಧನ.
octarchy
ನಾಮವಾಚಕ
ಅಷ್ಟರಾಜ ಪ್ರಭುತ್ವ; ಎಂಟುದೊರೆಗಳ ಸರಕಾರ.
ಅಷ್ಟರಾಷ್ಟ್ರಕೂಟ; ಎಂಟು ಸಣ್ಣ ರಾಜ್ಯಗಳ (ಕೆಲವು ಇತಿಹಾಸಕಾರರ ಪ್ರಕಾರ ಬ್ರಿಟನ್ನಿನಲ್ಲಿ ಆಂಗ್ಲರು ಮತ್ತು ಸ್ಯಾಕ್ಸನರು ಸ್ಥಾಪಿಸಿದ ಎಂಟು ರಾಜ್ಯಗಳ) ಒಕ್ಕೂಟ.
octaroom
ನಾಮವಾಚಕ
octoroon ಪದದ ರೂಪಾಂತರ.
octastyle
ಗುಣವಾಚಕ
ಅಷ್ಟಸ್ತಂಭಿ; ಎಂಟು ಕಂಬದ; ಮುಂಭಾಗದಲ್ಲೋ ತುದಿಯಲ್ಲೋ ಎಂಟು ಕಂಬಗಳಿರುವ.
octastyle
ನಾಮವಾಚಕ
ಅಷ್ಟಸ್ತಂಭಿ; ಎಂಟು ಕಂಬಗಳಿರುವ ಕಟ್ಟಡ ಯಾ ಮೊಗಸಾಲೆ.
Octateuch
ನಾಮವಾಚಕ
(ಬೈಬ್‍ಲ್) ಹಳೆಯ ಒಡಂಬಡಿಕೆಯ–ಪ್ರಥಮಾಷ್ಟಕ, ಮೊದಲ ಎಂಟು ಪ್ರಕರಣಗಳು.
octavalent
ಗುಣವಾಚಕ
(ರಸಾಯನವಿಜ್ಞಾನ) ಅಷ್ಟವೇಲನ್ಸೀಯ; ಎಂಟು ವೇಲನ್ಸಿ ಉಳ್ಳ.
octave
ನಾಮವಾಚಕ
(ಸಂಗೀತ)
ಅಷ್ಟಮ ಶ್ರೇಣಿ; ಸ್ವರಾಷ್ಟಕ ಶ್ರೇಣಿ; ಗೊತ್ತಾದ ಒಂದು ಸ್ವರದ ಮೇಲಿನ ಯಾ ಕೆಳಗಿನ ಸ್ಥಾಯಿಯ, ಆ ಸ್ವರದ ಕಂಪನ ಪ್ರಮಾಣಕ್ಕೆ ಎರಡರಷ್ಟು ಯಾ ಅರ್ಧದಷ್ಟು ಇರುವ, ಎಂಟು ಸ್ವರಗಳ ಶ್ರೇಣಿ.
ಅಷ್ಟಕ; ಸ್ವರಾಷ್ಟಕಾಂತರ; ಒಂದು ಸ್ವರಕ್ಕೂ ಅದರ ಅಷ್ಟಮಕ್ಕೂ ನಡುವಣ ಅಂತರ.
ಅಷ್ಟಮ; ಸ್ವರಾಷ್ಟಕಾಂತರದ ಅಂತ್ಯಗಳಲ್ಲಿ ಬರುವ ಎರಡು ಸ್ವರಗಳಲ್ಲಿ ಒಂದು.
ಅಷ್ಟಮ ಯುಗ್ಮ; ಒಂದು ಸ್ವರ ಮತ್ತು ಅದರ ಅಷ್ಟಮ ಎರಡನ್ನೂ ಮೇಳೈಸಿ ಹಾಡುವುದು ಯಾ ವಾದನ ಮಾಡುವುದು.
ಅಷ್ಟಪದಿ; ಪದ್ಯದಲ್ಲಿ ಎಂಟು ಸಾಲುಗಳ ಸಮುದಾಯ ಯಾ ಎಂಟು ಸಾಲುಗಳುಳ್ಳ ಪದ್ಯ.
ಅಷ್ಟದಿನ; ಅಷ್ಟಾಹ; ಹಬ್ಬದ ದಿನದಿಂದ ತೊಡಗಿದ ವಾರ ಮತ್ತು ಅದರ ಮಾರನೆಯ ಎಂಟನೆಯ ದಿನವೂ ಸೇರಿದ ಎಂಟು ದಿನಗಳು.
ಅಷ್ಟಕ; ಎಂಟರ ಗುಂಪು, ತಂಡ.
ಅಷ್ಟಮ ತಂತ್ರ; ಖಡ್ಗ ವಿದ್ಯೆಯ ಎಂಟು ರಕ್ಷಕ ವರಿಸೆಗಳಲ್ಲಿ ಕೊನೆಯ ವರಿಸೆ.