logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

major-general
ನಾಮವಾಚಕ
(ಸೈನ್ಯ) ಮೇಜರ್‍ ಜೆನರಲ್‍; ಲೆಹ್ಟಿನೆಂಟ್‍ ಜೆನರಲ್‍ಗಿಂತ ಕೆಳದರ್ಜೆಯ ಅಧಿಕಾರಿ.

majorette
ನಾಮವಾಚಕ
= drum majorette.

majority
ನಾಮವಾಚಕ ಪದಗುಚ್ಛ
  • (ಒಂದರ) ಹೆಚ್ಚುಪಾಲು; ಬಹುಭಾಗ; ಹೆಚ್ಚು ಭಾಗ; ಅಧಿಕಾಂಶ; ಅಧಿಕ ಭಾಗ (ಎಣಿಸಬಲ್ಲ ನಾಮವಾಚಕಗಳೊಡನೆ ಮಾತ್ರ ಪ್ರಯೋಗ: a majority of people ಎಂಬ ಪ್ರಯೋಗದಂತೆ, ಸಮೂಹವಾಚಕ ನಾಮವಾಚಕಗಳೊಡನೆ ಪ್ರಯೋಗ ಇಲ್ಲ: a majority of the work ಎಂಬ ಪ್ರಯೋಗ ತಪ್ಪು).
  • ಹೆಚ್ಚು ಸಂಖ್ಯೆ; ಅಧಿಕ ಸಂಖ್ಯೆ; ಬಹುಸಂಖ್ಯೆ.
  • (ರಾಜನೀತಿಶಾಸ್ತ್ರ) ಬಹುಮತ; ಒಂದು ಪಕ್ಷ, ವ್ಯಕ್ತಿ, ಮೊದಲಾದವಕ್ಕಿಂತ ಇನ್ನೊಂದಕ್ಕೆ ಬಂದ ಹೆಚ್ಚು ಮತಗಳ ಸಂಖ್ಯೆ: a majority of 50 ಐವತ್ತು ಹೆಚ್ಚಿನ ಮತಗಳು.
  • ಪ್ರಾಪ್ತವಯಸ್ಸು; ಪ್ರಾಪ್ತವಯಸ್ಕತೆ: attained his majority ಪ್ರಾಪ್ತವಯಸ್ಸಿಗೆ ಬಂದ; ಪ್ರಾಪ್ತವಯಸ್ಕನಾದ.
  • (ಸೈನ್ಯ) ಮೇಜರನ ಹುದ್ದೆ ಯಾ ಅಧಿಕಾರ.

  • majority rule
    ನಾಮವಾಚಕ
    ಬಹುಮತ ನಿಯಮ; ಬಹುಮತ ತತ್ತ್ವ; ಯಾರ ಸಂಖ್ಯಾಬಲ ಹೆಚ್ಚಿದೆಯೋ ಅವರಿಗೆ ಹೆಚ್ಚಿನ ಅಧಿಕಾರವಿರಬೇಕೆಂಬ ನಿಯಮ.

    majority verdict
    ನಾಮವಾಚಕ
    ಬಹುಮತದ ತೀರ್ಪು; ಅರ್ಧಕ್ಕಿಂತ ಹೆಚ್ಚು ಮಂದಿ ನ್ಯಾಯದರ್ಶಿಗಳ ತೀರ್ಮಾನ, ತೀರ್ಪು (ಈ ತೀರ್ಮಾನ ಸರ್ವಾನುಮತವಾಗದೆ ಇರಬಹುದು).

    majorship
    ನಾಮವಾಚಕ
    (ಸೈನ್ಯ) ಮೇಜರ್‍ ಹುದ್ದೆ, ಪದವಿ.

    majuscular
    ಗುಣವಾಚಕ
    ದೊಡ್ಡಕ್ಷರದ; ಬೃಹದಕ್ಷರದ.

    majuscule
    ಗುಣವಾಚಕ
    (ಪುರಾಲಿಪಿ ಶಾಸ್ತ್ರ) ದೊಡ್ಡ; ಬೃಹತ್‍; ದೊಡ್ಡಕ್ಷರದ; ದೊಡ್ಡಕ್ಷರ ಯಾ ದಪ್ಪಕ್ಷರದಲ್ಲಿ ಬರೆದ ಯಾ ಅದಕ್ಕೆ ಸಂಬಂಧಿಸಿದ.

    majuscule
    ನಾಮವಾಚಕ
    (ಪುರಾಲಿಪಿ ಶಾಸ್ತ್ರ) ದೊಡ್ಡಕ್ಷರ; ಬೃಹದಕ್ಷರ; ದಪ್ಪಕ್ಷರ.

    makable
    ಗುಣವಾಚಕ
    ಮಾಡಬಹುದಾದ; ರಚಿಸಬಹುದಾದ; ನಿರ್ಮಿಸಬಹುದಾದ.


    logo