logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

lammergeyer
ನಾಮವಾಚಕ
ಗಡ್ಡದ ರಣಹದ್ದು; ಜಿಪೇಟಸ್‍ ಬಾರ್ಬಟಸ್‍ ಕುಲದ, ರೆಕ್ಕೆ ಬಿಚ್ಚಿದಾಗ ಕೆಲವೊಮ್ಮೆ ಮೂರು ಮೀಟರುಗಳಷ್ಟು ಅಗಲವಾಗುವ, ಕೊಕ್ಕಿನ ಎರಡೂ ಕಡೆಯೂ ಗಡ್ಡದಂಥ ಕಪ್ಪು ಗರಿಗಳುಳ್ಳ ದೊಡ್ಡ ರಣಹದ್ದು.

lamp
ನಾಮವಾಚಕ ನುಡಿಗಟ್ಟು
smell of the lamp
  • ದೀಪ; ಲ್ಯಾಂಪು; ಸತತವಾಗಿ ಬೆಳಕನ್ನು ಒದಗಿಸುವ ಸಾಧನ, ಮುಖ್ಯವಾಗಿ:
    1. ವಿದ್ಯುದ್ದೀಪ (ಸಾಮಾನ್ಯವಾಗಿ ಹೋಲ್ಡರು ಮತ್ತು ಷೇಡು ಯಾ ಹೊದಿಕೆಯುಳ್ಳದ್ದು): bedside lamp ಹಾಸಿಗೆ ಮಗ್ಗುಲಿನ ಲ್ಯಾಂಪು.
    2. ಎಣ್ಣೆದೀಪ; ಎಣ್ಣೆ, ಬತ್ತಿ ಕೂಡಿದ ದೀವಿಗೆ, ಸೊಡರು.
    3. ಉರಿವ ಮೇಣದ ಬತ್ತಿ, ಅನಿಲಧಾರೆ, ಬಿಳಿಗಾವು ತಂತಿ ಯಾ ಇತರ ಬೆಳಕು ನೀಡುವ ವಸ್ತುವನ್ನು ಇರಿಸಿರುವ, ಗಾಜು ಮೊದಲಾದಪಾರದರ್ಶಕ ಬುರುಡೆ, ಪಾತ್ರೆ.
    4. ಹಲವಾರು ಕಾಯಿಲೆಗಳಿಗೆ ಚಿಕಿತ್ಸೆಯಾಗಿ ಬಳಸುವ, (ಮುಖ್ಯವಾಗಿ ನೇರಳಾತೀತ ಯಾ ರಕ್ತಾತೀತ ವಿಕಿರಣವನ್ನು) ಹೊರಸೂಸುವ ಸಾಧನ.
  • ಜ್ಞಾನ ದೀವಿಗೆ; ಅಧ್ಯಾತ್ಮಜ್ಯೋತಿ; ಆಶಾಕಿರಣ; ಜ್ಞಾನದೀಪ; ಆಧ್ಯಾತ್ಮಿಕ ಯಾ ಬೌದ್ಧಿಕ ಸ್ಫೂರ್ತಿಯ ನೆಲೆ, ಅಕರ.
  • (ಕಾವ್ಯಪ್ರಯೋಗ) ಸೂರ್ಯ, ಚಂದ್ರ ಯಾ ನಕ್ಷತ್ರ.

  • lamp
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    (ಕಾವ್ಯಪ್ರಯೋಗ) ಬೆಳಗು; ಹೊಳೆ; ಪ್ರಕಾಶಿಸು; ಬೆಳಕು ಬೀರು: an evil fire out of their eyes came lamping ಅವರ ಕಣ್ಣುಗಳಿಂದ ಒಂದು ಕೆಟ್ಟ ಬೆಂಕಿ ಹೊಳೆಯುತ್ತಾ ಹೊಮ್ಮಿತು.
  • ದೀಪವಿಡು; ದೀಪಗಳನ್ನು – ಹಾಕು, ಒದಗಿಸು; to lamp the church ಚರ್ಚಿಗೆ ದೀಪ ಒದಗಿಸಲು.
  • (ದೀಪದಿಂದಲೋ ಎಂಬಂತೆ) ಬೆಳಗು; ಬೆಳಗಿಸು; ಪ್ರಕಾಶಗೊಳಿಸು; ಬೆಳಕು ಚೆಲ್ಲು; ಪ್ರಕಾಶಬೀರು; ಕಾಂತಿಬೀರು; the falling stars lamping the red horizon ಬೀಳುತ್ತಿರುವ ನಕ್ಷತ್ರಗಳು ಕೆಂಪು ಗಗನದಂಚನ್ನು ಬೆಳಗಿಸುತ್ತಾ.
  • (ಅಮೆರಿಕನ್‍ ಪ್ರಯೋಗ, ಅಶಿಷ್ಟ) ನೋಡು: nobody even lamped its number ಯಾರೂ ಅದರ ಸಂಖ್ಯೆಯನ್ನು ಕೂಡ ನೋಡಲಿಲ್ಲ.

  • lamp standard
    ನಾಮವಾಚಕ
    = lamp-post.

    lamp-chimney
    ನಾಮವಾಚಕ
    ದೀಪದ ಚಿಮಣಿ; ಎಣ್ಣೆ ದೀಪದ, ಮೇಣದ ಬತ್ತಿಯ ಜ್ವಾಲೆಯ ಸುತ್ತ ಹಾಕುವ ಗಾಜಿನ ಬುರುಡೆ.

    lamp-holder
    ನಾಮವಾಚಕ
    ಲ್ಯಾಂಪ್‍ಹೋಲ್ಡರು; ದೀಪಧಾರಕ; ಮುಖ್ಯವಾಗಿ ವಿದ್ಯುದ್ದೀಪಕ್ಕೆ ಆಧಾರವೊದಗಿಸುವ ಸಾಧನ.

    lamp-post
    ನಾಮವಾಚಕ
    ಲಾಂದ್ರಕಂಬ; ಬೀದಿಯ ದೀಪಕ್ಕೆ ಆಧಾರವಾಗಿರುವ ಎತ್ತರವಾದ ಕಂಬ.

    lampas
    ನಾಮವಾಚಕ
    ಲ್ಯಾಂಪಸ್‍; ಕುದುರೆಯ ಬಾಯಿಯ ಅಂಗುಳು ಊದಿಕೊಳ್ಳುವ ಒಂದು ರೋಗ.

    lampas
    ನಾಮವಾಚಕ
    ಲ್ಯಾಂಪಸ್‍; (ಹಿಂದೆ ಚೀನಾದಿಂದ ಬರುತ್ತಿದ್ದ) ಒಂದು ಬಗೆಯ ಕಿಂಕಾಪು ಬಟ್ಟೆ.

    lampblack
    ನಾಮವಾಚಕ
    ದೀಪದ ಮಸಿ, ಕಪ್ಪು; ದೀಪದ ಹೊಗೆಯ ಕಪ್ಪಿನಿಂದ ತಯಾರಿಸಿದ ವರ್ಣದ್ರವ್ಯ.


    logo