logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

illusorily
ಕ್ರಿಯಾವಿಶೇಷಣ
  • ಭ್ರಾಂತಿಕಾರಕವಾಗಿ; ಭ್ರಮೆಗೊಳಿಸುವ ರೀತಿಯಲ್ಲಿ.
  • ಭ್ರಾಂತಿಯಿಂದ.

  • illusoriness
    ನಾಮವಾಚಕ
    ಪ್ರಾತಿಭಾಸಿಕತೆ; ಭ್ರಾಮಕತೆ; ಮಾಯಿಕತೆ; ಕೇವಲ ತೋರ್ಕೆಯ ಸ್ವರೂಪವಿರುವಿಕೆ: illusoriness of the world ಪ್ರಪಂಚದ ಮಾಯಿಕತೆ, ಪ್ರಾತಿಭಾಸಿಕತೆ.

    illusory
    ಗುಣವಾಚಕ
  • ಭ್ರಾಮಕ; ಭ್ರಾಂತಿಕಾರಕ; ಭ್ರಾಂತಿಯುಂಟುಮಾಡುವ.
  • ಮರುಳುಗೊಳಿಸುವ: illusory peace ಭ್ರಾಮಕ ಶಾಂತಿ.
  • ಪ್ರಾತಿಭಾಸಿಕ; ಮಾಯಾಸ್ವರೂಪದ; ಭ್ರಾಂತಿ ಸ್ವರೂಪದ; ಮಿಥ್ಯೆಯಾದ; ಭ್ರಾಮಕವಾದ.

  • illustrate
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
  • ಸ್ಪಷ್ಟಪಡಿಸು; ವಿವರಿಸು; ವಿಶದಗೊಳಿಸು: illustrated the new theory by references to what was already known ಆಗಲೇ ಗೊತ್ತಿದ್ದ ವಿಷಯದ ಉಲ್ಲೇಖಗಳ ಮೂಲಕ ಹೊಸ ಸಿದ್ಧಾಂತವನ್ನು ವಿವರಿಸಿದನು.
  • ಉದಾಹರಣೆ ಕೊಡು; ದೃಷ್ಟಾಂತ ಕೊಡು; ನಿದರ್ಶಿಸು; ಉದಾಹರಣೆಗಳಿಂದ ಸ್ಪಷ್ಟಪಡಿಸು: gave many examples to illustrate his lecture ತನ್ನ ಉಪನ್ಯಾಸವನ್ನು ಸ್ಪಷ್ಟ ಪಡಿಸಲು ಅನೇಕ ಉದಾಹರಣೆಗಳನ್ನು ನೀಡಿದನು.
  • (ವರ್ಣನೆ ಮೊದಲಾದವನ್ನು) ಸಚಿತ್ರವಾಗಿ ವಿವರಿಸು; (ರೇಖಾ) ಚಿತ್ರಗಳಿಂದ ವಿಶದೀಕರಿಸು: an illustrated textbook ಸಚಿತ್ರ ಪಠ್ಯಪುಸ್ತಕ.
  • (ಪುಸ್ತಕ, ವರ್ತಮಾನಪತ್ರಿಕೆ, ಮೊದಲಾದವನ್ನು) ಚಿತ್ರೀಕರಿಸು; ಚಿತ್ರಗಳಿಂದ ಅಲಂಕರಿಸು, ಅಂದಗೊಳಿಸು.

  • illustration
    ನಾಮವಾಚಕ
  • ಸ್ಪಷ್ಟನೆ; ವಿವರಣೆ; ಸ್ಪಷ್ಟಪಡಿಸುವುದು; ವಿಶದೀಕರಣ; ವಿಶದಗೊಳಿಸುವುದು.
  • ಉದಾಹರಣ; ದೃಷ್ಟಾಂತ ಕೊಡುವುದು.
  • ಸಚಿತ್ರ ವಿವರಣೆ.
  • ಉದಾಹರಣೆ; ದೃಷ್ಟಾಂತ; ನಿದರ್ಶನ: gave an illustration of what he meant ಅವನ ಅರ್ಥವೇನೆಂಬುದರ ದೃಷ್ಟಾಂತವನ್ನು ಕೊಟ್ಟನು.
  • (ಪುಸ್ತಕದಲ್ಲಿ ಯಾ ಪತ್ರಿಕೆಯ ಲೇಖನದಲ್ಲಿ) ವಿವರಣಾತ್ಮಕ ಚಿತ್ರ.

  • illustrative
    ಗುಣವಾಚಕ
  • ಸ್ಪಷ್ಟಪಡಿಸುವ; ವಿವರಿಸುವ; ವಿವರಣಾತ್ಮಕ; ವಿಶದಗೊಳಿಸುವ; ವಿಶದೀಕರಿಸುವ: plenty of illustrative material ಬೇಕಾದಷ್ಟು ವಿವರಣಾತ್ಮಕ ಸಾಮಗ್ರಿ.
  • ಉದಾಹರಣ ರೂಪದ; ದೃಷ್ಟಾಂತ ರೂಪದ.

  • illustratively
    ಕ್ರಿಯಾವಿಶೇಷಣ
  • ಸ್ಪಷ್ಟಪಡಿಸುವ ರೀತಿಯಲ್ಲಿ; ವಿವರಣಾತ್ಮಕವಾಗಿ.
  • ಉದಾಹರಣೆಯಾಗಿ; ದೃಷ್ಟಾಂತ ರೂಪದಲ್ಲಿ.

  • illustrator
    ನಾಮವಾಚಕ
  • ವಿವರಣಕಾರ; ಸ್ಪಷ್ಟಪಡಿಸುವವನು; ವಿವರಿಸುವವನು; ವಿಶದಗೊಳಿಸುವವನು.
  • ದೃಷ್ಟಾಂತಕಾರ; ಉದಾಹರಣಕಾರ.
  • ಸಚಿತ್ರಕಾರ; ಸಚಿತ್ರವಾಗಿ ವಿವರಿಸುವವ; ಚಿತ್ರಾಲಂಕರಣಗಾರ; ಚಿತ್ರಾಲಂಕಾರಕ; ಚಿತ್ರಾಲಂಕಾರಗಾರ; ಪುಸ್ತಕ, ವರ್ತಮಾನ ಪತ್ರಿಕೆ, ಮೊದಲಾದವನ್ನು ಚಿತ್ರಗಳಿಂದ ಅಲಂಕರಿಸುವವ.

  • illustrious
    ಗುಣವಾಚಕ
    ಹೆಸರುವಾಸಿಯಾದ; ಹೆಸರಾಂತ; ನಾಮಾಂಕಿತ; ಸುಪ್ರಸಿದ್ಧ; ಪ್ರಖ್ಯಾತ; ಖ್ಯಾತಿವಂತ: the illustrious leader of the people ಪ್ರಖ್ಯಾತ ಜನನಾಯಕ.

    illustriously
    ಕ್ರಿಯಾವಿಶೇಷಣ
    ಹೆಸರುವಾಸಿಯಾಗಿ; ಸುಪ್ರಸಿದ್ಧವಾಗಿ.


    logo