logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

eelspear
ನಾಮವಾಚಕ
ಹಾವುಮೀನು ಈಟಿ; ಹಾವುಮೀನನ್ನು ಚುಚ್ಚಿ ಹಿಡಿಯುವ ಈಟಿ, ಭರ್ಜಿ.

eelworm
ನಾಮವಾಚಕ
ಹಾವುಮೀನುಹುಳು; ಗಿಡಗಳಿಗೆ ರೋಗತರುವ, ಸ್ವತಂತ್ರವಾಗಿ ಬದುಕುವ ಯಾ ಗಿಡಗಳ ಪರೋಪಜೀವಿಯಾಗಿರುವ, ತಂತುವಿನಾಕಾರದ ತೆಳು ಕ್ರಿಮಿ.

eely
ಗುಣವಾಚಕ
  • ಹಾವುಮೀನಿನಂಥ.
  • (ರೂಪಕವಾಗಿ) ನುಣುಚಿಹೋಗುವ; ಜಾರಿಕೊಳ್ಳುವ.

  • eerie
    ಗುಣವಾಚಕ
  • (ಭೂತ, ಪ್ರೇತ, ಮೊದಲಾದವುಗಳಲ್ಲಿನ) ಮೂಢನಂಬಿಕೆಯಿಂದ ಅಂಜಿಸುವ, ಹೆದರಿಸುವ.
  • ಮಂಕು ಕವಿದ; ಕತ್ತಲು ಕವಿದ.
  • ವಿಚಿತ್ರ; ವಿಲಕ್ಷಣ; ವಿಜಾತೀಯ; ವಿಕಟ; ವಿಕರಾಳ; ಭಯ ಹುಟ್ಟಿಸುವ.

  • eerily
    ಕ್ರಿಯಾವಿಶೇಷಣ
    ವಿಚಿತ್ರವಾಗಿ; ವಿಲಕ್ಷಣವಾಗಿ; ವಿಕಟವಾಗಿ; ವಿಕರಾಳವಾಗಿ; ಭಯವನ್ನು ಹುಟ್ಟಿಸುವಂತೆ.

    eeriness
    ನಾಮವಾಚಕ
  • ಅವರ್ಣನೀಯ ಭೀತಿ.
  • ವಿಕರಾಳತೆ.

  • eery
    ಗುಣವಾಚಕ
    = eerie.

    ef-
    ಪೂರ್ವಪ್ರತ್ಯಯ
    f ಹಿಂದೆ 1ex- ತಾಳುವ ರೂಪ.

    eff
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ ಪದಗುಚ್ಛ
    (eff off = $^1$fuck ( ಅಕರ್ಮಕ ಕ್ರಿಯಾಪದ ಸಹ).) fuck ಯಾ ಅದೇ ರೀತಿಯ ನಿಷಿದ್ಧಪದವನ್ನು ಹೇಳು, ಆಡು. eff and blind ತೀಕ್ಷ್ಣವಾದ ಬೈಗುಳಗಳನ್ನು ಬಳಸು.

    efface
    ಸಕರ್ಮಕ ಕ್ರಿಯಾಪದ
  • ಅಳಿಸು; ಅಳಿಸಿಹಾಕು; ತೊಡೆದುಹಾಕು; ಉಜ್ಜಿಬಿಡು; ಒರೆಸು.
  • (ರೂಪಕವಾಗಿ) (ನೆನಪು ಮೊದಲಾದವನ್ನು) ತೊಡೆದುಹಾಕು; ಅಳಿಸಿಕೊ; ನಿರ್ಮೂಲಮಾಡು; ನಾಶಗೊಳಿಸು; ಹುಟ್ಟಡಗಿಸು; ನಿರ್ನಾಮಮಾಡು; ಕುರುಹೇ ಇಲ್ಲದಂತೆ ಮಾಡು.
  • ಅತಿಶಯವೆನ್ನಿಸು; ಮಿಗು; ಮೀರು; ಕಣ್ಮರೆಮಾಡು; ಮಸಕುಗೊಳಿಸು; ಮರೆಮಾಡು.
  • (ಆತ್ಮಾರ್ಥಕ) ಕಡೆಗಣಿಸಿಕೊ; ಅಲ್ಪನೆಂದು ಭಾವಿಸು, ಪರಿಗಣಿಸು: he has completely effaced himself ಅವನು ತನ್ನನ್ನು ಪೂರ್ತಿ ಕಡೆಗಣಿಸಿಕೊಂಡಿದ್ದಾನೆ.


  • logo