logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

day letter
ನಾಮವಾಚಕ
(ಅಮೆರಿಕನ್‍ ಪ್ರಯೋಗ) ಹಗಲು ತಂತಿ; ಕಡಿಮೆ ಆದ್ಯತೆಯುಳ್ಳ ಹಗಲಿನಲ್ಲಿ ಕಳಿಸುವ ತಂತಿ ಸುದ್ದಿ.

day lily
ನಾಮವಾಚಕ
ಹಗಲು ಲಿಲಿ (ಗಿಡ); ಹೆಮರಕ್ಯಾಲಿಸ್‍ ಕುಲದ, ಒಂದೆ ದಿನಕ್ಕೆ ಬಾಡಿ ಹೋಗುವ, ಹಳದಿ ಯಾ ಕಿತ್ತಳೆ ಬಣ್ಣದ, ಲಿಲಿಯಂಥ ಹೂಗಳನ್ನು ಬಿಡುವ ಗಿಡ.

day nursery
ನಾಮವಾಚಕ
  • ಶಿಶುಪಾಲನ ಕೊಠಡಿ; ಹಗಲಿನಲ್ಲಿ ಮಕ್ಕಳನ್ನು ನೋಡಿಕೊಳ್ಳುವ ಕೋಣೆ.
  • ಶಿಶುಪಾಲನ ಕೇಂದ್ರ; ತಾಯಂದಿರು ಕೆಲಸಕ್ಕೆ ಹೋದಾಗ ಮಕ್ಕಳನ್ನು ನೋಡಿಕೊಳ್ಳುವ ಜಾಗ.

  • day release
    ನಾಮವಾಚಕ
    ವಿನಾಯಿತಿ ದಿನ; ಶಿಕ್ಷಣಕ್ಕಾಗಿ ನೌಕರರಿಗೆ ಕೆಲಸದಿಂದ ಬಿಡುವು ಕೊಟ್ಟಿರುವ ದಿನ(ಗಳು).

    day shift
    ನಾಮವಾಚಕ
    ಹಗಲು ಪಾಳಿ; ಹಗಲು ಸರದಿ; ರಾತ್ರಿಯ ಪಾಳಿಯಲ್ಲದ, ದಿನದ ಸರದಿ.

    day sight
    ನಾಮವಾಚಕ
    ಹಗಲುದೃಷ್ಟಿ; ಹಗಲಿನಲ್ಲಿ ಮಾತ್ರ ಚೆನ್ನಾಗಿ ಕಾಣಿಸುವ (ದೋಷಯುಕ್ತ) ಕಣ್ಣು; ಹಗಲುಗಣ್ಣು.

    day-bed
    ನಾಮವಾಚಕ
    ಹಗಲುಹಾಸಿಗೆ; ಅಹಶ್ಯಯ್ಯೆ; ಮಗುವುದಕ್ಕಾಗಿ ಯಾ ವಿಶ್ರಾಂತಿಗಾಗಿ ಹಗಲು ಹೊತ್ತು ಬಳಸುವ ಹಾಸಿಗೆ.

    day-boarder
    ನಾಮವಾಚಕ
    ಹಗಲುವಾಸಿ; ಪಾಠಶಾಲೆಯಲ್ಲಿ ಊಟ ಮಾತ್ರ ಮಾಡಿ, ಮಲಗಲು ಮನೆಗೆ ಹೋಗುವ ವಿದ್ಯಾರ್ಥಿ.

    day-book
    ನಾಮವಾಚಕ
    ರೋಜು ಪುಸ್ತಕ; ದಿನವಹಿ; ಲೆಕ್ಕದ ಪುಸ್ತಕಕ್ಕೆ ಆಮೇಲೆ ವರ್ಗಾಯಿಸಲು ಪ್ರತಿ ದಿನದ, ಮುಖ್ಯವಾಗಿ ಮಾರಾಟದ, ಜಮಾ ಖರ್ಚುಗಳೆಲ್ಲವನ್ನೂ ಆ ಕ್ಷಣದಲ್ಲಿಯೇ ದಾಖಲು ಮಾಡಿಕೊಳ್ಳುವ ದಿನಪುಸ್ತಕ.

    day-boy
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) ಹಗಲು ಹುಡುಗ; ಹಗಲು ವಿದ್ಯಾರ್ಥಿ; ವಸತಿಶಾಲೆಯಲ್ಲಿ ಕಲಿಯುತ್ತಿದ್ದರೂ ಮನೆಯಲ್ಲಿ ವಾಸವಿರುವ ವಿದ್ಯಾರ್ಥಿ.


    logo