logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

calligraphist
ನಾಮವಾಚಕ
=calligrapher.

calligraphy
ನಾಮವಾಚಕ
  • ಅಂದಬರೆಹ; ಸುಂದರಲಿಪಿ; ಸುಂದರವಾದ–ಹಸ್ತಾಕ್ಷರ, ಲಿಪಿ.
  • ಕೈಬರಹ; ಹಸ್ತಾಕ್ಷರ.
  • ಚಿತ್ರಾಕ್ಷರ; ಚಿತ್ತಾರ ಬರೆಹ; ಆಲಂಕಾರಿಕ ಕೈಬರೆಹ.
  • ಸುಂದರ ಲಿಪಿಗಾರಿಕೆ.

  • calling
    ನಾಮವಾಚಕ
  • ಕರೆಯುವಿಕೆ; ಕೂಗು.
  • (ವ್ಯಕ್ತಿಯನ್ನು ಕರೆಯುವ ಯಾ ಸಭೆಯನ್ನು ಸೇರಿಸುವ) ಕರೆ; ಕೂಗು; ಆಹ್ವಾನ; ಆಮಂತ್ರಣ.
  • (ಕರ್ತವ್ಯ, ಕ್ರಿಯೆ ಮೊದಲಾದವುಗಳ ಕಡೆಗೆ ಇರುವ ಬಲವಾದ) ಒಳಕರೆ; ಒಳಚೋದನೆ; ಪ್ರೇರಣೆ; ಒಲವು; ಪ್ರಚೋದನೆ; ಪ್ರವೃತ್ತಿ.
  • ದೈವ ಪ್ರೇರಣೆ; ಮುಕ್ತಿಗಾಗಿ ಯಾ ಯಾವನೋ ಒಬ್ಬ ವ್ಯಕ್ತಿಗಾಗಿ ಯಾ ಯಾವುದಾದರೂ ಒಂದು ಧ್ಯೇಯಕ್ಕಾಗಿ ತನ್ನನ್ನು ಅರ್ಪಿಸಿಕೊಳ್ಳುವಂತೆ ಬರುವ–ದೈವೀಪ್ರೇರಣೆ ಯಾ ಅಂತಃಪ್ರಚೋದನೆ.
  • ಕಸುಬು; ವೃತ್ತಿ; ಉದ್ಯೋಗ.
  • ವೃತ್ತಿವರ್ಗ; ಉದ್ಯೋಗವರ್ಗ; ಒಂದು ಗೊತ್ತಾದ ಉದ್ಯೋಗದವರು ಯಾ ವೃತ್ತಿಯವರು.

  • calling-card
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) =visiting-card.

    calliope
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) ಆವಿಸಿಲ್ಪಿ; ಹಬೆಸಿಲ್ಪಿ; ಆರ್ಗನ್‍ ವಾದ್ಯದಂಥ, ಕೀಲಿಕೈ ಮಣೆಯಿಂದ ವಾದನ ಮಾಡಬಹುದಾದ, ಆವಿಯ ಮೂಲಕ ಸ್ವರ ಹೊರಡಿಸುವ ಸಿಲ್ಪಿಗಳ–ತಂಡ, ಶ್ರೇಣಿ.

    calliper
    ನಾಮವಾಚಕ
  • (ಬಹುವಚನದಲ್ಲಿ) ಕ್ಯಾಲಿಪರು; ವ್ಯಾಸಮಾಪಿ; ವ್ಯಾಸಮಾಪಕ; ಕೊಂಕುಕೈವಾರ; ಗೋಳ, ಉರುಳೆ ಮೊದಲಾದವುಗಳ ಒಳ ಮತ್ತು ಹೊರ ವ್ಯಾಸಗಳನ್ನು ಯಾ ಸಮಾನಾಂತರ ತಳಗಳಿಗಿರುವ ಅಂತರ ಮೊದಲಾದವನ್ನು ಅಳೆಯಲು ಬಳಸುವ ದ್ವಿಬಾಹು ಸಾಧನ. Figure: callipers
  • =calliper splint.

  • calliper
    ಸಕರ್ಮಕ ಕ್ರಿಯಾಪದ
    ವ್ಯಾಸಮಾಪಿಯಿಂದ ಅಳೆ; ಕೊಂಕುಕೈವಾರದಿಂದ ಅಳೆ.

    calliper compasses
    ನಾಮವಾಚಕ
    =1calliper(1).

    calliper splint
    ನಾಮವಾಚಕ
    ಕಾಲಿಗೆ ಜೋಡಿಸಿಕೊಳ್ಳುವ–ಲೋಹದ ಆಸರೆ, ಲೋಹಾಧಾರ.

    calliper square
    ನಾಮವಾಚಕ
    ಚೌಕವ್ಯಾಸಮಾಪಿ; ಚದರ ಕ್ಯಾಲಿಪರ್‍; ಅಳತೆಗುರುತು ಹಾಕಿರುವ ದಂಡಕ್ಕೆ ಲಂಬವಾಗಿರುವಂತೆ ಬಾಹುಗಳನ್ನು ಅಳವಡಿಸಲಾದ, ಒಂದು ಯಾ ಎರಡು ಬಾಹುಗಳೂ ಚಲಿಸುವಂಥ ವ್ಯವಸ್ಥೆಯಿರುವ ಕ್ಯಾಲಿಪರು.


    logo