ಬೇಕರಿ; ಬ್ರೆಡ್ ಅಂಗಡಿ; ಬ್ರೆಡ್ ಮನೆ; ಬ್ರೆಡ್, ಕೇಕ್, ಮೊದಲಾದವುಗಳನ್ನು ಸುಡುವ, ಮಾಡುವ ಹಾಗೂ ಮಾರುವ ಮನೆ.
bakestone
ನಾಮವಾಚಕ
ಬ್ರೆಡ್ ಕಾವಲಿ; ಬ್ರೆಡ್ಡನ್ನು ಸುಡುವ ಕಲ್ಲಿನ ಯಾ ಕಬ್ಬಿಣದ ಹಲಗೆ.
Bakewell
ನಾಮವಾಚಕ
= Bakewell tart.
Bakewell tart
ನಾಮವಾಚಕ
ಬಾದಾಮಿಯ ಹಿಟ್ಟಿಗೆ ಜ್ಯಾಮ್ ಸವರಿ ಬೇಯಿಸಿ ತಯಾರಿಸಿದ ಸಿಹಿ ಭಕ್ಷ್ಯ.
baking
ನಾಮವಾಚಕ
ಬ್ರೆಡ್ – ಬೇಯಿಸುವುದು, ಸುಡುವುದು.
ಒಂದೊಬ್ಬೆ; ಒಂದು ಬಾರಿ ಬೇಯಿಸಿದ ಒಟ್ಟು ಬ್ರೆಡ್ಡು.
baking-powder
ನಾಮವಾಚಕ
ಒದಗುಪುಡಿ; ಬ್ರೆಡ್ಡನ್ನು ಉಬ್ಬಿಸುವುದಕ್ಕೆ ಹುದುಗಿಗೆ ಬದಲು ಬಳಸುವ ಸೋಡಿಯಂ ಬೈಕಾರ್ಬೊನೇಟ್, ಟಾರ್ಟರ್ ಕೆನೆ ಮೊದಲಾದವುಗಳ ಮಿಶ್ರಣ, ಪುಡಿ.
baking-soda
ನಾಮವಾಚಕ
ಅಡಿಗೆ ಸೋಡ; ಸೋಡಿಯಂ ಬೈಕಾರ್ಬೊನೇಟ್.
baklava
ನಾಮವಾಚಕ
(ಟರ್ಕಿ) ಬಾಕ್ಲವ; ತೆಳುವಾದ ಪೊರೆಯಂತಿರುವ ಪಿಷ್ಟಭಕ್ಷ್ಯ; ಕಡಲೆಕಾಯಿಬೀಜ, ಜೇನುತುಪ್ಪ ಯಾ ಸಕ್ಕರೆ ಪಾಕವನ್ನು ಹಾಕಿ ಮಾಡಿದ, ಸಾಮಾನ್ಯವಾಗಿ ವಜ್ರಾಕಾರದಲ್ಲಿ ಕತ್ತರಿಸಿದ, ಊಟವಾದ ಮೇಲೆ ಬಡಿಸುವ ಒಂದು ಸಿಹಿಭಕ್ಷ್ಯ.