ನೋಯಿಸು; ನೋವುಂಟುಮಾಡು; ನೋವಾಗುವಂತೆ, ಹಾನಿಯಾಗುವಂತೆ–ವರ್ತಿಸು: to abuse a horse by overworking ಮಿತಿಮೀರಿ ದುಡಿಸಿ ಕುದುರೆಗೆ ನೋವಾಗುವಂತೆ ಮಾಡು. abuse one’s eye sight by reading in dim light ಮಂದ ಬೆಳಕಿನಲ್ಲಿ ಓದುವುದರ ಮೂಲಕ ದೃಷ್ಟಿಗೆ ಹಾನಿಮಾಡಿಕೊ.
abuse
ನಾಮವಾಚಕ
ದುರುಪಯೋಗ: an abuse of authority ಅಧಿಕಾರದ ದುರುಪಯೋಗ.
ಅನ್ಯಾಯ; ಕೆಟ್ಟ ಪದ್ಧತಿ; ದುರಾಚಾರ: the buying of votes and other abuses ಓಟುಗಳನ್ನು ಕೊಳ್ಳುವುದು ಮೊದಲಾದ (ಚುನಾವಣೆಯ) ದುರಾಚಾರಗಳು.
ಬೈಗುಳು; ದೂಷಣೆ; ನಿಂದೆ.
ಅಪಪ್ರಯೋಗ: to call it a democracy is an abuse of the term ಅದನ್ನು ಪ್ರಜಾಪ್ರಭುತ್ವವೆಂದು ಕರೆಯುವುದು ಆ ಶಬ್ದದ ಅಪಪ್ರಯೋಗ.
abusive
ಗುಣವಾಚಕ
(ಅಪಶಬ್ದಗಳಲ್ಲಿ) ಬೈಯುವ; ನಿಂದಿಸುವ.
ದುರುಪಯೋಗದ.
abusively
ಕ್ರಿಯಾವಿಶೇಷಣ
ನಿಂದಾತ್ಮಕವಾಗಿ.
ದುರುಪಯೋಗದಿಂದ.
abusiveness
ನಾಮವಾಚಕ
ಬೈಗುಳತನ; ನಿಂದಕತೆ.
abut
ಕ್ರಿಯಾವಿಶೇಷಣ
ಸಕರ್ಮಕ ಕ್ರಿಯಾಪದ
ಅಕರ್ಮಕ ಕ್ರಿಯಾಪದ
ತಗುಲಿಕೊಂಡಿರು; ಅಂಟಿಕೊಂಡಿರು: two plots that abut each other ಒಂದಕ್ಕೊಂದು ತಗುಲಿಕೊಂಡಿರುವ ಎರಡು ನಿವೇಶನಗಳು.
ಒರಗಿಸು; ಆನಿಸು; ಒರಗಿರುವಂತೆ ಮಾಡು: abut timber against a post ಮರವನ್ನು ಕಂಬಕ್ಕೆ ಒರಗಿಸು.
abutment
ನಾಮವಾಚಕ
(ಮುಖ್ಯವಾಗಿ ಕಟ್ಟಡದಲ್ಲಿ) ಕೊನೆಗೆ ಕೊನೆ ಸೇರಿಕೆ.
ಊರೆ; ಒದೆ; ಊತು; ಆನಿಕೆ; ಪಕ್ಕದ ಆಧಾರ.
ಕಮಾನಿನ ಗುದ್ದುಗಂಬ; ಒಂದು ಕಮಾನಿಗೆ ಯಾ ಸೇತುವೆಗೆ ಆಧಾರವಾಗಿರುವ ಭಾಗ.
ಕಮಾನಿನ ಪಾಳಿ; ಕಮಾನೂ ಅದರ ಆಧಾರವೂ ಸಂಧಿಸುವ ಸ್ಥಳ.
abutter
ನಾಮವಾಚಕ
(ನ್ಯಾಯಶಾಸ್ತ್ರ) ನೆರೆಮಾಲೀಕ; ಪಕ್ಕದ ಜಮೀನು, ಮನೆ ಮೊದಲಾದ ಸ್ವತ್ತಿನ ಮಾಲೀಕ, ಒಡೆಯ.