ವಿಶ್ವವಿದ್ಯಾನಿಲಯದ ಸಮವಸ್ತ್ರ; ವಿಶ್ವವಿದ್ಯಾನಿಲಯದ (ಲಾಂಛನವಾದ) ಉಡುಪು.
academic dress
ನಾಮವಾಚಕ
ಶಾಲೆ ಉಡುಪು; ಶಾಲೆ ಸಮವಸ್ತ್ರ; ವಿದ್ಯಾಸಂಸ್ಥೆಯ ಲಾಂಛನವಾದ ಉಡುಪು.
academic freedom
ನಾಮವಾಚಕ
ಅಧ್ಯಾಪನ ಸ್ವಾತಂತ್ರ್ಯ; ಬೋಧನ ಸ್ವಾತಂತ್ರ್ಯ; ಸತ್ಯವೆಂದು ಕಂಡದ್ದನ್ನು ಯಾವುದೇ ರೀತಿಯ ಅಡ್ಡಿ, ಸ್ಥಾನ ಹಾನಿ ಯಾ ವಿರುದ್ಧ ಕ್ರಮಗಳ ಹೆದರಿಕೆಯಿಲ್ಲದೆ ಅಧ್ಯಾಪಕರು ಬೋಧಿಸುವ ಸ್ವಾತಂತ್ರ್ಯ.
ಶಿಕ್ಷಣ ಸ್ವಾತಂತ್ರ್ಯ; ಅಧ್ಯಯನ ಸ್ವಾತಂತ್ರ್ಯ; ಯಾವುದೇ ರೀತಿಯ ಅಡ್ಡಿ ಅಡಚಣೆಗಳಿಲ್ಲದೆ ತನಗೆ ಬೇಕಾದ ವಿಷಯವನ್ನು ಕಲಿಯಲು ವಿದ್ಯಾರ್ಥಿಗೆ ಇರುವ ಸ್ವಾತಂತ್ರ್ಯ.
academician
ನಾಮವಾಚಕ
ಅಕಾಡೆಮಿ ಸದಸ್ಯ; ವಿದ್ವನ್ಮಂಡಲದ ಯಾ ಕಲಾಸಂಸ್ಥೆಯ ಸದಸ್ಯ.
ಸಂಪ್ರದಾಯವಾದಿ: ತತ್ತ್ವಶಾಸ್ತ್ರ, ಕಲೆ ಯಾ ಸಾಹಿತ್ಯದಲ್ಲಿ ಸಂಪ್ರದಾಯವನ್ನು ಪಾಲಿಸುವವನು ಯಾ ಸಮರ್ಥಿಸುವವನು.
academicism
ನಾಮವಾಚಕ
(ಕಲೆ, ಸಾಹಿತ್ಯ, ಮೊದಲಾದವುಗಳಲ್ಲಿ) ಸಾಂಪ್ರದಾಯಿಕತೆ.
academic preparation
ನಾಮವಾಚಕ
= academic training.
academics
ನಾಮವಾಚಕ
ಜಿಜ್ಞಾಸೆ; ಕೇವಲ ತಾತ್ತ್ವಿಕ, ಚಿಂತನರೂಪದ ಚರ್ಚೆ, ವಾದ.
=academicals.
academic training
ನಾಮವಾಚಕ
ಶೈಕ್ಷಣಿಕ–ತರಬೇತು, ತಯಾರಿ; ಮುಖ್ಯವಾಗಿ ಕಾಲೇಜು ಯಾ ವಿಶ್ವವಿದ್ಯಾನಿಲಯದಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಪಡೆದ ಶಿಕ್ಷಣ, ತರಬೇತು, ಸಿದ್ಧತೆ.