logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

zebra
ನಾಮವಾಚಕ
ಜೀಬ್ರ; ಕುದುರೆ ಮತ್ತು ಕತ್ತೆಗಳಂಥ, ಮೈಮೇಲೆ ಬಿಳಿ ಮತ್ತು ಕಪ್ಪು ಪಟ್ಟೆಗಳಿರುವ ಚತುಷ್ಪಾದಿ.

zebra
ಗುಣವಾಚಕ
ಜೀಬ್ರಪಟ್ಟೆಯ; ಒಂದಾದ ಮೇಲೆ ಒಂದರಂತೆ ಕಪ್ಪು ಮತ್ತು ಬಿಳಿ ಪಟ್ಟೆಗಳು ಬರುವ.

zebra crossing
ನಾಮವಾಚಕ
(ಬ್ರಿಟಿಷ್‍ ಪ್ರಯೋಗ) ಜೀಬ್ರ ದಾಟು; ಪಾದಚಾರಿಗಳು ರಸ್ತೆ ದಾಟುವ ಸ್ಥಳದಲ್ಲಿ ನೆಲದ ಮೇಲೆ ಬರೆದ ದೊಡ್ಡ ಅಡ್ಡಪಟ್ಟೆಗಳು.

zebrine
ಗುಣವಾಚಕ
ಜೀಬ್ರದ; ಜೀಬ್ರದಂಥ.

zebu
ನಾಮವಾಚಕ
(ಇಂಡಿಯಾ, ಪೂರ್ವ ಆಹ್ರಿಕಾ, ಮೊದಲಾದ ಕಡೆಗಳಲ್ಲಿನ) ಅಗಲವಾದ ಗಂಗೆದೊಗಲು ಮತ್ತು ಹಿಣಿಲು ಉಳ್ಳ ಎತ್ತು.

Zech.
ಸಂಕ್ಷಿಪ್ತ
Zechariah (ಬೈಬಲಿನ ಹಳೆಯ ಒಡಂಬಡಿಕೆ).

zed
ನಾಮವಾಚಕ
(ಬ್ರಿಟಿಷ್‍ ಪ್ರಯೋಗ) ಸೆಡ್‍(Z) (ಅಕ್ಷರ).

zedoary
ನಾಮವಾಚಕ
ಶತಾವರಿ; (ಔಷಧ, ಸುವಾಸನಾದ್ರವ್ಯ, ಬಣ್ಣ ಹಾಕುವುದು, ಮೊದಲಾದವಕ್ಕೆ ಬಳಸುವ) ಈಸ್ಟ್‍ ಇಂಡೀಸ್‍ನ ಕೆಲವು ಗಿಡಗಳ ಬೇರಿನಿಂದ ತಯಾರಿಸಿದ, ಶುಂಠಿಯಂಥ ವಸ್ತು.

zee
ನಾಮವಾಚಕ
(ಅಮೆರಿಕನ್‍ ಪ್ರಯೋಗ) Z (ಸೆಡ್‍ ಅಕ್ಷರ).

Zeeman effect
ನಾಮವಾಚಕ
(ಭೌತವಿಜ್ಞಾನ) ಸೆಮನ್‍ ಪರಿಣಾಮ; ರೋಹಿತದಲ್ಲಿನ ಗೆರೆಯು ಕಾಂತಕ್ಷೇತ್ರದ ಪ್ರಭಾವದಿಂದ ಸೀಳಿ ಹಲವು ಗೆರೆಗಳಾಗಿ ಕಾಣಿಸುವುದು.


logo