ನಕಲು ತೆಗೆಯಬೇಕಾದ ಪತ್ರದ ಅಥವಾ ದಾಖಲೆಯ ಬಿಂಬದಿಂದ ಬರುವ ಬೆಳಕಿಗೆ ಒಡ್ಡಿದ ಮೈಮೇಲೆ ವಿದ್ಯುದಾವೇಶವಿರುವ ಕಡೆಯಲ್ಲೆಲ್ಲ ಕಪ್ಪು ಅಥವಾ ಬಣ್ಣದ ಪುಡಿ ಅಂಟಿಕೊಳ್ಳುವ ಏರ್ಪಾಟಿರುವ, ಒಣನಕಲು ಅಥವಾ ಪ್ರತಿ ತಯಾರಿಕಾ ವಿಧಾನ.
xerophile
ನಾಮವಾಚಕ
ಮರುಸಸ್ಯ; ಶುಷ್ಕಸಸ್ಯ; ಅತ್ಯಂತ ಶುಷ್ಕ ವಾತಾವರಣದಲ್ಲಿ, ಮುಖ್ಯವಾಗಿ ಮರುಭೂಮಿಯಲ್ಲಿ, ಬೆಳೆಯಬಲ್ಲ ಸಸ್ಯ.
xerophilous
ಗುಣವಾಚಕ
(ಸಸ್ಯದ ವಿಷಯದಲ್ಲಿ) ಶುಷ್ಕಪ್ರಿಯ; ಅತ್ಯಂತ ಒಣ ಪರಿಸರಕ್ಕೆ ಒಗ್ಗಿರುವ ಅಥವಾ ಪರಿಸರದಲ್ಲಿ ಬೆಳೆಯುವ.
xerophyte
ನಾಮವಾಚಕ
= xerophile.
Xerox
ನಾಮವಾಚಕ
Proprietary name
(ಒಂದು ರೀತಿಯ) ಶುಷ್ಕರೇಖನ ರೀತಿಯಲ್ಲಿ ಪ್ರತಿ ತೆಗೆಯುವುದು; ಜೆರಾಕ್ಸ್ ಪ್ರತಿ ತೆಗೆಯುವುದು.
ಜೆರಾಕ್ಸ್ ಪ್ರತಿ; ಶುಷ್ಕ ರೇಖನ ಪ್ರತಿ.
ಸೆರಾಕ್ಸ್ ಅಥವಾ ಶುಷ್ಕಲೇಖನ ಯಂತ್ರ.
xerox
ಸಕರ್ಮಕ ಕ್ರಿಯಾಪದ
ಸೆರಾಕ್ಸ್ ಪ್ರತಿ, ನಕಲು ತೆಗೆ; ಶುಷ್ಕರೇಖನ ಪ್ರತಿ ಮಾಡು.
Xhosa
ನಾಮವಾಚಕ
(ಬಹುವಚನ ಅದೇ ಅಥವಾ Xhosas).
ಕೌಸಾ ಭಾಷೆ; ದಕ್ಷಿಣ ಆಹ್ರಿಕದ ಕೇಪ್ ಪ್ರಾಂತದ ಬಂಟು ಜನರ ಭಾಷೆ.