logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

tabetic
ಗುಣವಾಚಕ
(ಮುಖ್ಯವಾಗಿ ಮಿದುಳುಬಳ್ಳಿಯ) ಕ್ಷಯ ಹಿಡಿದ ಯಾ ಆ ರೋಗಕ್ಕೆ ಸಂಬಂಧಿಸಿದ ಯಾ ಆ ರೋಗದಿಂದ ಕೃಶವಾದ ಅಂಗಗಳುಳ್ಳ.

tabinet
ನಾಮವಾಚಕ
ತೆರೆಯಿಡಿಸಿದ, ತರಂಗ ರಚನೆಯ–ರೇಷ್ಮೆಮಿಶ್ರಿತ ಉಣ್ಣೆಬಟ್ಟೆ.

tabla
ನಾಮವಾಚಕ
(ಭಾರತೀಯ ಸಂಗೀತ) ತಬಲ; ಮೃದಂಗ.

tablature
ನಾಮವಾಚಕ
  • (ಸಂಗೀತ) (ಮುಖ್ಯವಾಗಿ ತಂತಿಯ ಮೀಟು, ತಾಳ ಮತ್ತು ಸ್ವರಗಳನ್ನು ವಿನಾ ಇತರ ಅಂಶಗಳನ್ನು ಸೂಚಿಸುತ್ತಿದ್ದ) ಒಂದು ಪ್ರಾಚೀನ ಸ್ವರಪ್ರಸ್ತಾರ ಪದ್ಧತಿ.
  • (ಪ್ರಾಚೀನ ಪ್ರಯೋಗ) ಮಾನಸಿಕ ಚಿತ್ರ; ಕಣ್ಣಿಗೆ ಕಟ್ಟುವಂಥ ವರ್ಣನೆ.

  • table
    ನಾಮವಾಚಕ ಪದಗುಚ್ಛ
  • ಮೇಜು.
  • ಮೇಜು; ಪೀಠ; ನಿರ್ದಿಷ್ಟ ಉದ್ದೇಶಕ್ಕಾಗಿ ಬಳಸುವ ಚಪ್ಪಟೆ ತಲ: altar table ಬಲಿಪೀಠ; ಪೂಜೆಯ ಮೇಜು. bird table ಹಕ್ಕಿ ಕೂರುವ ಮೇಜು.
    1. (ಮನೆಯ) ಊ(ಕ್ಕೆ ಬಡಿಸುವ ಆಹಾರ); ಭೋಜನ: keeps a good table ಮನೆಯಲ್ಲಿ ನಿತ್ಯವೂ ಸೊಗಸಾದ ಊಟ ಏರ್ಪಡಿಸುತ್ತಾನೆ.
    2. ಭೋಜನಗೋಷ್ಠಿ; ಊಟ ಮೊದಲಾದವುಕ್ಕಾಗಿ ಮೇಜಿನ ಹತ್ತಿರ ಕುಳಿತಿರುವ ಜನರ ಗುಂಪು.
  • ಮೇಜು; ಕೆಲಸ ಮಾಡಲು ಯಾ ಯಂತ್ರವು ಕೆಲಸ ನಡೆಸಲು ಬಳಸುವ ಮೇಲ್ಮೈ, ಚಪ್ಪಟೆಭಾಗ.
  • (ಶಾಸನ ಕೆತ್ತಲು ಬಳಸುವ) ಕಲ್ಲಿನ ಯಾ ಮರದ ಫಲಕ, ಹಲಗೆ ಯಾ ಚಪ್ಪಡಿ.
  • ಫಲಕ ಲೇಖನ; ಹಲಗೆ ಬರಹ; ಇಂಥ ಫಲಕದ ಮೇಲಿನ ಲಿಖಿತ ವಿಷಯ.
  • = tableland.
  • (ವಾಸ್ತುಶಿಲ್ಪ)
    1. (ಮುಖ್ಯವಾಗಿ ಆಯತಾಕಾರದ) ಚಪ್ಪಟೆ ಮೇಲ್ಮೈ.
    2. ಕಾರ್ನೀಸು; ಸಮತಲದ ಅಲಂಕಾರ ಭಾಗ.
    1. ರತ್ನಗಳ ಮುಖ, ಪಟ್ಟೆ ಯಾ ಚಪ್ಪಟೆ ಮೇಲ್ಮೈ.
    2. ಎರಡು ಪಟ್ಟೆಯ ರತ್ನ; ಎರಡು ಚಪ್ಪಟೆ ಮುಖಗಳಿರುವ (ಕಡೆದ) ರತ್ನ.
  • ‘ಬ್ಯಾಕ್‍ಗ್ಯಾಮನ್‍’ ಆಟದ ಮಡಿಚು ಮೇಜಿನ ಪ್ರತಿ ಅರ್ಧ ಯಾ ಕಾಲು ಭಾಗ.
  • (‘ಬ್ರಿಡ್ಜ್‍’ ಆಟದಲ್ಲಿ) ಕಲ್ಪಿತ ಆಟಗಾರ.
  • (ಮುಖ್ಯವಾಗಿ ಅಂಕಣಗಳಲ್ಲಿ ಅಣಿಗೊಳಿಸಿದ)
    1. ಅಂಕಿ ಅಂಶ ಪಟ್ಟಿ; ಕೋಷ್ಟಕ; ತಃಖ್ತೆ: a table of contents ವಿಷಯಗಳ ಕೋಷ್ಟಕ.
    2. ಕೋಷ್ಟಕ ಯಾ ತಃಖ್ತೆಯಲ್ಲಿನ ವಿಷಯ.
    3. = $^1$multiplication table.

  • table
    ಸಕರ್ಮಕ ಕ್ರಿಯಾಪದ
  • (ಸಭೆಯಲ್ಲಿ ಚರ್ಚೆಗೆ ಯಾ ಪರ್ಯಾಲೋಚನೆಗೆ ಮಸೂದೆ ಮೊದಲಾದವನ್ನು) ಮಂಡಿಸು; ತರು.
  • ನಾವೆಯ ಹಾಯಿಯನ್ನು ಅಗಲವಾದ ಮಡಿಕೆಯಂಚಿನ ಪಟ್ಟಿಯಿಂದ ಬಪಡಿಸು.
  • (ವಿಷಯದ ಪರಿಶೀಲನೆಯನ್ನು) ಮುಂದೂಡು; ಮುಂದಕ್ಕೆ ಹಾಕು.

  • table d'hote
    ನಾಮವಾಚಕ ಪದಗುಚ್ಛ
    ನಿಗದಿತ ಭೋಜನ; ನಿಗದಿ ಊಟ; (ಮುಖ್ಯವಾಗಿ ಹೋಟೆಲಿನಲ್ಲಿ) ನಿಗದಿತ ಬೆಲೆಗೆ ನಿಗದಿಯಾದ ಭಕ್ಷ್ಯಭೋಜ್ಯಗಳನ್ನು ಕೊಡುವ ಊಟ. table d’hote dinner ಕಡಿಮೆ ಐಟಂಗಳಿರುವ, ನಿಗದಿತ ಬೆಲೆಯ, ಮುಖ್ಯವಾಗಿ ಹೋಟೆಲಿನ, ಊಟ.

    table knife
    ನಾಮವಾಚಕ
    ಮೇಜಿನ ಯಾ ಊಟದ ಚಾಕು, ಮುಖ್ಯವಾಗಿ ಊಮಾಡುವಾಗ ಬಳಸುವ ಚಾಕು.

    table licence
    ನಾಮವಾಚಕ
    ಮೇಜು–ಲೈಸನ್ಸ್‍, ಪರವಾನೆ; ಊಟದ ಜೊತೆ ಮಾತ್ರ ಮದ್ಯ ಮೊದಲಾದವುಗಳನ್ನು ಒದಗಿಸಬಹುದೆನ್ನುವ ಪರವಾನಗಿ.

    table linen
    ನಾಮವಾಚಕ
    ಮೇಜುಬಟ್ಟೆ; ಮೇಜಿನ ಮೇಲೆ ಹರಡುವ ಬಟ್ಟೆ, ಕರವಸ್ತ್ರಗಳು, ಮೊದಲಾದವು.


    logo