logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (English-English-Kannada)
A B C D E F G H I J K L M N O P Q R S T U V W X Y Z

Potters Clay
Clay which is used for making pots.
ಕುಂಬಾರಿಕೆ ಮಣ್ಣು , ಮಣ್ಣಿನ ವಸ್ತುಗಳನ್ನು ತಯಾರಿಸುವ ಜೇಡಿಮಣ್ಣು.

Pottery
The word pottery is applied to all articles made or formed of backed clay. It was made in the most remote ages and all primitive races of the world seen to have been used it in same form or other. There is prose and there is poetry in pottery. `The art of country judge of its fineness sensibility by its pottery it is sure touch stone` (Sir Herbert Read).
ಮಣ್ಣಿನಿಂದ ಮಾಡಿ ಸುಟ್ಟ ಎಲ್ಲಾ ಬಗೆಯ ಕುಂಭ ವಸ್ತುಗಳು. ಇತಿಹಾಸಪೂರ್ವದಿಂದಲೂ ಕುಂಬಾರಿಕೆ ಬೆಳೆದು ಬಂದಿದೆ.

Potting
the preserving of articles of food in pots for future use.
ಗಡಿಗೆಯಲ್ಲಿ ಆಹಾರ ಧಾನ್ಯ ಶೇಖರಿಸುವುದು.

Pottle
Drinking vessel
ಕುಡಿಯುವ ನೀರನ್ನು ಹಾಕಿಡುವ ಪಾತ್ರೆ.

Pot marks
Name of the trade mark, and manufacturer carved on the pot.
ಕುಂಭವಸ್ತುಗಳ ಮೇಲೆ ಮಾಡಿದವನ ಹೆಸರು, ಚಿಹ್ನೆ ಇತ್ಯಾದಿ ಕೊರೆದಿರುವುದು.

Pouring
A method of applying ceramic glaze by pouring it over the surface of the ware to leave an even coating.
ಸುರಿಯುವುದು, ಹಾಕುವುದು, ಸೆರಾಮಿಕ್ ವಸ್ತುಗಳಿಗೆ ಗ್ಲೇಸಿಂಗ್ ಮಾಡುವ ವಿಧಾನಗಳಲ್ಲಿ ಇದು ಕೂಡ ಒಂದು ಗ್ಲೇಸಿಂಗ್ ಮಿಶ್ರಣವನ್ನು ಸೆರಾಮಿಕ್ ವಸ್ತುಗಳ ಮೈಗೆ ಸಮವಾಗಿ ಸುರಿಯುವುದು.

Potter's wheel
A horizontal revolving disk used to hold ceramic clay as it is shaped by the potter.
ಕುಂಬಾರನ ಚಕ್ರ, ಕುಲಾಲ ಚಕ್ರ, ತಿಗುರಿ ಕುಂಬಾರನ ಚಕ್ರವನ್ನು ಸುಮೇರಿಯನ್-ರು ಮೊದಲು ಬಳಕೆಗೆ ತಂದರು. ಮೊದಲಿಗೆ ಕಲ್ಲಿನ ಚಕ್ರವನ್ನು ಬಳಸುತ್ತಿದ್ದರು. ನಂತರ, ಮರ, ಮಣ್ಣಿನಿಂದ ಮಾಡಿದ ಚಕ್ರಗಳು ಬಳಕೆಗೆ ಬಂದವು, ಈಗ ಬಾಲ್ ಬೇರಿಂಗ್ ಚಕ್ರಗಳು ಬಳಕೆಗೆ ಬಂದಿವೆ, ಕುಳಿತುಕೊಂಡೇ ಕುಂಭ ವಸ್ತುಗಳನ್ನು ಗೇಯಬಹುದು. ಈಗೀಗ ವಿದ್ಯುತ್ ಚಕ್ರಗಳು ಬಳಕೆಗೆ ಬಂದ ಮೇಲೆ ಶ್ರಮ ಕಡಿಮೆ ಆಗಿದೆ. ನೋಡಿ - ಕುಲಾಲ ಚಕ್ರ.

Puddle
Small muddy pool, a mixture of clay and sand.
ಮರುಳುಬೆರೆಸಿದ ಕಲಸು ಜೇಡಿ ಮಣ್ಣನ್ನು ತುಳಿದು ಹದಮಾಡು.

Pug
Clay ground and worked with water, to grind with water and make plastic.
ಕಲಸಿಹದಗೊಳಿಸಿದ ಬಂಕೆ ಮಣ್ಣು, ಅಂಟು ಮಣ್ಣು.

Pug Mill
A machine for mixing up plastic clay into a more homogenous mass.
ಮಣ್ಣನ್ನು ಹದವಾಗಿ ಕಲಸುವ ಯಂತ್ರ.


logo