ಪುರಾತನ ಐಬೀರಿಯ ದೇಶದ; ಈಗಿನ ಸ್ಪೇನ್ ಮತ್ತು ಪೋರ್ಚುಗಲ್ ಸೇರಿ ಆದ ಪರ್ಯಾಯ ದ್ವೀಪದ.
Iberian
ನಾಮವಾಚಕ
ಪುರಾತನ ಐಬೀರಿಯ ದೇಶದವನು.
ಐಬೀರಿಯ ದೇಶದ ಭಾಷೆ.
Ibero-
ಸಮಾಸ ಪೂರ್ವಪದ
ಐಬೀರಿಯ ದೇಶ(ದ) ಮತ್ತು – ಎಂಬರ್ಥದಲ್ಲಿ ಬಳಸುವ ಪೂರ್ವಪ್ರತ್ಯಯ: Ibero-American.
ibex
ನಾಮವಾಚಕ
ಐಬೆಕ್ಸ್; ಆಲ್ಪ್‘ ಮತ್ತು ಅಪೆನೈನ್ ಪರ್ವತಗಳ ಮೇಲೆ, ಮುಖ್ಯವಾಗಿ ಎತ್ತರದ ಪ್ರದೇಶಗಳಲ್ಲಿ ಜೀವಿಸುವ, ಹಿಂದಕ್ಕೆ ಬಾಗಿದ ಉದ್ದನೆಯ ಕೊಂಬುಗಳುಳ್ಳ ಕಾಡು ಮೇಕೆ, ಹೋತ.
ibid.
ಸಂಕ್ಷಿಪ್ತ
ibidem.
ibidem
ಕ್ರಿಯಾವಿಶೇಷಣ
ಅದೇ (ಇದೇ) ಗ್ರಂಥ, ಪ್ರಕರಣ, ವಾಕ್ಯವೃಂದ, ಮೊದಲಾದವುಗಳಲ್ಲಿ.
ibis
ನಾಮವಾಚಕ
ಪದಗುಚ್ಛ
ಐಬಿಸ್; ಬಾಗುಕೊಕ್ಕಿನ ಬೆಳ್ಳಕ್ಕಿ; ಬೆಚ್ಚನೆಯ ಹವೆ ಇರುವ ಪ್ರದೇಶಗಳ ಸರೋವರಗಳಲ್ಲಿ ಮತ್ತು ಜವುಗುಗಳಲ್ಲಿ ವಾಸಿಸುವ, ಬಾಗು ಕೊಕ್ಕಿನ, ಕೊಕ್ಕರೆಯಂಥ ಹಕ್ಕಿ. sacred ibis ಪವಿತ್ರ ಐಬಿಸ್; ಪ್ರಾಚೀನ ಈಜಿಪ್ಟಿನವರು ಪೂಜಿಸುತ್ತಿದ್ದ, ಬಿಳಿಯ ಐಬಿಸ್ ಹಕ್ಕಿ.