logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ear-muff
ನಾಮವಾಚಕ
ಕಿವಿಕಾಪು; ಕಿವಿಕವಚ; ಕಿವಿರಕ್ಷೆ, ಶೀತಗಾಳಿ, ಶಬ್ದ, ಮೊದಲಾದವುಗಳಿಂದ ಕಿವಿಗಳನ್ನು ರಕ್ಷಿಸಲು ಬಳಸುವ ಸಾಧನ.

ear-piece
ನಾಮವಾಚಕ
ಕರ್ಣಾಂಗ; ಶ್ರವಣಾಂಗ; ಶ್ರವಣ ಭಾಗ; ದೂರವಾಣಿ ಮೊದಲಾದವುಗಳಲ್ಲಿ ಕಿವಿಗೆ ಇಟ್ಟುಕೊಳ್ಳುವ ಭಾಗ.

ear-piercing
ಗುಣವಾಚಕ
ಕಿವಿ ಕೊರೆಯುವ; ಕರ್ಣಭೇದಕ; ಕರ್ಣಕಠೋರ; ಕಿವಿ ತೂತು ಬೀಳಿಸುವ.

ear-plug
ನಾಮವಾಚಕ
ಕಿವಿಬೆಣೆ; ಕಿವಿ ಬಿರಡೆ; ಶೀತಗಾಳಿ, ನೀರು, ಯಾ ಶಬ್ದಗಳಿಂದ ಕಿವಿಯನ್ನು ರಕ್ಷಿಸಲು, ಕಿವಿಯಲ್ಲಿ ಇಡುವ ಮೇಣದ ತುಂಡು ಮೊದಲಾದವು.

ear-ring
ನಾಮವಾಚಕ
ಕಿವಿಯುಂಗುರ; ಓಲೆ; ಹತ್ತಕಡಕು; ಹತ್ತೊಂಟಿ; ಕರ್ಣಕುಂಡಲ; ಒಂಟಿ; ಮುರವು.

ear-splitting
ಗುಣವಾಚಕ
(ಶಬ್ದದ ವಿಷಯದಲ್ಲಿ) ಕಿವಿಗಡಚುವ; ಕರ್ಣಕಠೋರ; ಕಿವಿ ಒಡೆಯುವ; ಕಿವಿ ತೂತುಬೀಳಿಸುವ; ಕಿವಿ ಕಿವುಡಾಗಿಸುವ; ಕಿವಿ ಹರಿಯುವಷ್ಟು ಜೋರಾದ ಯಾ ಗಟ್ಟಿಯಾದ.

ear-trumpet
ನಾಮವಾಚಕ
ಕಿವಿ ಚೆನ್ನಾಗಿ ಕೇಳಿಸದವರ ಉಪಯೋಗಕ್ಕಾಗಿ ಮಾಡಿದ

ear-wax
ನಾಮವಾಚಕ
ಗುಗ್ಗೆ; ಕುಗ್ಗಿ; ಕೂಗಣಿ; ಕಿವಿಯೊಳಗಿನ ಮಲ.

earache
ನಾಮವಾಚಕ
ಕಿವಿನೋವು; ಕಿವಿ ಪೋಟು.

eared
ಗುಣವಾಚಕ
  • ಕಿವಿಗಳುಳ್ಳ; (ಮುಖ್ಯವಾಗಿ ಗೊತ್ತಾದ ಆಕಾರದ) ಕಿವಿಗಳಿರುವ: long eared ನೀಳಗಿವಿಯ; ಉದ್ದನೆಯ ಕಿವಿಯುಳ್ಳ.
  • ಕಿವಿಯಂತೆ ಚಾಚಿದ; ಉದ್ದನೆಯ ಗರಿ ಯಾ ಜುಟ್ಟು ಇರುವ: an eared owl ನೀಳಜುಟ್ಟಿನ ಗೂಬೆ; ಉದ್ದನೆಯ ಜುಟ್ಟಿನ ಗೂಬೆ.
  • ಚಾಚುಗಿವಿ ಗುರಾಣಿ; ಮೇಲಿನ ಮೂಲೆಗಳಲ್ಲಿ ಚೂಪಾಗಿ ಚಾಚಿಕೊಂಡಿರುವ ವಂಶಲಾಂಛನವುಳ್ಳ ಗುರಾಣಿ.
  • (ಸಸ್ಯವಿಜ್ಞಾನ) (ನಿರ್ದಿಷ್ಟ ಜಾತಿಯ ಧಾನ್ಯದ) ಹೊಡೆ ಇರುವ; ತೆನೆ ಬಿಟ್ಟ; ಕದಿರು ಬಿಟ್ಟ: golden eared grain ಹೊಂದೆನೆ; ಹೊಂಬಣ್ಣದ ಕಾಳಿನ ಹೊಡೆ.


  • logo