logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

CAB
ಸಂಕ್ಷಿಪ್ತ
  • Citizens’ Advice Bureau.
  • (ಅಮೆರಿಕನ್‍ ಪ್ರಯೋಗ) Civil Aeronautics Board.

  • cab(b)ala
    ನಾಮವಾಚಕ
  • ಯೆಹೂದ್ಯರ ಶಾಸ್ತ್ರ; ಕರ್ಣಪರಂಪರೆಯಾಗಿ ಬಂದ ಯೆಹೂದ್ಯರ – ತತ್ತ, ಅಭಿಪ್ರಾಯ, ಸಂಪ್ರದಾಯ ಇತ್ಯಾದಿ.
  • ಗೂಢಾರ್ಥ; ಗೂಢತತ್ತ್ವ.
  • ಗುಪ್ತವಿದ್ಯೆ; ರಹಸ್ಯವಿದ್ಯೆ.

  • cab(b)alism
    ನಾಮವಾಚಕ
  • ಕಬಾಲದ ತತ್ತ್ವಗಳು ಯಾ ಸಿದ್ಧಾಂತಗಳು; ಯೆಹೂದ್ಯರ ಗುಪ್ತಸಂಪ್ರದಾಯಗಳು;
  • ರಹಸ್ಯ, ಗುಪ್ತ – ತತ್ತ್ವ.
  • ಅಂಥ ತತ್ತ್ವ ಅನುಸರಿಸಿ ಅರ್ಥವಿವರಣೆ ಮಾಡುವುದು.
  • (ಸಾಹಿತ್ಯ ವಿಮರ್ಶೆಯಲ್ಲಿ) ಅಪರಿಚಿತ ಪದಗಳ ಪ್ರಯೋಗದಿಂದ ಉಂಟಾಗುವ ಅಸ್ಪಷ್ಟತೆ.

  • cab(b)alist
    ನಾಮವಾಚಕ
    ಯೆಹೂದ್ಯ ಸಂಪ್ರದಾಯಿ.

    cab(b)alistic
    ಗುಣವಾಚಕ
  • ಯೆಹೂದ್ಯರ ಸಂಪ್ರದಾಯದ.
  • ರಹಸ್ಯದ; ನಿಗೂಢ ತತ್ತ್ವದ.

  • cab(b)alistically
    ಕ್ರಿಯಾವಿಶೇಷಣ
  • ಯೆಹೂದ್ಯ ಸಂಪ್ರದಾಯದಂತೆ.
  • ರಹಸ್ಯವಾಗಿ.

  • cab-rank
    ನಾಮವಾಚಕ
  • (ಬ್ರಿಟಿಷ್‍ ಪ್ರಯೋಗ) ಕ್ಯಾಬ್‍ ನಿಲ್ದಾಣದಲ್ಲಿ ಇರುವ ಟ್ಯಾಕ್ಸಿ ಮೊದಲಾದವುಗಳ ಸಾಲು.
  • ಕ್ಯಾಬ್‍ ನಿಲ್ದಾಣ; ಟ್ಯಾಕ್ಸಿ ನಿಲ್ದಾಣ; ಟ್ಯಾಕ್ಸಿಚೌಕ; ಟ್ಯಾಕ್ಸಿ ಮೊದಲಾದವುಗಳು ಗಿರಾಕಿಗಳಿಗಾಗಿ ಕಾಯಲು ನಿಗದಿಯಾದ ಜಾಗ.

  • cab-runner
    ನಾಮವಾಚಕ
    ಕ್ಯಾಬ್‍ಕೂಲಿ; ಬಂಡಿಹಮಾಲಿ; ಗಾಡಿಕೂಲಿ; ಟ್ಯಾಕ್ಸಿ, ಬಂಡಿ, ಮೊದಲಾದವುಗಳಿಂದ ಸಾಮಾನು ಇಳಿಸುವ ಯಾ ಅವುಗಳಲ್ಲಿ ಸಾಮಾನು ಇಡುವ ಕೂಲಿಯಾಳು.

    cab-stand
    ನಾಮವಾಚಕ
    ಕ್ಯಾಬ್‍ಚೌಕ; ಕ್ಯಾಬ್‍, ಟ್ಯಾಕ್ಸಿ, ಗಾಡಿ – ನಿಲ್ದಾಣ; ಟ್ಯಾಕ್ಸಿ, ಗಾಡಿ ಮೊದಲಾದವುಗಳು ಗಿರಾಕಿಗಳಿಗಾಗಿ ಕಾಯುವ ಸ್ಥಳ.

    cab-tout
    ನಾಮವಾಚಕ
    =cab-runner.


    logo