logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

tang
ನಾಮವಾಚಕ
ಠಣ್‍ ಠಣ್‍ ಶಬ್ದ; ಟಂಗ್‍ ಟಂಗ್‍ ಸದ್ದು; ಠಂಕಾರ.

tanga
ನಾಮವಾಚಕ
(ತಂತಿಯಿಂದ ಬಿಗಿದ ಚಿಕ್ಕ ಪಟ್ಟಿಗಳಿಂದ ಮಾಡಿದ) ಚಿಕ್ಕ ಈಜುಡುಪು.

tangelo
ನಾಮವಾಚಕ
ಚಕ್ಕೋತ ಹಾಗೂ ಕಿತ್ತಳೆ ಕೂಡಿಕೆಯ ಅಡ್ಡ ತಳಿ; ಚಕ್ಕಿತ್ತಳೆ.

tangency
ನಾಮವಾಚಕ
ಸ್ಪರ್ಶಿತೆ; (ರೇಖೆ ಯಾ ಮೇಲ್ಮೈ ವಿಷಯದಲ್ಲಿ) ಒಂದು ರೇಖೆ ಯಾ ಮೇಲ್ಮೈಯನ್ನು ಒಂದು ಬಿಂದುವಿನಲ್ಲಿ ಮುಟ್ಟುವಂತಿದ್ದು, ಲಂಬಿಸಿದರೂ ಅದನ್ನು ಕತ್ತರಿಸದಂತಿರುವಿಕೆ.

tangent
ಗುಣವಾಚಕ
  • (ರೇಖೆ ಯಾ ಮೇಲ್ಮೈ ವಿಷಯದಲ್ಲಿ) ಸ್ಪರ್ಶಕ ರೇಖೆಯ; ವಕ್ರರೇಖೆಯ ತಲದ; ಒಂದು ವಕ್ರರೇಖೆ ಯಾ ಮೇಲ್ಮೆ ಯನ್ನು ಒಂದು ಬಿಂದುವಿನಲ್ಲಿ ಮುಟ್ಟುವ, ಸ್ಪರ್ಶಿಸುವ, ಲಂಬಿಸಿದರೂ ಅದನ್ನು ಕತ್ತರಿಸದ.
  • (ಮೇಲ್ಮೈ ವಿಷಯದಲ್ಲಿ) ಮುಟ್ಟುವ; ಸ್ಪರ್ಶಕ; ವಕ್ರತಲವೊಂದನ್ನು ವಕ್ರರೇಖೆ ಯಾ ಸರಳರೇಖೆಯ ಮೇಲೆ ಅಂಥ ಬಿಂದುಗಳಲ್ಲಿ ಸೋಂಕುವ.

  • tangent
    ನಾಮವಾಚಕ ಪದಗುಚ್ಛ
  • ಸ್ಪರ್ಶಕ (ರೇಖೆ).
  • ಸ್ಪರ್ಶಕ ಅನುಪಾತ; ಲಂಬಕೋನ ತ್ರಿಕೋನದ ಒಂದು ಕೋನಕ್ಕೆ ಎದುರಿನಲ್ಲಿ ಮತ್ತು ಪಕ್ಕದಲ್ಲಿ ಇರುವ ಬಾಹುಗಳ ಅನುಪಾತ, ದಾಮಾಷಾ.

  • tangent galvanometer
    ನಾಮವಾಚಕ
    (ಭೌತವಿಜ್ಞಾನ) ಟ್ಯಾಂಜೆಂಟ್‍ ಗ್ಯಾಲ್ವನೋಮೀಟರ್‍; ಅಳೆಯಬೇಕಾಗಿರುವ ವಿದ್ಯುತ್ಪ್ರವಾಹವನ್ನು ವರ್ತುಲಾಕಾರದ ಒಂದು ತಂತಿಸುರುಳಿಯ ಮೂಲಕ ಕಳುಹಿಸಿ ವರ್ತುಲದ ಕೇಂದ್ರಸ್ಥಾನದಲ್ಲಿರಿಸಿರುವ ಕಾಂತಸೂಚಿಯ ವಿಚಲನೆಯನ್ನು ಅಳೆದು ಪ್ರವಾಹವನ್ನು ನಿರ್ಣಯಿಸಬಹುದಾದ ಉಪಕರಣ.

    tangential
    ಗುಣವಾಚಕ
  • (ತಲ, ರೇಖೆಗಳ ವಿಷಯದಲ್ಲಿ) ಸ್ಪರ್ಶಕೀಯ:
    1. ಸ್ಪರ್ಶಕದ ಯಾ ಸ್ಪರ್ಶಕದ ಗುಂಟ.
    2. ಅಪಸರವಾದ.
    3. ಮೇಲುಮೇಲಿನ; ಹೊರನೋಟದ.
  • (ವಿಷಯ, ವಿಚಾರ ಸರಣಿ, ಮೊದಲಾದವುಗಳ ವಿಷಯದಲ್ಲಿ) ಅಪ್ರಸ್ತುತವಾದ; ಅಪ್ರಸಕ್ತವಾದ; ದೂರವಾದ; ಸಂಬಂಧವಿಲ್ಲದ.

  • tangentially
    ಕ್ರಿಯಾವಿಶೇಷಣ
  • (ತಲ, ರೇಖೆಗಳ ವಿಷಯದಲ್ಲಿ) ಸ್ಪರ್ಶಕವಾಗಿ.
  • (ವಿಷಯ, ವಿಚಾರಸರಣಿ, ಮೊದಲಾದವುಗಳ ವಿಷಯದಲ್ಲಿ) ಅಪ್ರಸ್ತುತವಾಗಿ; ಸಂಬಂಧರಹಿತವಾಗಿ.

  • tangerine
    ನಾಮವಾಚಕ
  • = tangerine orange.
  • ಕಿತ್ತಳೆ ಬಣ್ಣ; ಕಡು ಕಿತ್ತಳೆಹಳದಿ ಬಣ್ಣ.


  • logo