logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

octad
ನಾಮವಾಚಕ
ಆಷ್ಟಕ; ಎಂಟರ–ಗುಂಪು, ಸಮೂಹ.

octagan
ನಾಮವಾಚಕ
  • (ಜ್ಯಾಮಿತಿ) ಅಷ್ಟ–ಭುಜ, ಕೋನ; ಎಂಟು ಭುಜಗಳೂ ಎಂಟು ಕೋನಗಳೂ ಉಳ್ಳ, ಸಮತಲ ಆಕೃತಿ. Figure: octagon-1
  • ಅಷ್ಟಭುಜ; ಆಷ್ಟಭುಜದ ಆಕಾರ ಉಳ್ಳ, ಎಂಟು ಮೂಲೆ ಇರುವ ಯಾವುದೇ ವಸ್ತು, ಕಟ್ಟಡ, ಇತ್ಯಾದಿ.

  • octagon
    ಗುಣವಾಚಕ
    = octagonal.

    octagonal
    ಗುಣವಾಚಕ
    ಅಷ್ಟಭುಜೀಯ; ಅಷ್ಟಭುಜಾಕೃತಿಯ; ಅಷ್ಟಕೋನೀಯ.

    octagonally
    ಕ್ರಿಯಾವಿಶೇಷಣ
    ಅಷ್ಟಭುಜೀಯವಾಗಿ; ಅಷ್ಟಭುಜಾಕೃತಿಯಲ್ಲಿ.

    octahedral
    ಗುಣವಾಚಕ
    ಅಷ್ಟಮುಖೀಯ; ಎಂಟು ಮುಖಗಳಿರುವ.

    octahedron
    ನಾಮವಾಚಕ ಪದಗುಚ್ಛ
    regular octahedron ಸಕ್ರಮ ಅಷ್ಟಮುಖಿ; ಎಂಟು ಮುಖಗಳೂ ಸಮಬಾಹು ತ್ರಿಕೋನಗಳಾಗಿರುವ ಅಷ್ಟಮುಖಿ.
  • ಅಷ್ಟಮುಖಿ; (ಮುಖ್ಯವಾಗಿ ತ್ರೀಕೋನಾಕಾರದ) ಎಂಟು ಮುಖಗಳುಳ್ಳ ಆಕೃತಿ.Figure: octhedra-1
  • ಅಷ್ಟಮುಖಿ; ಸಕ್ರಮವಾದ ಎಂಟು ಮುಖದ ಆಕೃತಿಯುಳ್ಳ ಯಾವುದೇ ಕಾಯ (ಮುಖ್ಯವಾಗಿ ಅಂತಹ ಹರಳು).

  • octal
    ಗುಣವಾಚಕ
    ಎಂಟರ; ಅಷ್ಟಕದ; ಎಂಟೆಂಟಾಗಿ ಗಣಿಸುವ ಯಾ ಮುಂದುವರಿಯುವ: octal scale ಎಂಟರ ಸಂಖ್ಯಾಕ್ರಮ; ಅಷ್ಟಮಾನ.

    octamerous
    ಗುಣವಾಚಕ
  • (ಮುಖ್ಯವಾಗಿ ಸಸ್ಯವಿಜ್ಞಾನ) ಅಷ್ಟಾಂಗ; ಅಷ್ಟಾಂಗಯುಕ್ತ; ಎಂಟುಭಾಗಗಳುಳ್ಳ; ಅಷ್ಟಾಂಗಗಳುಳ್ಳ; ಅಷ್ಟಾಂಗೀಯ; ಎಂಟು ಭಾಗಗಳು ಯಾ ಅಂಗಗಳು ಸೇರಿರುವ: an octamerous flower ಅಷ್ಟದಳದ ಹೂವು; ಅಷ್ಟಾಂಗಿ ಪುಷ್ಪ.
  • (ಪ್ರಾಣಿವಿಜ್ಞಾನ) ಅಷ್ಟಕಾಂಗೀಯ; ಅಪ್ಪಕಾವಯವಿ; ಅಂಗಗಳು ಎಂಟೆಂಟಾಗಿ ಜೋಡಣೆಯಾಗಿರುವ.

  • octane
    ನಾಮವಾಚಕ ಪದಗುಚ್ಛ
    ಆಕ್ಟೇನ್‍: high octane (ಅಂತರ್ದಹನ ಯಂತ್ರಗಳಲ್ಲಿ ಬಳಸುವ ಇಂಧನದ ವಿಷಯದಲ್ಲಿ) ಆಕ್ಟೇನ್‍ ಸಂಖ್ಯೆ ಅಧಿಕವಾಗಿರುವ, ಒಳ್ಳೆಯ ಸ್ಫೋಟನ ರೋಧಕ ಗುಣದ.
  • (ರಸಾಯನವಿಜ್ಞಾನ) ಆಲ್ಕೇನ್‍ ಕುಟುಂಬದ ಹೈಡ್ರೊಕಾರ್ಬನ್‍ಗಳಲ್ಲಿ ಎಂಟು ಪರಮಾಣುಗಳುಳ್ಳ ಸಮಾಂಗೀಯ ದ್ರವ ಹೈಡ್ರೊಕಾರ್ಬನ್‍ಗಳಲ್ಲಿ ಒಂದು ${\rm C}_8{\rm H}_18$.
  • ಅಸಮಾಂಗೀಯ ಹೈಡ್ರೊಕಾರ್ಬನ್‍ಗಳಲ್ಲಿ ಮೋಟಾರ್‍ ಇಂಧನಗಳ ಸ್ಫೋಟನಿರೋಧಕ ಗುಣದ ಸಂಬಂಧದಲ್ಲಿ ಪ್ರಸಿದ್ಧವಾಗಿರುವ ಐಸೊ ಆಕ್ಟೇನ್‍ $({\rm CH}_3)_2{\rm CH}.{\rm CH}_2{\rm C}({\rm CH}_3)_3$.


  • logo