logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

major axis
ನಾಮವಾಚಕ
(ಗಣಿತ) ಪ್ರಧಾನ ಅಕ್ಷ; ದೀರ್ಘ ವೃತ್ತದ ನಾಭಿ ಮೂಲಕ ಹಾದು ಹೋಗುವ ಅಕ್ಷ.

major league
ನಾಮವಾಚಕ
(ಅಮೆರಿಕನ್‍ ಪ್ರಯೋಗ) ಪ್ರಧಾನ ಒಕ್ಕೂಟ; ಬೇಸ್‍ಬಾಲ್‍ ಮೊದಲಾದವುಗಳ, ಪ್ರಮುಖ ಕ್ಲಬ್ಬುಗಳ ಒಂದು ಒಕ್ಕೂಟ.

major part
ನಾಮವಾಚಕ
ಹೆಚ್ಚುಪಾಲು; ಬಹುಪಾಲು; ದೊಡ್ಡಭಾಗ; ಅಧಿಕಾಂಶ.

major piece
ನಾಮವಾಚಕ
(ಚದುರಂಗ) ಕೋಟೆಕಾಯಿ ಯಾ ರಾಣಿ(ಕಾಯಿ).

major planet
ನಾಮವಾಚಕ
ಪ್ರಮುಖ ಗ್ರಹ; ಸೌರವ್ಯೂಹದ ನಾಲ್ಕು ಗ್ರಹಗಳಾದ ಗುರು, ಶನಿ, ಯುರೇನಸ್‍ ಅಥವಾ ನೆಪ್ಚೂನ್‍ಗಳಲ್ಲಿ ಒಂದು.

major premiss
ನಾಮವಾಚಕ
(ತರ್ಕಶಾಸ್ತ್ರ) ಸಾಧ್ಯಪದವುಳ್ಳ ವಾಕ್ಯ; ಆಧಾರವಾಕ್ಯ; ಆಧಾರ ಪ್ರಮೇಯ.

major prophet
ನಾಮವಾಚಕ
ಪ್ರಧಾನ ಪ್ರವಾದಿ: Isaiah, Jeremiah, Ezekiel ಅಥವಾ Daniel ಎಂಬ ಯೆಹೂದಿ ಪ್ರವಾದಿಗಳಲ್ಲೊಬ್ಬರು.

major suit
ನಾಮವಾಚಕ
(ಬ್ರಿಜ್‍ ಆಟ) ಇಸ್ಪೀಟು ಯಾ ಆಟೀನು ರಂಗು.

major term
ನಾಮವಾಚಕ
(ತರ್ಕಶಾಸ್ತ್ರ) ಸಾಧ್ಯಪದ; ಆಧಾರ ಪ್ರಮೇಯದಲ್ಲಿಯ ವಿಶೇಷಣ, ಆಖ್ಯಾತ; ಸಿಲಜಿಸಂ ತರ್ಕಸರಣಿಯ ನಿಗಮನ ವಾಕ್ಯದಲ್ಲಿ ವಿಶೇಷಣವಾಗುವ ಪದ.

major-domo
ನಾಮವಾಚಕ
  • ಇಟಲಿ ಮತ್ತು ಸ್ಪೇನ್‍ ದೇಶಗಳಲ್ಲಿ ಅರಮನೆಯ – ಬಕ್ಷಿ, ಮುಖ್ಯಾಧಿಕಾರಿ, ವ್ಯವಸ್ಥಾಪಕ.
  • ಮನೆವಾರ್ತೆಗಾರ; (ಮುಖ್ಯವಾಗಿ ಶ್ರೀಮಂತರ ಮನೆಯ) ಪಾರುಪತ್ಯಗಾರ; ಕಾರಭಾರಿ.


  • logo