logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

illumine
ಸಕರ್ಮಕ ಕ್ರಿಯಾಪದ
(ಸಾಹಿತ್ಯಕ)
  • ಬೆಳಗು; ಪ್ರಕಾಶಗೊಳಿಸು.
  • (ಆಧ್ಯಾತ್ಮಿಕವಾಗಿ) ಬೆಳಕು – ನೀಡು, ತೋರು; ಜ್ಞಾನೋದಯವನ್ನುಂಟುಮಾಡು: what in me is dark illumine ನನ್ನಲ್ಲಿರುವ ಕತ್ತಲೆಯನ್ನು (ಅಜ್ಞಾನಾಂಧಕಾರವನ್ನು) ಬೆಳಗಿಸು, ಕಳೆ.
  • ಬೆಳಗಿಸು; ದೇದೀಪ್ಯಗೊಳಿಸು; ಉಜ್ಜ್ವಲವಾಗಿ ಮಾಡು; ಪ್ರಜ್ಜ್ವಲಿಸುವಂತೆ ಮಾಡು.

  • illuminism
    ನಾಮವಾಚಕ
    ರಹಸ್ಯಜ್ಞಾನವಾದ; ರಹಸ್ಯಜ್ಞಾನಿಗಳ ಪಂಥ ಯಾ ತತ್ತ್ವಗಳು.

    illuminist
    ನಾಮವಾಚಕ
    ರಹಸ್ಯಜ್ಞಾನ ಪಂಥಿ; ರಹಸ್ಯಜ್ಞಾನ ತತ್ತ್ವಗಳ ಅನುಯಾಯಿ.

    illusion
    ನಾಮವಾಚಕ
  • ಮಾಯೆ; ಭ್ರಮೆ; ಭ್ರಾಂತಿ: the happy illusions of youth ಯೌವನದ ಸುಖಕರ ಭ್ರಾಂತಿಗಳು.
  • ಆಭಾಸ; ಮಿಥ್ಯಾಜ್ಞಾನ; ಭ್ರಾಂತಿ; ವಸ್ತುವೊಂದರ ರೂಪದ ಬಗ್ಗೆ ತಪ್ಪು ಅಭಿಪ್ರಾಯ ಉಂಟುಮಾಡುವ ಇಂದ್ರಿಯಜನ್ಯ ಜ್ಞಾನ: optical illusion ದೃಷ್ಟಿಭ್ರಾಂತಿ.
  • (ಪರಿಸ್ಥಿತಿಗಳ ಬಗ್ಗೆ) ಮಿಥ್ಯಾಕಲ್ಪನೆ; ತಪ್ಪು ಗ್ರಹಿಕೆ.
  • (ಬುರುಕಿ, ಉಡುಪು, ಮೊದಲಾದವಕ್ಕೆ ಉಪಯೋಗಿಸುವ) ನವಿರು – ರೇಷ್ಮೆ ಬಲೆ, ರೇಷ್ಮೆ ಜಾಲರಿ ಬಟ್ಟೆ.

  • illusional
    ಗುಣವಾಚಕ
  • ಭ್ರಮಾತ್ಮಕ; ಭ್ರಮೆಗೆ ಸಂಬಂಧಿಸಿದ ಯಾ ಭ್ರಮೆಯಿಂದ ಕೂಡಿದ.
  • ತೋರ್ಕೆಯ; ಪ್ರಾತಿಭಾಸಿಕ.

  • illusionism
    ನಾಮವಾಚಕ
    ಜಗನ್ಮಿಥ್ಯಾವಾದ; ಮಾಯಾವಾದ; ಬಾಹ್ಯವಸ್ತುಗಳ ಅಸ್ತಿತ್ವವನ್ನು ನಿರಾಕರಿಸುವ ಸಿದ್ಧಾಂತ.

    illusionist
    ನಾಮವಾಚಕ
  • ಮಾಯಾವಾದಿ; ಜಗನ್ಮಿಥ್ಯಾವಾದಿ; ಬಾಹ್ಯ ಪ್ರಪಂಚದ ಮತ್ತು ವಸ್ತುಗಳ ಅಸ್ತಿತ್ವವನ್ನು ನಿರಾಕರಿಸುವವನು.
  • ಯಕ್ಷಿಣಿಗಾರ; ಜಾದೂಗಾರ; ಗಾರುಡಿಗ; ಐಂದ್ರಜಾಲಿಕ; ಕಣ್ಕಟ್ಟು ಮಾಡುವವ; ಮಾಯಿಕ.

  • illusive
    ಗುಣವಾಚಕ
    = illusory.

    illusively
    ಕ್ರಿಯಾವಿಶೇಷಣ
  • ಮರುಳುಗೊಳಿಸುವಂತೆ; ಭ್ರಮೆಗೊಳಿಸುವ ಹಾಗೆ; ಭ್ರಾಮಕವಾಗಿ.
  • ಭ್ರಾಂತಿಯಿಂದ; ಮಾಯೆಯಿಂದ.

  • illusiveness
    ನಾಮವಾಚಕ
    ಮರುಳುಗೊಳಿಸುವಿಕೆ; ಭ್ರಾಂತಿಕಾರಕತೆ; ಭ್ರಮೆಗೊಳಿಸುವಿಕೆ; ಭ್ರಾಮಕತೆ.


    logo