logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

dawdle
ನಾಮವಾಚಕ
  • ಕಾಲಹರಣ ಮಾಡುವವನು; ಹೊತ್ತು ಕಳೆಯುವವನು.
  • ಛಾನಸದವನು.
  • ಹೊತ್ತು ಕಳೆಯುವಿಕೆ.
  • ಸೋಮಾರಿತನ; ಪಾಲುಮಾರಿಕೆ.
  • ಸೋಮಾರಿ; ಅಲಸ.

  • dawdler
    ನಾಮವಾಚಕ
    = dawdle(1 & 2).

    dawg
    ನಾಮವಾಚಕ
    (ಆಡುಮಾತು) 1dog ಪದದ ರೂಪಾಂತರ.

    dawk
    ನಾಮವಾಚಕ ಪದಗುಚ್ಛ
    (ಭಾರತದ ಚರಿತ್ರೆ) ಮಜಲುಟಪಾಲು; ದಾರಿಯುದ್ದಕ್ಕೂ ಅಲ್ಲಲ್ಲಿ ಇಟ್ಟಿರುವ ವ್ಯಕ್ತಿ, ಕುದುರೆ, ಮೊದಲಾದವುಗಳ ಮೂಲಕ ಮಜಲಿನಿಂದ ಮಜಲಿಗೆ ಸಾಗಿಸುವ ಟಪಾಲು ಯಾ ಬೇರಾವುದೇ ಸಾಗಣೆ.
  • dawk bungalow ಪ್ರಯಾಣಿಕರ ಬಂಗಲೆ; ಯಾತ್ರಿಕ – ಭವನ, ಗೃಹ; ಮಜಲು ನಿಲ್ದಾಣದಲ್ಲಿ ಪ್ರಯಾಣಿಕರು ತಂಗಲು ಮಾಡಿರುವ ಮನೆ.
  • travel dawk ಮಜಲುಪ್ರಯಾಣಮಾಡು.

  • dawn
    ಅಕರ್ಮಕ ಕ್ರಿಯಾಪದ ಪದಗುಚ್ಛ
    dawn (up)on = 1dawn(2).
  • ಬೆಳಕು ಮೂಡು; ಬೆಳಕು ಹರಿ; ಬೆಳಗಾಗು; ಅರುಣೋದಯವಾಗು; ಸೂರ್ಯೋದಯವಾಗು.
  • (ಮನಸ್ಸಿಗೆ) ಹೊಳೆ; ಮೂಡು; ಸ್ಫುರಿಸು; ಬಾಸವಾಗು; ಗೋಚರವಾಗು; ಕಾಣಬರು: the truth dawned on him at last ಕೊನೆಗೂ ಅವನಿಗೆ ಸತ್ಯ ಹೊಳೆಯಿತು.
  • (ಬೆಳಕು, ವಸ್ತು, ಬುದ್ಧಿ, ಸಂಸ್ಕೃತಿಗಳ ವಿಷಯದಲ್ಲಿ) ಹೊಮ್ಮು; ಗೋಚರವಾಗು; ಪ್ರಕಟವಾಗು; ಕಾಣತೊಡಗು; ಮೈದೋರು.

  • dawn
    ನಾಮವಾಚಕ ಪದಗುಚ್ಛ
    dawn chorus ಮುಂಜಾನೆಮೇಳ; ಮುಂಜಾವುಮೇಳ; ಉಷಾಗೋಷ್ಠಿ; ನಸುಕಿನ ಚಿಲಿಪಿಲಿ; ಮುಂಜಾವಿನ ಹಕ್ಕಿಯುಲಿ; ಬೆಳಕು ಹರಿಯುವಾಗ ಪಕ್ಷಿಗಳು ಮಾಡುವ ಕಲರವ.
  • ಮುಂಜಾವು; ನಸುಕು; ಅರುಣೋದಯ; (ಮುಂ)ಬೆಳಗು; ಪ್ರಭಾತ.
  • (ಸಂತೋಷ ಮೊದಲಾದವುಗಳ ಆರಂಭದ) ಹೊಳಪು; ಪ್ರಕಾಶ; ಪ್ರಭೆ; ಮಿನುಗು.
  • (ರೂಪಕವಾಗಿ) ಉದಯ; ಆರಂಭ; ಪ್ರಾರಂಭ: the dawn of civilization ನಾಗರಿಕತೆಯ ಆರಂಭ.

  • dawning
    ನಾಮವಾಚಕ ಪದಗುಚ್ಛ
    first dawnings ಆರಂಭ (ದೆಶೆ); ಪ್ರಾರಂಭ (ಕಾಲ); ಉದಯ ಸ್ಥಿತಿ.
  • = 2dawn(1,3).
  • ಮೂಡಲು; ಪೂರ್ವದಿಕ್ಕು.

  • day
    ನಾಮವಾಚಕ ಪದಗುಚ್ಛ ನುಡಿಗಟ್ಟು
  • ಹಗಲು; ದಿನ; ದಿವಸ; ಅಹಸ್ಸು; ಉದಯಾಸ್ತಗಳ ನಡುವಣ ಕಾಲ: a goggy day ಮಂಜು ಕವಿದ ಹಗಲು.
  • ಹಗಲು(ಬೆಳಕು) (ರೂಪಕವಾಗಿ ಸಹ): clear as day ಹಗಲಿನಷ್ಟು ಸ್ಪಷ್ಟ.
  • ದಿನ; ದಿವಸ; ಭೂಮಿ ತನ್ನ ಅಕ್ಷದ ಮೇಲೆ ಒಮ್ಮೆ ಸುತ್ತುವ – ಅವಧಿ, ಕಾಲ; ಮುಖ್ಯವಾಗಿ ಮಧ್ಯ ರಾತ್ರಿಯಿಂದ ಮಧ್ಯರಾತ್ರಿಯವರೆಗಿನ ಇಪ್ಪತ್ನಾಲ್ಕು ಗಂಟೆಗಳ ಅವಧಿ.
  • ವ್ಯವಹಾರದಿನ; ವ್ಯಾವಹಾರಿಕ ದಿನ; ದಿನಾಂಕ ಮೊದಲಾದವನ್ನು ಪರಿಗಣಿಸುವ ಕಾಲ.
  • ದಿನ; ಇದೇ ರೀತಿಯಲ್ಲಿ ಭೂಮಿಗಿಂತ ಬೇರೆಯಾದ ಗ್ರಹಗಳು ತಮ್ಮ ಅಕ್ಷದ ಮೇಲೆ ಸುತ್ತುವ ಅವಧಿ: Martian day ಮಂಗಳಗ್ರಹದ ದಿನ.
  • ದಿನ; ದಿವಸ; ದಿನದಲ್ಲಿ ಸಾಮಾನ್ಯವಾಗಿ ಕೆಲಸ ಮಾಡುವ ಅವಧಿ: an eight hour day ಎಂಟು ಗಂಟೆಯ (ಕೆಲಸದ) ದಿವಸ.
  • ದಿನ; (ಯಾವುದೇ ಗಮನಾರ್ಹ ಸಂಗತಿ ಮೊದಲಾದವು) ನಡೆದ ಯಾ ನಡೆಯುವ ಸಮಯ: the day we met ನಾವು ಭೇಟಿಯಾದ ದಿನ.
  • (ಹಬ್ಬ, ಉತ್ಸವ, ಮೊದಲಾದವನ್ನು ಆಚರಿಸುವ) ವಿಶಿಷ್ಟ ದಿನ: birthday ಹುಟ್ಟು ದಿನ; ಜನ್ಮದಿನ. the new year’s day ಹೊಸವರ್ಷದ ದಿನ.
  • (ಏಕವಚನ ಯ ಬಹುವಚನದಲ್ಲಿ) ಉಚ್ಛ್ರಾಯ ಕಾಲ: ಏಳ್ಗೆಯ ಕಾಲ; ಅಭಿವೃದ್ಧಿ ಸಮಯ; ಸುದಿನ; ಒಳ್ಳೆಯ ದಿನ; ಒಳ್ಳೆಯ ಕಾಲ; ಅನೂಕೂಲ ದೆಸೆ: his day will come ಆತನಿಗೂ ಒಳ್ಳೆಯ ಕಾಲ ಬರುತ್ತದೆ.
  • (ಏಕವಚನ ಯಾ ಬಹುವಚನದಲ್ಲಿ) ದಿನ; ಅವಧಿ; ಕಾಲ: the days to come ಬರಲಿರುವ ದಿನಗಳಲ್ಲಿ; ಮುಂದೆ. in the days of Ashoka ಅಶೋಕನ ಕಾಲದಲ್ಲಿ. in days of old ಹಿಂದಿನ ದಿನಗಳಲ್ಲಿ ; ಪೂರ್ವಕಾಲದಲ್ಲಿ. at this day ಇಂದು.
  • (ಸ್ಪರ್ಧೆ ಮೊದಲಾದವುಗಳಲ್ಲಿ) ಜಯ; ಗೆಲವು: carry the day ಗೆಲ್ಲು. lose the day ಸೋಲು.
  • (ಏಕವಚನ ಯ ಬಹುವಚನದಲ್ಲಿ) (ವಸ್ತು, ವ್ಯಕ್ತಿಯ) ಕಾಲ; ಜೀವಿತ; ಬದುಕು; ಆಯುಷ್ಯ; ಜೀವಿತಾವಧಿ: his days are numbered ಅವನ ಕಾಲ ಮುಗಿಯುತ್ತಾ ಬಂದಿದೆ.
  • (ಏಕವಚನ ಯ ಬಹುವಚನದಲ್ಲಿ) ಚಟುವಟಿಕೆಯ ಕಾಲ; ಪ್ರಭಾವಕಾಲ: the days of dinosaurs ಡಿನೊಸಾರ್‍ಗಳ ಕಾಲ.
  • ನಿಶ್ಚಿತ ದಿನ; ಒಪ್ಪಿದ ದಿನ; ಅಂಗೀಕೃತ ದಿನ; ಸಮ್ಮತದಿವಸ; ಪರಸ್ಪರ ಒಪ್ಪಿ ಗೊತ್ತುಪಡಿಸಿದ ದಿನ.
  • ಇಂದು; ಅದ್ಯತನ ಕಾಲ; ಇಂದಿನ ಕಾಲ; ಸದ್ಯದ ಸಮಯ; ಈ ಹೊತ್ತು: questions of the day ಇಂದಿನ ಸಮಸ್ಯೆಗಳು.

  • day care
    ನಾಮವಾಚಕ
    ಹಗಲು ಪಾಲನೆ; ದಿವಾಪಾಲನೆ; ಮುಖ್ಯವಾಗಿ ಹಗಲುಹೊತ್ತು ತಾಯಂದಿರು ಕೆಲಸಕ್ಕೆ ಹೋದಾಗ, ಅವರ ಚಿಕ್ಕ ಮಕ್ಕಳನ್ನು ನೋಡಿಕೊಳ್ಳುವುದು.

    day centre
    ನಾಮವಾಚಕ
    ಹಗಲು ಕೇಂದ್ರ; ದಿವಾಕೇಂದ್ರ; ವಯಸ್ಸಾದವರನ್ನು ಯಾ ಅಂಗವಿಕಲರನ್ನು ಹಗಲುಹೊತ್ತು ನೋಡಿಕೊಳ್ಳುವ ಸ್ಥಳ.


    logo