logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

call-night
ನಾಮವಾಚಕ
ವಿದ್ಯಾರ್ಥಿಗಳಿಗೆ ಬ್ಯಾರಿಸ್ಟರ್‍ ಯಾ ವಕೀಲಿ ಸನ್ನದು ಕೊಡುವ ಉತ್ಸವವನ್ನು ಆಚರಿಸುವ ರಾತ್ರಿ.

call-over
ನಾಮವಾಚಕ
  • =roll-call.
  • (ಆಟದ ಕ್ಲಬ್ಬು ಮೊದಲಾದವುಗಳಲ್ಲಿ) ಬಾಜಿಪಟ್ಟಿ ಘೋಷಣೆ; ಬಾಜಿಯ ಬೆಲೆಗಳ ಪಟ್ಟಿಯನ್ನು ಗಟ್ಟಿಯಾಗಿ – ಕೂಗುವುದು ಯಾ ಓದುವುದು.

  • call-signal
    ನಾಮವಾಚಕ
    ಕರೆಸಂಕೇತ; ಕರೆಸಂಜ್ಞೆ; ರೇಡಿಯೋಕೇಂದ್ರ ಯಾವುದೆಂದು ಕೇಳುಗರು ಗುರುತಿಸಲು ಅನುಕೂಲವಾಗುವಂತೆ, ಆ ಕೇಂದ್ರವು ಬಿತ್ತರಿಸುವ ಸಂಜ್ಞೆ.

    call-up
    ನಾಮವಾಚಕ
  • ಸೈನ್ಯದ ಕರೆ; ಸೈನ್ಯಕ್ಕೆ ಬಂದು ಸೇರಲು ನೀಡುವ ಆದೇಶ.
  • ಹಾಗೆ ಜಮಾಯಿಸಿದ ಸೈನಿಕರ ಸಂಖ್ಯೆ.

  • calla
    ನಾಮವಾಚಕ
    ಕ್ಯಾಲ:
  • ಕ್ಯಾಲ ಕುಲದ ಜಲ ಸಸ್ಯ.
  • = arum lily.

  • calla lily
    ನಾಮವಾಚಕ
    =arum lily.

    caller
    ನಾಮವಾಚಕ
  • (ರೈಲುಗಳು ಬರುವುದು, ಹೋಗುವುದು, ಬಿಂಗೋ ಮೊದಲಾದ ಆಟಗಳಲ್ಲಿ ಗೆದ್ದ ನಂಬರ್‍ಗಳು ಮೊದಲಾದವುಗಳ) ಕೂಗಾಳು; ಘೋಷಕ; ಸಾರುವವನು.
  • ಟೆಲಿಹೋನ್‍ ಮಾಡುವವನು; ಟೆಲಿಹೋನಿನಲ್ಲಿ ಕರೆಯುವವನು ಯಾ ಮಾತನಾಡುವವನು.
  • ಚೌಕನೃತ್ಯದಲ್ಲಿ ಸೂಚನೆ ನೀಡುವವನು; ಚೌಕಕುಣಿತದ ನಿರ್ದೇಶಕ.
  • (ಆಟದ) ಸರದಿಗಾರ; ಸರದಿಯವ; ಪಾಳಿಯವ.
  • ಕಾಣಬಂದವ; ನೋಡಲು ಬಂದವ; ಭೇಟಿಗಾರ; ಭೇಟಿಗೆ ಬಂದವ.
  • =call-boy.
  • ಕೂಗುವ ಪ್ರಾಣಿ, ಹಕ್ಕಿ, ವ್ಯಕ್ತಿ.

  • caller
    ಗುಣವಾಚಕ
  • (ಸ್ಕಾಟ್ಲಂಡಿನಲ್ಲಿ) (ಹಣ್ಣು, ಮೀನು ಮೊದಲಾದವುಗಳ ವಿಷಯದಲ್ಲಿ) ಹೊಚ್ಚ ಹೊಸ(ದಾದ); ತಾಜಾ; ನವ; ನವೀನ; ನೂತನ.
  • (ಗಾಳಿಯ ವಿಷಯದಲ್ಲಿ) ತಂಪಾದ; ಉಲ್ಲಾಸದಾಯಕ; ಚೈತನ್ಯ ನೀಡುವ.

  • calligrapher
    ನಾಮವಾಚಕ
    ಅಂದದ ಲಿಪಿಗಾರ; ಸುಂದರಲಿಪಿಗಾರ; ಚಂದದ ಕೈಬರಹಗಾರ; ಅಂದವಾಗಿ ಬರೆಯುವವನು.

    calligraphic
    ಗುಣವಾಚಕ
    ಅಂದಲಿಪಿಯ; ಸುಂದರಲಿಪಿಯ ಯಾ ಇದಕ್ಕೆ ಸಂಬಂಧಿಸಿದ.


    logo