logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

bake
ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ ಪದಗುಚ್ಛ
half-baked
  • (ನೇರವಾಗಿ ಬೆಂಕಿಗೆ ತಗುಲಿಸದೆ) ಬೇಯಿಸು; ಸುಡು; ಮುಚ್ಚಿದ ಪಾತ್ರೆಯಲ್ಲಿ ಯಾ ಕಾವಲಿಯ ಮೇಲೆ ಇಟ್ಟು ಕಾವಿನಿಂದ ಅಡು.
  • (ಕಾವಿನಿಂದ) ಗಟ್ಟಿಗೊಳಿಸು; ಗಟ್ಟಿಮಾಡು.
  • (ಸೂರ್ಯನ ವಿಷಯದಲ್ಲಿ, ಹಣ್ಣು ಮೊದಲಾದವನ್ನು) ಮಾಗಿಸು; ಹಣ್ಣಾಗಿಸು.
  • (ಸೂರ್ಯನ ವಿಷಯದಲ್ಲಿ, ಚರ್ಮವನ್ನು) ಕಂದಿಸು; ಕಂದು ಬಣ್ಣಕ್ಕೆ ತಿರುಗಿಸು.

  • bake
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) (ಮುಖ್ಯವಾಗಿ ಬೇಯಿಸಿದ ಆಹಾರವನ್ನು ಸೇವಿಸುವ) ಸಂತೋಷಕೂಟ; ಪಾರ್ಟಿ.

    bakeapple
    ನಾಮವಾಚಕ
    (ಕೆನಡ) ಒಣಗಿದ, ಒಂದು ಬಗೆಯ ಬೆಟ್ಟದ ಬೆರಿ ಹಣ್ಣು.

    Baked Alaska
    ನಾಮವಾಚಕ
    ಕೇಕು, ಐಸ್‍ಕ್ರೀಂಗಳ ಮಿಶ್ರಣವನ್ನು ಮೊಟ್ಟೆಯ ಲೋಳೆ, ಸಕ್ಕರೆ, ಮೊದಲಾದವುಗಳ ಕಣಕದಲ್ಲಿಟ್ಟು ಸುಟ್ಟು ಮಾಡಿದ ಒಂದು ತಿಂಡಿ.

    baked beans
    ನಾಮವಾಚಕ
    ಬೇಯಿಸಿದ ಹುರುಳಿಬೀಜ; ಬೇಯಿಸಿ ಸಾಮಾನ್ಯವಾಗಿ ಟೊಮೇಟೊ ರಸದಲ್ಲಿ ಹಾಕಿಟ್ಟ ಹುರುಳಿಕಾಯಿ ಬೀಜ.

    baked potato
    ನಾಮವಾಚಕ
    (ಸಿಪ್ಪೆಯ ಜೊತೆಯಲ್ಲಿಯೇ) ಬೇಯಿಸಿದ ಆಲೂಗೆಡ್ಡೆ.

    bakehouse
    ನಾಮವಾಚಕ
    ಬ್ರೆಡ್‍ಮನೆ; ಬ್ರೆಡ್ಡನ್ನು ಯಾ ಸಿಹಿರೊಟ್ಟಿಯನ್ನು ತಯಾರಿಸುವ ಕೋಣೆ, ಕೊಠಡಿ ಯಾ ಮನೆ.

    bakelite
    ನಾಮವಾಚಕ
    ಬೇಕಲೈಟ್‍; ಹೀನಾಲು ಮತ್ತು ಹರ್ಮಾಲ್ಡಿಹೈಡು, ಮೊದಲಾದವುಗಳಿಂದ ತಯಾರಿಸಿದ, ಬಹಳ ಬಳಕೆಯಲ್ಲಿರುವ ಪ್ಲ್ಯಾಸ್ಟಿಕ್‍ ಯಾ ಕೃತಕ ರಾಳ.

    baker
    ನಾಮವಾಚಕ ನುಡಿಗಟ್ಟು
    pull devil, pull baker ಉಭಯ ಪಕ್ಷದವರಿಗೂ ಕೊಡುವ ಪ್ರೋತ್ಸಾಹದ ಯಾ ಉತ್ತೇಜನದ ಕೂಗು.
  • ಬ್ರೆಡ್ಡು ವ್ಯಾಪಾರಿ; ರೊಟ್ಟಿಯವ; ರೊಟ್ಟಿ ತಯಾರಿಸುವವನು ಮತ್ತು ಮಾರುವವನು.
  • (ಮೀನು ಹಿಡಿಯುವುದಕ್ಕೆ ಬಳಸುವ) ಕೃತಕ ನೊಣ.
  • (ಅಮೆರಿಕನ್‍ ಪ್ರಯೋಗ) ಕೈಯೊಲೆ; ಕುಮಟಿ; ಕೈಯಲ್ಲಿ ಒಯ್ಯಬಹುದಾದ ಸಣ್ಣ ಒಲೆ.

  • baker's dozen
    ನಾಮವಾಚಕ
    ಬ್ರೆಡ್ಡಿನವನ ಡಸನ್‍; 13; ಡಸನ್‍ + ಒಂದು (13ನೆಯ ಬ್ರೆಡ್‍ ತುಂಡು ಚಿಲ್ಲರೆ ವ್ಯಾಪಾರಿಯ ಲಾಭ).


    logo