logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

abstrusely
ಕ್ರಿಯಾವಿಶೇಷಣ
ಅತಿ ಗಹನವಾಗಿ; ಅತಿ ಕ್ಲಿಷ್ಟವಾಗಿ; ದುರ್ಬೋಧವಾಗಿ; ದುಜ್ಞೇಯವಾಗಿ; ತಿಳಿಯಲು ಕಷ್ಟವಾದ ರೀತಿಯಲ್ಲಿ.

abstruseness
ನಾಮವಾಚಕ
ಗಹನತೆ; ದುಜ್ಞೇಯತೆ.

absurd
ಗುಣವಾಚಕ
  • ಅಸಂಬದ್ಧ; ಅಸಂಗತ; ಪರಸ್ಪರ ಹೊಂದಿಕೆಯಿಲ್ಲದ.
  • ಅವಿವೇಕದ; ವಿವೇಚನಾಶೂನ್ಯ; ವಿವೇಚನೆ ಇಲ್ಲದ.
  • ನಗೆಗೀಡಾದ; ಹಾಸ್ಯಾಸ್ಪದವಾದ.
  • ಅರ್ಥಶೂನ್ಯ; ಅರ್ಥವಿಲ್ಲದ.

  • absurdity
    ನಾಮವಾಚಕ
  • ಅಸಂಬದ್ಧತೆ; ಅಸಂಗತತೆ.
  • ಅವಿವೇಕ; ವಿವೇಚನಾಶೂನ್ಯತೆ.
  • ನಗೆಗೇಡುತನ; ಹಾಸ್ಯಾಸ್ಪದವಾಗಿರುವಿಕೆ.
  • ಅಸಂಬದ್ಧ ಪ್ರಲಾಪ; ಅಸಂಗತ ವರ್ತನೆ; ಅವಿವೇಕದ ಯಾ ಅಸಂಗತವಾದ–ಹೇಳಿಕೆ, ಕಾರ್ಯ.

  • absurdly
    ಕ್ರಿಯಾವಿಶೇಷಣ
  • ಅಸಂಗತವಾಗಿ; ಅಸಂಬದ್ಧವಾಗಿ.
  • ಅವಿವೇಕದಿಂದ; ವಿವೇಚನೆಯಿಲ್ಲದೆ.
  • ನಗೆಪಾಟಲಾಗಿ; ಹಾಸ್ಯಾಸ್ಪದವಾಗಿ.
  • ಅರ್ಥಶೂನ್ಯವಾಗಿ.

  • abulia
    ನಾಮವಾಚಕ
    = aboulia.

    abundance
    ನಾಮವಾಚಕ
  • ಆಧಿಕ್ಯ; ಬಾಹುಳ್ಯ; ಭಾರಿ ಪ್ರಮಾಣ ಯಾ ಸಂಖ್ಯೆ.
  • ಬೇಕಾದಷ್ಟು; ಹೇರಳ; ಸಮೃದ್ಧಿ; ಪುಷ್ಕಳತೆ; ಯಥೇಷ್ಟತೆ.
  • (ರೂಪಕವಾಗಿ) (ಸಂತೋಷ, ಔದಾರ್ಯ, ಮೊದಲಾದವುಗಳ ವಿಷಯದಲ್ಲಿ) ತುಂಬಿ ಹರಿಯುವಿಕೆ: abundance of heart ತುಂಬು ಹೃದಯ; ಹೃದಯ ತುಂಬಿ ಹರಿಯುವ ಸ್ಥಿತಿ.
  • ಸಿರಿ; ಐಶ್ವರ್ಯ; ಸಂಪತ್ತು.
  • (ಬೆಳೆ ಮತ್ತು ವಸ್ತುಗಳ ವಿಷಯದಲ್ಲಿ) ಹುಲುಸು; ಸೊಂಪು.
  • (ವಿಸ್ಟ್‍ ಇಸ್ಟೀಟಾಟದಲ್ಲಿ) ಒಂಬತ್ತು ಪಟ್ಟುಗಳನ್ನು ತೆಗೆದುಕೊಳ್ಳುತ್ತೇನೆಂಬ ಘೋಷಣೆ.

  • abundant
    ಗುಣವಾಚಕ
    ತುಂಬ; ಹೇರಳ; ತುಂಬಿ ತುಳುಕುವ; ಬೇಕಾದಷ್ಟು; ಸಮೃದ್ಧ; ಶ್ರೀಮಂತ; ಯಥೇಷ್ಟ; abundant reason to quarrel ಜಗಳವಾಡಲು ಬೇಕಾದಷ್ಟು ಕಾರಣ. a land abundant in minerals ಖನಿಜಗಳಿಂದ ಸಮೃದ್ಧವಾದ ನಾಡು.

    abundantly
    ಕ್ರಿಯಾವಿಶೇಷಣ
    ಹೇರಳವಾಗಿ; ಧಾರಾಳವಾಗಿ; ಸಮೃದ್ಧವಾಗಿ; ಯಥೇಷ್ಟವಾಗಿ.

    abusage
    ನಾಮವಾಚಕ
    (ಪದಗಳ ವಿಷಯದಲ್ಲಿ) ಅಪಪ್ರಯೋಗ.


    logo