logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

unbelievably
ಕ್ರಿಯಾವಿಶೇಷಣ
ನಂಬಲಾಗದಂತೆ; ಅವಿಶ್ವಾಸನೀಯವಾಗಿ; ವಿಶ್ವಾಸಾರ್ಹವಾಗಿರದೆ.

unbeliever
ನಾಮವಾಚಕ
  • ನಾಸ್ತಿಕ; ನಿರೀಶ್ವರವಾದಿ; ದೇವರಲ್ಲಿ ನಂಬಿಕೆಯಿಲ್ಲದವನು.
  • (ಮತಧರ್ಮ ಮೊದಲಾದವುಗಳಲ್ಲಿ) ನಂಬಿಕೆಯಿಲ್ಲದವನು; ಶ್ರದ್ಧೆಯಿಲ್ಲದವನು.

  • unbelieving
    ಗುಣವಾಚಕ
    (ಧರ್ಮ, ದೇವರು, ಮೊದಲಾದವುಗಳನ್ನು) ನಂಬದ; (ಅವುಗಳಲ್ಲಿ) ನಂಬಿಕೆಯಿಲ್ಲದ; ಶ್ರದ್ಧೆಯಿಲ್ಲದ.

    unbelievingly
    ಕ್ರಿಯಾವಿಶೇಷಣ
    (ಧರ್ಮ, ದೇವರು, ಮೊದಲಾದವುಗಳಲ್ಲಿ) ನಂಬಿಕೆಯಿಲ್ಲದೆ; ಶ್ರದ್ಧೆಯಿಲ್ಲದೆ.

    unbelievingness
    ನಾಮವಾಚಕ
    (ಧರ್ಮ, ದೇವರು, ಮೊದಲಾದವುಗಳಲ್ಲಿ) ನಂಬಿಕೆಯಿಲ್ಲದಿರುವಿಕೆ; ಅಶ್ರದ್ಧೆ.

    unbeloved
    ಗುಣವಾಚಕ
    ಪ್ರೀತಿಸಲ್ಪಡದ; ಪ್ರೇಮಪಾತ್ರನಾಗಿರದ.

    unbelt
    ಸಕರ್ಮಕ ಕ್ರಿಯಾಪದ
  • (ಉಡುಪಿನ ಸೊಂಟಪಟ್ಟಿ ಮೊದಲಾದವನ್ನು) ತೆಗೆ; ಕಳಚು.
  • (ಪಟ್ಟಿ ಮೊದಲಾದವನ್ನು ಕಳಚಿ) ಹೊರತೆಗೆ: unbelt a sword ಕತ್ತಿಯನ್ನು ಸೊಂಟಪಟ್ಟಿಯಿಂದ ಹೊರತೆಗೆ.

  • unbend
    ಕ್ರಿಯಾಪದ ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    ಆರಾಮವಾಗು; ಪ್ರಸನ್ನನಾಗು; ನೆಮ್ಮದಿಗೊಳ್ಳು; ಮೃದುವಾಗು: in the classroom the teacher maintains discipline but after the class he unbends ತರಗತಿಯಲ್ಲಿರುವಾಗ ಉಪಾಧ್ಯಾಯರು ಶಿಸ್ತನ್ನು ಪಾಲಿಸುತ್ತಾರೆ, ತರಗತಿಯ ನಂತರ ಪ್ರಸನ್ನಚಿತ್ತರಾಗಿರುತ್ತಾರೆ.
  • ಬಗ್ಗಿರುವುದನ್ನು ನೇರಮಾಡು ( ಅಕರ್ಮಕ ಕ್ರಿಯಾಪದ ಸಹ).
  • (ಮನಸ್ಸು ಮೊದಲಾದವುಗಳ) ಬಿಗುಪು ಕಡಮೆಮಾಡು; ಸಡಿಲಿಸು.
  • (ನೌಕಾಯಾನ)
    1. (ಪಟಗಳನ್ನು) ದಿಮ್ಮಿಗಳಿಂದ ಹಾಗೂ ಕೂವೆ ಹಗ್ಗಗಳಿಂದ ಬಿಚ್ಚು.
    2. (ಹೊರಜಿಯನ್ನು) ಸಡಿಬಿಡು.
    3. (ಹಗ್ಗ) ಬಿಚ್ಚು.

  • unbending
    ಗುಣವಾಚಕ
  • ಬಾಗದ; ನೆಟ್ಟಗಿರುವ; ನೇರವಾದ.
  • ಬಗ್ಗದ; ಸಗ್ಗದ; ನಿಷ್ಠುರ; ದೃಢ: unbending rectitude ದೃಢವಾದ ನೀತಿನಿಷ್ಠೆ.
  • (ಒತ್ತಡ, ಕಾರ್ಯಚಟುವಟಿಕೆ, ಮೊದಲಾದವುಗಳ ತರುವಾಯ) ಆರಾಮವಾದ; ನೆಮ್ಮದಿ ಪಡೆದ; ಬಿಗುವು ಕಡಮೆಯಾದ.

  • unbendingly
    ಕ್ರಿಯಾವಿಶೇಷಣ
  • ಸಗ್ಗದೆ; ಬಗ್ಗದೆ; ತಲೆಬಾಗದೆ.
  • ದೃಢವಾಗಿ; ನಿಷ್ಠುರವಾಗಿ.


  • logo