logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

tanbark
ನಾಮವಾಚಕ
ಟ್ಯಾನಿನ್‍ ಚಕ್ಕೆ; ಟ್ಯಾನಿನ್‍ ಆಮ್ಲ ಪಡೆಯಲು ಬಳಸುವ ಓಕ್‍ ಮತ್ತು ಇತರ ಮರಗಳ ಚಕ್ಕೆ, ತೊಗಟೆ.

tandem
ಕ್ರಿಯಾವಿಶೇಷಣ ಪದಗುಚ್ಛ
(ಹೂಡಿದ ಕುದುರೆಗಳ ವಿಷಯದಲ್ಲಿ) ಒಂದರ ಹಿಂದೆ ಇನ್ನೊಂದರಂತೆ; ಏಕ ಸಾಲಾಗಿ; ಬೆನ್ನಸಾಲಿನಲ್ಲಿ. drive (horses) tandem ಬೆನ್ನಸಾಲು (ಕುದುರೆಗಳನ್ನು) ನಡಸು; ಏಕಸಾಲು ಕುದುರೆಗಳನ್ನು ನಡಸು.

tandem
ನಾಮವಾಚಕ ಪದಗುಚ್ಛ
in tandem
  • ಬೆನ್ನುಸಾಲು ಕುದುರೆಗಳು.
  • ಬೆನ್ನುಸಾಲು ಕುದುರೆಗಳನ್ನು ಹೂಡಿದ ಗಾಡಿ. Figure: tandem_2
  • ಬೆನ್ನುಸಾಲು ಯಾ ಒಂದರ ಹಿಂದೆ ಒಂದರಂತೆ ಇರುವ ಪೀಠಗಳ ಬೈಸಿಕಲ್ಲು ಯಾ ಟ್ರೆ ಸಿಕಲ್ಲು.
  • (ಎರಡಕ್ಕಿಂತ ಹೆಚ್ಚಿನ ಸಂಖ್ಯೆಯ ಜನ, ಯಂತ್ರ, ಮೊದಲಾದವುಗಳ) ಬೆನ್ನುಸಾಲು; ಏಕಸಾಲು.

  • tandoor
    ನಾಮವಾಚಕ
    (ಭಾರತ) ಮಣ್ಣಿನ ಒಲೆ; ಅಗ್ಗಿಷ್ಟಿಕೆ.

    tandoori
    ನಾಮವಾಚಕ
    ತಂದೂರಿ; ಅಗ್ಗಿಷ್ಟಿಕೆಯ ಕೆಂಡದಲ್ಲಿ ಸುಟ್ಟ, ಬೇಯಿಸಿದ ತಿಂಡಿ, ಭಕ್ಷ್ಯ, ಮೊದಲಾದವು.

    Tang
    ನಾಮವಾಚಕ
  • ಟ್ಯಾಂಗ್‍; ಕ್ರಿಸ್ತಶಕ 618–906 ರ ವರೆಗೆ ಚೀನಾದೇಶವನ್ನು ಆಳಿದ ರಾಜವಂಶ.
  • (ವಿಶೇಷಣವಾಗಿ) ಟ್ಯಾಂಗ್‍ ಅವಧಿಯ ಕಲೆ ಮತ್ತು ಕಲಾಕೃತಿಗಳನ್ನು ಸೂಚಿಸುವ.

  • tang
    ನಾಮವಾಚಕ
  • ಹಿಡಿಕೆಯೊಳಕ್ಕೆ ಹೋಗುವ (ಉಳಿ, ಚಾಕು, ಮೊದಲಾದವುಗಳ) ಬಉಡ, ಮೂಲ, ತೊಟ್ಟು.
  • ಜೋರು, ಕಟು–ವಾಸನೆ, ರುಚಿ.
  • ವಿಶಿಷ್ಟ ಗುಣ, ಲಕ್ಷಣ; ವೈಶಿಷ್ಟ್ಯ; ವೈಲಕ್ಷಣ್ಯ.

  • tang
    ಸಕರ್ಮಕ ಕ್ರಿಯಾಪದ
  • ವಿಶಿಷ್ಟ ಲಕ್ಷಣ, ಗುಣ–ಕೊಡು, ಇಡು.
  • ವಿಶಿಷ್ಟ (ಕಟು) ವಾಸನೆ–ಕೊಡು, ವಾಸನೆ ಇರುವಂತೆ ಮಾಡು.

  • tang
    ನಾಮವಾಚಕ
    ಫೂಕಸ್‍ ಕುಲದ, ಹಲವು ಬಗೆಯ ಸಮುದ್ರದ ಕಳೆ, ಒರಟು ಜೊಂಡು.

    tang
    ಸಕರ್ಮಕ ಕ್ರಿಯಾಪದ
    ಜೋರಾಗಿ ಟಂಗ್‍ ಎನ್ನಿಸು; ಠಣ್‍ಠಣ್‍ ಎನ್ನಿಸು; ಟಂಗ್‍ ಟಂಗ್‍ ಶಬ್ದ ಮಾಡಿಸು, ಠಂಕಾರ ಮಾಡಿಸು ( ಅಕರ್ಮಕ ಕ್ರಿಯಾಪದ ಸಹ).


    logo