(ಬ್ರಿಟಿಷ್ ಪ್ರಯೋಗ) ಮುಸುಕಿನ, ತೋಕೆಯ, ಗೋವಿನ, ಮೆಕ್ಕೆ – ಜೋಳ ಯಾ ಅದರ ಕಾಳು.
Maj.
ಸಂಕ್ಷಿಪ್ತ
Major.
majestic
ಗುಣವಾಚಕ
ವೈಭವಯುಕ್ತ; ಘನತೆ ತೋರುವ.
ಗಂಭೀರ; ಘನ ಗಾಂಭೀರ್ಯವುಳ್ಳ; ಠೀವಿಯ.
ಉದಾತ್ತ; ಭವ್ಯ.
majestically
ಕ್ರಿಯಾವಿಶೇಷಣ
ಘನತೆಯಿಂದ; ವೈಭವದಿಂದ.
ಗಂಭೀರವಾಗಿ; ಠೀವಿಯಿಂದ; ಘನಗಾಂಭೀರ್ಯದಿಂದ (ಕೂಡಿ).
ಉದಾತ್ತ ರೀತಿಯಲ್ಲಿ; ಭವ್ಯವಾಗಿ.
majesty
ನಾಮವಾಚಕ
ಪದಗುಚ್ಛ
Her or His Majesty’s ರಾಷ್ಟ್ರದ, ರಾಜ್ಯದ, ಸಂಸ್ಥೆಗಳ ಹೆಸರುಗಳ ಜೊತೆ ಬಳಸುವ ಬಿರುದು: Her Majesty’s Stationery Office.
(ಭಾವ, ಭಂಗಿ, ಭಾಷೆ, ಮೊದಲಾದವುಗಳ ವಿಷಯದಲ್ಲಿ) ಘನತೆ; ಗಾಂಭೀರ್ಯ; ಭವ್ಯತೆ; ಮಹಿಮೆ.
ರಾಜತ್ವ; ಸಾರ್ವಭೌಮತ್ವ.
(Majesty) ಮಹಾಪ್ರಭು; ಖಾವಂದರು; ಮಹಾಸನ್ನಿಧಾನ; (ರಾಜರನ್ನು, ಸಾರ್ವಭೌಮರನ್ನು, ಸಂಬೋಧಿಸುವಲ್ಲಿ Your ಜೊತೆಗೆ, ಅವರನ್ನು ಪ್ರಸ್ತಾಪಿಸುವಲ್ಲಿ His, Her ಯಾ Their ಜೊತೆಗೆ ಬಳಸುವ ಬಿರುದು).
ಪ್ರಭಾಮಂಡಲದ ನಡುವೆ ಇರುವಂತೆ ಚಿತ್ರಿಸಿದ ದೇವರು ಯಾ ದೇವಪುತ್ರ ಏಸುಕ್ರಿಸ್ತ.
Majlis
ನಾಮವಾಚಕ
(ರಾಜನೀತಿಶಾಸ್ತ್ರ) (ಉತ್ತರ ಆಹ್ರಿಕ ಯಾ ಮಧ್ಯಪ್ರಾಚ್ಯದ ವಿವಿಧ ದೇಶಗಳ, ಮುಖ್ಯವಾಗಿ ಇರಾನಿನ) ಪಾರ್ಲಿಮೆಂಟು; ಸಂಸತ್ತು.
majolica
ನಾಮವಾಚಕ
ಮಜಾಲಿಕ; ಇಟಲಿಯ ಪಿಂಗಾಣಿ; ಗಾಜಿನ ಮೆರುಗು ಕೊಟ್ಟು, ಚಿತ್ರಗಳಿಂದ ಅಲಂಕರಿಸಿದ, ಇಟಲಿ ದೇಶದ, 19ನೆ ಶತಮಾನದ ಮಣ್ಣಿನ ಪಾತ್ರೆಗಳು.
ಮಜಾಲಿಕಗಳ ಆಧುನಿಕ ನಕಲಿಗಳು.
major
ನಾಮವಾಚಕ
ಮೇಜರ್:
(ಸೈನ್ಯ) ಕ್ಯಾಪ್ಟನ್ ದರ್ಜೆಗೆ ಮೇಲಿನ, ಲೆಹ್ಟಿನೆಂಟ್ ಕರ್ನಲ್ ದರ್ಜೆಗೆ ಕೆಳಗಿನ ದರ್ಜೆಯ ಸೈನ್ಯಾಧಿಕಾರಿ.
(ಸೈನ್ಯ ಅಶಿಷ್ಟ) ಸಾರ್ಜೆಂಟ್ ಮೇಜರ್.
ಬ್ಯಾಂಡ್ ಮೇಳದ ಒಂದು ವಿಭಾಗದ ಮುಖ್ಯಸ್ಥ: drum major ಡ್ರಮ್ (ವಾದಕರ) ಮೇಜರ್, ಮುಖ್ಯಸ್ಥ.
ಪ್ರಾಯದವನು; ಪ್ರಾಪ್ತ ವಯಸ್ಕ; ಹರೆಯಕ್ಕೆ, ವಯಸ್ಸಿಗೆ, ಪ್ರಾಯಕ್ಕೆ ಬಂದ ವ್ಯಕ್ತಿ.
(ಅಮೆರಿಕನ್ ಪ್ರಯೋಗ) ವಿದ್ಯಾರ್ಥಿಯ ವಿಶೇಷ ವಿಷಯ, ಪ್ರಧಾನ ವಿಷಯ ಯಾ ಕೋರ್ಸು.
(ಅಮೆರಿಕನ್ ಪ್ರಯೋಗ) ಒಂದು ನಿರ್ದಿಷ್ಟ ವಿಷಯದಲ್ಲಿ ತಜ್ಞತೆ ಸಂಪಾದಿಸುತ್ತಿರುವವನು(ಳು): a philosophy major ತತ್ತ ಶಾಸ್ತ್ರ ಮೇಜರ್.
(ಎರಡು ವಸ್ತುಗಳು, ವರ್ಗಗಳು, ಮೊದಲಾದವುಗಳ ಪೈಕಿ) ದೊಡ್ಡ; ಹಿರಿಯ; ಪ್ರಧಾನ; ಪ್ರಮುಖ: a major road ಪ್ರಧಾನ ರಸ್ತೆ. major war ದೊಡ್ಡ ಯುದ್ಧ. major consideration ಪ್ರಮುಖ ವಿಚಾರ.
(ಸಂಗೀತ)
(ಸ್ವರಾಂತರಗಳ ವಿಷಯದಲ್ಲಿ) ಲಘು ಸ್ಥಾಯಿಗಳಿಗಿಂತ ಅರ್ಧ ಸ್ವರ ಹೆಚ್ಚಾಗಿರುವ.
(ಸ್ವರ ಸಂಯೋಜನೆಗಳ ವಿಷಯದಲ್ಲಿ) ಸ್ವರಶ್ರೇಣಿಯಲ್ಲಿ 3 ಮತ್ತು 4 ಹಾಗೂ 7 ಮತ್ತು 8ರ ನಡುವೆ ಅರ್ಧ ಸ್ವರದ ಅಂತರವುಳ್ಳ.
ಹರೆಯಕ್ಕೆ ಬಂದ; ಪ್ರಾಪ್ತವಯಸ್ಕ; ಪ್ರಾಯಕ್ಕೆ ಬಂದ.
(ಶಸ್ತ್ರಚಿಕಿತ್ಸೆಯ ವಿಷಯದಲ್ಲಿ) ದೊಡ್ಡ; ತೀವ್ರ ಸ್ವರೂಪದ ಯಾ ಜೀವಕ್ಕೆ ಅಪಾಯಕಾರಿಯಾದ.
(ಬ್ರಿಟಿಷ್ ಪ್ರಯೋಗ) (ಮುಖ್ಯವಾಗಿ ಪಬ್ಲಿಕ್ ಶಾಲೆಗಳಲ್ಲಿ, ಕುಲನಾಮಕ್ಕೆ ಸೇರಿಸುವ ಪದ) ಇಬ್ಬರು ಸೋದರರಲ್ಲಿ ಹಿರಿಯ ಅಥವಾ ಶಾಲೆಗೆ ಮೊದಲು ಸೇರಿದ: Brown major (ಬ್ರಿಟಿಷ್ ಪ್ರಯೋಗ) ಹಿರಿಯ ಬ್ರೌನ್; ಶಾಲೆಗೆ ಪ್ರವೇಶಿಸಿದ ಬ್ರೌನ್ ಹೆಸರಿನ ಬಾಲಕರಲ್ಲಿ ಹಿರಿಯ ಇಲ್ಲವೇ ಮೊದಲಿಗ.
(ತರ್ಕಶಾಸ್ತ್ರ)
(ಪದದ ವಿಷಯದಲ್ಲಿ) ಮುಖ್ಯ; ಪ್ರತಿಜ್ಞೆಯ ಸಮರ್ಥನೆಯಲ್ಲಿ ಯಾ ನಿಗಮದಲ್ಲಿ ಬರುವ.
(ಪ್ರತಿಜ್ಞೆಯ ವಿಷಯದಲ್ಲಿ) ಸಾಧ್ಯ ಪದವನ್ನು ಒಳಗೊಂಡಿರುವ.
major
ಅಕರ್ಮಕ ಕ್ರಿಯಾಪದ
(ಅಮೆರಿಕನ್ ಪ್ರಯೋಗ)
(ವಿದ್ಯಾರ್ಥಿಯ ವಿಷಯದಲ್ಲಿ) ಪ್ರಧಾನ ಪಠ್ಯವಿಷಯವಾಗಿ – ತೆಗೆದುಕೊ, ಆರಿಸಿಕೊ, ಅಧ್ಯಯನ ಮಾಡು.
(ಪ್ರಧಾನ) ಪಠ್ಯವಿಷಯದಲ್ಲಿ ಅರ್ಹತೆ ಪಡೆ: majored in philosophy ತತ್ತ ಶಾಸ್ತ್ರದಲ್ಲಿ ಅರ್ಹತೆ ಪಡೆ.