logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

lament
ನಾಮವಾಚಕ
  • (ತೀವ್ರವಾದ ದುಃಖ ಸೂಚನೆಯ) ಅಳು; ಗೋಳು; ಗೋಳಾಟ; ವಿಲಾಪ; ಪ್ರಲಾಪ; ರೋದನ.
  • ಮರಣಗೀತೆ; ಚರಮಶ್ಲೋಕ; ಶೋಕಗೀತೆ.

  • lament
    ಸಕರ್ಮಕ ಕ್ರಿಯಾಪದ ಪದಗುಚ್ಛ
    lament of (or over) ಮರುಗು; ವ್ಯಥೆಪಡು; ವಿಷಾದಿಸು; ದುಃಖಿಸು.
  • (ಒಬ್ಬರಿಗಾಗಿ, ಒಂದು ವಸ್ತುವಿನ ವಿಷಯವಾಗಿ) ಅಳು; ಗೋಳಾಡು; ಗೋಳುಗರೆ; ಹಲುಬು; ಪ್ರಲಾಪಿಸು: nightingales lament without ceasing ನೈಟಿಂಗೇಲ್‍ ಹಕ್ಕಿಗಳು ನಿರಂತರವಾಗಿ ಹಲುಬುತ್ತವೆ.
  • ಮರುಗು; ವಿಷಾದಿಸು; ದುಃಖಿಸು; ದುಃಖಪಡು; ವ್ಯಥೆಪಡು: lamented the loss of his ticket ತನ್ನ ಟಿಕೆಟ್ಟು ಕಳೆದುಹೋದುದಕ್ಕೆ ವಿಷಾದಿಸಿದ.

  • lamentable
    ಗುಣವಾಚಕ
  • (ಘಟನೆ, ವಿಧಿ, ಸ್ಥಿತಿ, ನಡತೆ, ಮೊದಲಾದವುಗಳ ವಿಷಯದಲ್ಲಿ) ಶೋಚನೀಯ; ಶೋಚ್ಯ; ವ್ಯಥೆಪಡಬೇಕಾದ.
  • (ಪ್ರಾಚೀನ ಪ್ರಯೋಗ) ದುಃಖಕರ; ದುಃಖಭರಿತ.

  • lamentably
    ಕ್ರಿಯಾವಿಶೇಷಣ
  • ಶೋಚನೀಯವಾಗಿ.
  • ವ್ಯಥೆಯಿಂದ; ದುಃಖದಿಂದ.

  • lamentation
    ನಾಮವಾಚಕ ಪದಗುಚ್ಛ
    Lamentations of Jeremiah ಜೆರಿಮೆಯನ ವಿಲಾಪಗಳು; ಕ್ರಿಸ್ತಪೂರ್ವ 6ನೇ ಶತಮಾನದಲ್ಲಿ ಜೆರೂಸಲಮ್‍ ನಾಶವಾದುದನ್ನು ಕುರಿತ ಬೈಬಲ್ಲಿನ ಹಳೆಯ ಒಡಂಬಡಿಕೆಯಲ್ಲಿರುವ ಪ್ರಕರಣ.
  • ಅಳುವುದು; ರೋದನ.
  • ಅಳು; ವಿಲಾಪ.

  • lamenter
    ನಾಮವಾಚಕ
    ಅಳುವವ; ರೋದಕ; ವಿಲಾಪಕ; ದುಃಖಿಸುವವ.

    lamentingly
    ಕ್ರಿಯಾವಿಶೇಷಣ
    ದುಃಖಿಸುವಂತೆ; ಹಲುಬುವಂತೆ; ಗೋಳಾಡುವ ರೀತಿಯಲ್ಲಿ.

    lamina
    ನಾಮವಾಚಕ
    (ಬಹುವಚನ laminae ಉಚ್ಚಾರಣೆ ಲ್ಯಾಮಿನೀ). (ಲೋಹ, ಶಿಲೆ, ಮೂಳೆ, ಶಿಲಾಸ್ತರ, ಸಸ್ಯದ ಊತಕ, ಮೊದಲಾದವುಗಳ) ಹಾಳೆ; ರೇಕು; ಪೊರೆ; ತೆಳು – ಪದರ, ಪಟಲ, ಫಲಕ, ತಗಡು.

    laminar
    ಗುಣವಾಚಕ
  • ಪದರುಪದರಾದ; ಫಲಕಾಕೃತಿಯ; ಪದರುಗಳುಳ್ಳ; ರೇಕುಗಳಿಂದ ಕೂಡಿದ.
  • ಪಟಲೀಯ:
    1. ಪಟಲವನ್ನೊಳಗೊಂಡ.
    2. (ಹರಿವಿನ ವಿಷಯದಲ್ಲಿ) ಪ್ರಕ್ಷುಬ್ಧವಾಗಿರದೆ ಸೀದಾ ಹರಿಯುವ.

  • laminate
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    (ವಸ್ತುವಿನ ವಿಷಯದಲ್ಲಿ) ರೇಕುಗಳಾಗಿ, ಹಾಳೆಗಳಾಗಿ – ಸೀಳಿಹೋಗು, ಸೀಳು.
  • (ಲೋಹವನ್ನು) ರೇಕುಗಳಾಗಿ ಬಡಿ; ಹಾಳೆಗಳಾಗಿ ಲಟ್ಟಿಸು.
  • (ಯಾವುದೇ ವಸ್ತುವಿಗೆ) ಲೋಹದ ರೇಕು, ಪ್ಲಾಸ್ಟಿಕ್‍ ಹಾಳೆ – ಹೊದಿಸು; ಫಲಕ ಅಂಟಿಸು.
  • ಪದರದ ಮೇಲೆ ಪದರವಿಟ್ಟು – ರಚಿಸು, ತಯಾರಿಸು.
  • (ವಸ್ತುವನ್ನು) ರೇಕುಗಳಾಗಿ, ಪದರಗಳಾಗಿ – ಸೀಳು.


  • logo