(ಕಾವ್ಯಪ್ರಯೋಗ) (ರೂಪಕವಾಗಿ ಸಹ) ಬೆಳಗು; ಬೆಳಗಿಸು; ಪ್ರಕಾಶಗೊಳಿಸು; ಬೆಳಕು ಕೊಡು; ಬೆಳಕು ಮಾಡು: illumed a picture that hung on the wall ಗೋಡೆಯ ಮೇಲೆ ತೂಗಹಾಕಿದ್ದ ಚಿತ್ರವನ್ನು ಬೆಳಗಿಸಿತು.
illuminance
ನಾಮವಾಚಕ
ದೀಪನ; ಯಾವುದೇ ಬಿಂದುವಿನಲ್ಲಿ ವಿಚ್ಛೇದಕ ಮೇಲ್ಮೈ ಮೇಲೆ ಒಂದು ಮಾನ ವಿಸ್ತೀರ್ಣದ ಮೇಲೆ ಕಂಡು ಬರುವ ದೀಪ್ತ ಹೊನಲು.
illuminant
ಗುಣವಾಚಕ
ಪ್ರಕಾಶಕ; ಬೆಳಗುವ; ಬೆಳಗಿಸುವ; ಪ್ರಕಾಶಗೊಳಿಸುವ.
(ರೂಪಕವಾಗಿ) ಬೆಳಕು ಚೆಲ್ಲುವ; ಸ್ಪಷ್ಟಗೊಳಿಸುವ; ವಿಶದಗೊಳಿಸುವ: illuminant intellect ವಿಶದಗೊಳಿಸುವ ಬುದ್ಧಿಶಕ್ತಿ.
illuminant
ನಾಮವಾಚಕ
ಪ್ರಕಾಶಕ; ಬೆಳಕು ಕೊಡುವ – ವಸ್ತು, ಸಾಧನ ಯಾ ಮೂಲ: the lamp as a domestic illuminant ಮನೆಗೆ ಬೆಳಕು ಕೊಡುವ (ಸಾಧನವಾದ) ದೀಪ.
illuminate
ಸಕರ್ಮಕ ಕ್ರಿಯಾಪದ
ಬೆಳಗು; ಬೆಳಗಿಸು; ಪ್ರಕಾಶಗೊಳಿಸು; ಬೆಳಕು ಕೊಡು; ಬೆಳಕು ಮಾಡು: illuminated a picture that hung on the wall ಗೋಡೆಯ ಮೇಲೆ ತೂಗು ಹಾಕಿದ್ದ ಚಿತ್ರವನ್ನು ಬೆಳಗಿಸಿತು.
ಜ್ಞಾನೋದಯ ಉಂಟುಮಾಡು; ಆಧ್ಯಾತ್ಮಿಕವಾದ ಬೆಳಕು ನೀಡು.
(ಬೌದ್ಧಿಕವಾಗಿ) ಪ್ರಬೋಧಿಸು; ಬೆಳಕು ತೋರು: a teacher gifted to illuminate a body of young students ಎಳೆಯ ವಿದ್ಯಾರ್ಥಿ ವೃಂದಕ್ಕೆ ಬೆಳಕು ತೋರುವ ಶಕ್ತಿಯುಳ್ಳ ಉಪಾಧ್ಯಾಯ.
(ವಿಷಯದ ಮೇಲೆ) ಬೆಳಕು ಚೆಲ್ಲು, ಬೀರು; ವಿಶದಪಡಿಸು; ಸ್ಪಷ್ಟಗೊಳಿಸು: illuminated principles of constitutional law ಸಂವಿಧಾನದ ನ್ಯಾಯತತ್ತ್ವಗಳನ್ನು ವಿಶದಪಡಿಸಿದನು.
ಪ್ರಕಾಶ ಬೀರು; ಉಜ್ಜ್ವಲಗೊಳಿಸು; ಬೆಳಗುವಂತೆ ಮಾಡು: the achievements that illuminate that era ಆ ಕಾಲವನ್ನು ಉಜ್ಜ್ವಲಗೊಳಿಸಿದ ಸಾಧನೆಗಳು.
(ಉತ್ಸವ, ಸಂಭ್ರಮಗಳ ಚಿಹ್ನೆಯಾಗಿ ಕಟ್ಟಡಗಳು ಮೊದಲಾದವಕ್ಕೆ) ಯಥೇಚ್ಛವಾಗಿ ದೀಪಾಲಂಕಾರ ಮಾಡು; ದೀಪಗಳಿಂದ ಬೆಳಗಿಸು.
(ಹಸ್ತಪ್ರತಿ ಮೊದಲಾದವಲ್ಲಿ ಅಕ್ಷರ, ಪದ ಯಾ ಪುಟವನ್ನು) ಸುವರ್ಣಾಕ್ಷರಗಳಿಂದ ಅಲಂಕರಿಸು, ಅಂದಗೊಳಿಸು; ಸುವರ್ಣಾಲಂಕಾರ ಮಾಡು; ಚಿನ್ನ, ಬೆಳ್ಳಿ ಯಾ ಇತರ ಉಜ್ಜ್ವಲ ವರ್ಣಗಳಿಂದ ಬೆಳಗಿಸು.
illuminati
ನಾಮವಾಚಕ
(ಬಹುವಚನ)
(Illuminati) [ವೈಷಾಪ್ಟ್‍ನಿಂದ (Weishaupt) $1776$ರಲ್ಲಿ ಬವೇರಿಯದಲ್ಲಿ ಸ್ಥಾಪಿಸಲ್ಪಟ್ಟ, ದೇವಾಸ್ತಿಕ್ಯದ ಮತ್ತು ಪ್ರಜಾಪ್ರಭುತ್ವದ ತತ್ತ್ವಗಳನ್ನುಳ್ಳ, ಹ್ರೀಮೇಸನ್ ಪಂಗಡದಂತೆ ವ್ಯವಸ್ಥೆಗೊಂಡ] ಗುಪ್ತಸಂಘ.
ರಹಸ್ಯಜ್ಞಾನಿಗಳು; ವಿಶೇಷ ಜ್ಞಾನೋದಯ ಪಡೆದವರೆಂದು ಹೇಳಿಕೊಳ್ಳುವವರು.
illumination
ನಾಮವಾಚಕ
ಬೆಳಗುವಿಕೆ; ಬೆಳಗಿಸುವಿಕೆ; ಪ್ರಕಾಶಗೊಳಿಸುವಿಕೆ.
(ಆಧ್ಯಾತ್ಮಿಕ, ಸಾಂಸ್ಕೃತಿಕ ಯಾ ಬೌದ್ಧಿಕ) ಅರಿವು; ಜ್ಞಾನ; ಜ್ಞಾನೋದಯ: found great illumination in the message ಸಂದೇಶದಲ್ಲಿ ಮಹತ್ತರ ಜ್ಞಾನವನ್ನು ಪಡೆದ.
ಬೆಳಕು ನೀಡಿಕೆ; ಪ್ರಕಾಶನ; ಪ್ರಕಾಶಗೊಳಿಸುವಿಕೆ: the brilliant illumination of the room ಕೊಠಡಿಯ ಉಜ್ಜ್ವಲ ಪ್ರಕಾಶನ.
ದೀಪಾಲಂಕಾರ: illumination of the city in celebration of the victory ವಿಜಯೋತ್ಸವಕ್ಕಾಗಿ ನಗರದ ದೀಪಾಲಂಕಾರ.
(ಹಸ್ತಪ್ರತಿಯ) ಸುವರ್ಣಾಲಂಕರಣ; ಹಸ್ತಪ್ರತಿಯ ಅಕ್ಷರ ಮೊದಲಾದವನ್ನು ಚಿನ್ನ, ಬೆಳ್ಳಿ ಯಾ ಇತರ ಉಜ್ಜ್ವಲ ವರ್ಣಗಳಿಂದ ಅಲಂಕರಿಸುವುದು: interested in the illumination of manuscripts ಹಸ್ತಪ್ರತಿಗಳ ಸುವರ್ಣಾಲಂಕರಣದಲ್ಲಿ ಆಸಕ್ತನಾದ.
(ಭೌತವಿಜ್ಞಾನ) ದೀಪನ; ಬೆಳಕಿನ ಪ್ರವಾಹದ ಹಾದಿಯ ಯಾವುದೋ ಬಿಂದುವಿನಲ್ಲಿ ಒಂದು ಏಕಮಾನ ವಿಸ್ತೀರ್ಣದಲ್ಲಿನ ದೀಪಕತೆ (luminous flux).