logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

dauphin
ನಾಮವಾಚಕ
(ಚರಿತ್ರೆ) ಡಾಹಿನ್‍; ಹ್ರೆಂಚ್‍ ದೊರೆಯ ಹಿರಿಯ ಮಗ.

dauphiness
ನಾಮವಾಚಕ
(ಚರಿತ್ರೆ) ಡಾಹಿನಿಸ್‍; (ಹ್ರೆಂಚ್‍ ದೊರೆಯ) ಹಿರಿಯ ಸೊಸೆ; ಹಿರಿಯ ಮಗನ ಹೆಂಡತಿ.

davenport
ನಾಮವಾಚಕ
  • (ಬ್ರಿಟಿಷ್‍ ಪ್ರಯೋಗ) ಡ್ಯಾವನ್‍ಪೋರ್ಟ್‍; ಲೇಖನಸಾಮಗ್ರಿ ಮೇಜು; ಸೆಳೆಖಾನೆಗಳು ಮತ್ತು ಕೀಲಿಯುಳ್ಳ, ಬರೆಯುವ ಹಲಗೆ ಇರುವ ಮೇಜು.
  • (ಅಮೆರಿಕನ್‍ ಪ್ರಯೋಗ) (ಸಾಮಾನ್ಯವಾಗಿ ಹಾಸಿಗೆಯಾಗಿ ಬದಲಾಯಿಸಬಹುದಾದ ದೊಡ್ಡ ಸೋಹ). Figure: davenport-2

  • Davis apparatus
    ನಾಮವಾಚಕ
    ಡೇವಿಸ್‍ ಸಾಧನ; ಜಲಾಂತರ್ಗಾಮಿ ನೌಕೆಯೊಳಗಿಂದ ತಪ್ಪಿಸಿಕೊಳ್ಳಲು ಬಳಸುವ ಸಲಕರಣೆ.

    davit
    ನಾಮವಾಚಕ
    ಡ್ಯಾವಿಟ್‍; ಲಂಗರು, ದೋಣಿ, ಮೊದಲಾದವನ್ನು ಎತ್ತಿ ಇಳಿಸಲು ಬಳಸುವ ಕ್ರೇನು, ಬಕಯಂತ್ರ.

    Davy
    ನಾಮವಾಚಕ
    ಡೇವಿ(ದೀಪ); ರಕ್ಷಾದೀಪ; ಗಣಿಗಾರದೀಪ; ಗಣಿಯೊಳಗಿನ ಅನಿಲ ಸಿಡಿಯದಂತೆ ತಂತಿ ಜಾಲರಿ ಸುತ್ತಿರುವ, ಗಣಿಗಾರರು ಒಯ್ಯುವ ದೀಪ.

    Davy Jones
    ನಾಮವಾಚಕ ಪದಗುಚ್ಛ
    (ನೌಕಾಯಾನ, ಅಶಿಷ್ಟ) ಡೇವಿ ಜೋನ್ಸ್‍; ಸಮುದ್ರ ಪಿಶಾಚಿ; ಕಡಲ ದೆವ್ವ. Davy Jones’s locker ಸಾಗರ ಸಮಾಧಿ; ಕಡಲಾಳ; ಮುಳುಗಿ ಹೋದವರ ಗೋರಿಯಾಗಿರುವ ಸಮುದ್ರದ ತಲ.

    Davy lamp
    ನಾಮವಾಚಕ
    = Davy.

    daw
    ನಾಮವಾಚಕ
    = jackdaw.

    dawdle
    ಅಕರ್ಮಕ ಕ್ರಿಯಾಪದ ಪದಗುಚ್ಛ
    dawdle away (ಕಾಲ ಮೊದಲಾದವನ್ನು) ಕಳೆ.
  • ವ್ಯರ್ಥವಾಗಿ ಹೊತ್ತು ಕಳೆ; ಕಾಲ ಕಳೆ; ಕಾಲಹರಣ ಮಾಡು.
  • ನಿಧಾನಮಾಡು; ಛಾನಸಮಾಡು ( ಸಕರ್ಮಕ ಕ್ರಿಯಾಪದ ಸಹ).
  • ಸೋಮಾರಿಯಾಗು; ಪಾಲುಮಾರು.


  • logo