ಒತ್ತುಚಿತ್ರ ತಯಾರಿಸು; ಚಿತ್ರವಿರುವ ಕಾಗದದ ಹಿಂಭಾಗಕ್ಕೆ ಬಣ್ಣ ಹಾಕಿ, ಅದನ್ನು ಪ್ರತಿ ಮಾಡಬೇಕಾದ ಹಾಳೆಯ ಮೇಲಿಟ್ಟು, ಅಸಲಿ ಚಿತ್ರದ ಹೊರರೇಖೆಗಳನ್ನು ಮೊಂಡು ಮೊಳೆಯಿಂದ ಒತ್ತಿ, ಪ್ರತಿಚಿತ್ರ ತೆಗೆ.
calk
ಸಕರ್ಮಕ ಕ್ರಿಯಾಪದ
(ಅಮೆರಿಕನ್ ಪ್ರಯೋಗ) =caulk.
calkin
ನಾಮವಾಚಕ
(ಲಾಳದ) ಕೆಳಬಾಗು (ಮಡಿಸಿದ) ಏಣು.
ಹಲ್ಲೆ; ಜೋಡಿನ ಲಾಳ; ಮೋಜ ಯಾ ಜೋಡಿನ ಅಟ್ಟೆಯಲ್ಲಿ ರಕ್ಷಣೆಗಾಗಿ ಹಾಕಿರುವ ಕಬ್ಬಿಣದ ತುಂಡು.
call
ಸಕರ್ಮಕ ಕ್ರಿಯಾಪದ
ಅಕರ್ಮಕ ಕ್ರಿಯಾಪದ
ನುಡಿಗಟ್ಟು
(ರೂಪಕವಾಗಿ ಸಹ) ಕೂಗು; ಗಟ್ಟಿಯಾಗಿ ಕೂಗು; ಒದರು: call his name to see if he is in ಅವನು ಒಳಗಿದ್ದಾನೋ ಇಲ್ಲವೋ ತಿಳಿಯಲು ಅವನ ಹೆಸರು ಹಿಡಿದು ಕೂಗು.
(ಟ್ಯಾಕ್ಸಿ, ಸಾಕ್ಷಿ, ನಾಟಕದ ಕೊನೆಯಲ್ಲಿ ನಟ ಮೊದಲಾದವರನ್ನು) ಕರೆ; ಹಾಜರಾಗಲು ಹೇಳು; ಬರಹೇಳು (ರೂಪಕವಾಗಿ ಸಹ): call him here ಅವನನ್ನು ಇಲ್ಲಿಗೆ ಕರೆ. call a cab ಗಾಡಿ ಬರಹೇಳು.
ಹಾಜರಿ ತೆಗೆದುಕೊ; ಹಾಜರಿ ಕೂಗು; (ವ್ಯಕ್ತಿಗಳು ಹಾಜರಿರುವುದನ್ನು ದೃಢಪಡಿಸಿಕೊಳ್ಳಲು ಗಟ್ಟಿಯಾಗಿ ಅವರ) ಹೆಸರನ್ನು ಓದು; ಹೆಸರು ಕರೆ: call the roll ಹಾಜರಿ ತೆಗೆದುಕೊ.
ಕೂಗಿ ಎಬ್ಬಿಸು; ಜೋರಾಗಿ ಕರೆದು ನಿದ್ದೆಯಿಂದೇಳಿಸು: call me at 7a.m. ಬೆಳಿಗ್ಗೆ ಏಳು ಗಂಟೆಗೆ ನನ್ನನ್ನು ಎಬ್ಬಿಸು.
ಟೆಲಿಹೋನ್ ಮಾಡು; ಸುದ್ದಿಯನ್ನು ದೂರವಾಣಿ ಮೂಲಕ ತಿಳಿಸು.
(ವಿಧ್ಯುಕ್ತವಾಗಿ) ಬರಹೇಳು; ಅಧಿಕೃತವಾಗಿ ಕರೆ ನೀಡು.
(ಸಭೆ, ಸಮಿತಿ. ಮೊದಲಾದವನ್ನು) ಕರೆ; ಸೇರಲು ಸಮಯ ಗೊತ್ತುಮಾಡು; ಸೇರಿಸು; ಕೂಡಿಸು.
ಕರೆ; ಹೆಸರಿಡು; ನಾಮಕರಣ ಮಾಡು; ಹೆಸರಿಸು: they call him Ajay ಅವರು ಅವನನ್ನು ಅಜಯ್ ಎಂದು ಕರೆಯುತ್ತಾರೆ.
(ಇಸ್ಪೀಟಿನಲ್ಲಿ) (ಇಳಿದಿರುವ ಎಲೆಯನ್ನು ಯಾ ಇತರ ಎಲೆಯನ್ನು) ಆಡುವಂತೆ ಹೇಳು; ನಿಯಮಿಸು; ತುರುಫು ಇಳಿಯಲು ಸೂಚಿಸು.
ಭಾವಿಸು; ಪರಿಗಣಿಸು; ತೀರ್ಮಾನಿಸು; ಎನ್ನು; ಎಂದು ಕರೆ ಯಾ ಹೇಳು: they called me a liar ಅವರು ನನ್ನನ್ನು ಸುಳ್ಳ ಎಂದರು. I call that mean ಅದು ಹಲ್ಕಾ ಎನ್ನುತ್ತೇನೆ.
ಕರೆ; ಒತ್ತಾಯಪಡಿಸು: duty calls ಕರ್ತವ್ಯ ಕರೆಯುತ್ತದೆ.
ಕರೆ ಕೊಡು; ಆಮಂತ್ರಿಸು; ಆಹ್ವಾನಿಸು: many are called but few chosen ಆಹ್ವಾನಿತರಾಗುವವರು ಬಹುಮಂದಿ, ಆಯ್ಕೆ ಹೊಂದುವವರು ಕೆಲವರು ಮಾತ್ರ.
ಸಾರು; ಘೋಷಿಸು; ಪ್ರಕಟಿಸು; ಗಟ್ಟಿಯಾಗಿ ಹೇಳು.
(ಕ್ರಿಕೆಟ್ ಅಂಪೈರನ ವಿಷಯದಲ್ಲಿ) (ಬೋಲರು ಎಸೆದ) ಚೆಂಡನ್ನು–ಅಸಿಂಧುಗೊಳಿಸು, ಅಕ್ರಮವೆನ್ನು, ಗಣನೆಗೆ ಬರದೆನ್ನು.
(ನಾಣ್ಯವನ್ನು ಮೇಲೆಸೆಯುವುದು ಮೊದಲಾದವುಗಳ) ಫಲಿತಾಂಶವನ್ನು ಊಹಿಸಲು ಪ್ರಯತ್ನಿಸು.
(ವ್ಯಕ್ತಿಯನ್ನು–ಮನೆಯಲ್ಲೋ ವಿಮಾನ ಯಾ ರೈಲ್ವೆ ನಿಲ್ದಾಣದಲ್ಲೋ) ಭೇಟಿಯಾಗು; ಸಂಧಿಸು; ಭೇಟಿ ಕೊಡು.
ಕ್ರೈಸ್ತ ಧರ್ಮಾಧಿಕಾರಿ ಸ್ಥಾನಕ್ಕೆ–ಕರೆ, ಕರೆಕೊಡು, ಆಹ್ವಾನಿಸು.
ಅಧಿಕಾರಯುತವಾಗಿ–ಘೋಷಿಸು, ಸೂಚಿಸು, ಹೇಳು, ಎನ್ನು.
(ಒಂದರೆಡೆಗೆ) ಗಮನ ಸೆಳೆ.
ಕರೆ; ಆಜ್ಞಾಪಿಸು; ಅಪ್ಪಣೆ ಮಾಡು; ಆದೇಶ ನೀಡು: call one to witness ಸಾಕ್ಷ್ಯ ನೀಡಲು ಕರೆ, ಆದೇಶ ನೀಡು.
ಉಲಿವಾದ್ಯ; ಹಕ್ಕಿ ಮೊದಲಾದವುಗಳ ಕೂಗನ್ನು ಅನುಕರಿಸಿ ಅವುಗಳನ್ನು ಆಕರ್ಷಿಸುವ ವಾದ್ಯ.
(ಕಹಳೆ ಮೊದಲಾದವುಗಳ ಮೂಲಕ ಕೊಡುವ) ಸಂಕೇತ; ಸೂಚನೆ; ಸೀಟಿ; ಸಿಳ್ಳು.
(ಸಂಕೇತ, ಸೂಚನೆ ಕೊಡುವ) ಸಿಳ್ಳು; ಸೀಟಿ; ಶಿಲ್ಪಿ.
(ಸ್ವಲ್ಪ ಸಮಯದ, ಮುಖ್ಯವಾಗಿ ಔಪಚಾರಿಕ) ಭೇಟಿ:pay a call ಭೇಟಿ ಕೊಡು.
(ಮೆಚ್ಚುಗೆ ಸ್ವೀಕರಿಸಲು, ಯಾ ಪೂರ್ವಾಭ್ಯಾಸಕ್ಕೆ, ಪ್ರದರ್ಶನಕ್ಕೆ ಯಾ ರಂಗಸ್ಥಳಕ್ಕೆ ಬರಬೇಕೆಂದು ನಟನಿಗೆ, ನ್ಯಾಯವೃತ್ತಿ ಅವಲಂಬಿಸಲು ವಕೀಲನಿಗೆ, ದೇವರಿಂದ ಯಾ ಭಕ್ತವೃಂದದಿಂದ ಯಾ ಆತ್ಮಸಾಕ್ಷಿಯಿಂದ ವ್ಯಕ್ತಿಗೆ ಪಾದ್ರಿಯಾಗಲು ಕೊಡುವ) ಕರೆ; ಆಹ್ವಾನ; ಆಮಂತ್ರಣ.
ಆವಶ್ಯಕತೆ; ಅಗತ್ಯ; ಪ್ರಮೇಯ; ಸಂದರ್ಭ: no call to blush ನಾಚಿಕೊಳ್ಳಬೇಕಾದ ಅಗತ್ಯವಿಲ್ಲ.
(ಮುಖ್ಯವಾಗಿ ಹಣದ ಬಾಕಿಗಾಗಿ) ತಗಾದೆ; ಒತ್ತಾಯ; ಬಲಾತ್ಕಾರ.
(ಇಸ್ಪೀಟು)
ಸವಾಲು (ಮಾಡಲು ಆಟಗಾರನ) ಹಕ್ಕು ಯಾ ಸರದಿ.
(ಹೀಗೆ ಮಾಡಿದ) ಸವಾಲು ಮೊದಲಾದವು.
ಕಾಲ್; ಕರೆ:
ಟೆಲಿಹೋನು ಮಾಡುವಿಕೆ; ಟೆಲಿಹೋನಿನಲ್ಲಿ ಮಾತನಾಡುವಿಕೆ.
ಟೆಲಿಹೋನಿನಲ್ಲಿ ಮಾತನಾಡಬೇಕೆಂಬ ಕರೆ; ಟೆಲಿಹೋನು ಕರೆ.
ಟೆಲಿಹೋನು–ಸಂಭಾಷಣೆ, ಮಾತುಕತೆ.
(ಷೇರು ವ್ಯಾಪಾರ) ವಾಪಸುಹಕ್ಕು; ಗೊತ್ತಾದ ತಾರೀಖಿನಲ್ಲಿ ಷೇರು ಪತ್ರಗಳನ್ನು ವಾಪಸು ಪಡೆಯುವ ಹಕ್ಕು.
call of nature
ನಾಮವಾಚಕ
ದೇಹಬಾಧೆ; ಮಲ ಯಾ ಮೂತ್ರ ವಿಸರ್ಜನೆಯ ಆಪೇಕ್ಷೆ.
call-box
ನಾಮವಾಚಕ
ಕರೆಪೆಟ್ಟಿಗೆ; ಪೊಲೀಸ್ ಯಾ ಅಗ್ನಿಶಾಮಕ ದಳದವರನ್ನು ಕರೆಯಲು ಹೊರಗೆ ಇಟ್ಟಿರುವ ಟೆಲಿಹೋನಿನ ಯಾ ಸಂಕೇತದ ಪೆಟ್ಟಿಗೆ.
(ಬ್ರಿಟಿಷ್ ಪ್ರಯೋಗ) ಸಾರ್ವಜನಿಕ ಟೆಲಿಹೋನ್–ಬೂತು, ಮಳಿಗೆ, ಕೊಠಡಿ.
call-boy
ನಾಮವಾಚಕ
ಕರೆಯಾಳು; ಕೂಗಾಳು; ನಟರನ್ನು ರಂಗಕ್ಕೆ ಕರೆವ ಹುಡುಗ ಯಾ ವ್ಯಕ್ತಿ.
(ಅಮೆರಿಕನ್ ಪ್ರಯೋಗ) ಗಂಟೆಮಾಣಿ; ಹೋಟೆಲುಗಳಲ್ಲಿ ಯಾ ಕ್ಲಬ್ಬುಗಳಲ್ಲಿ ಅತಿಥಿಗಳಿಗೆ ಪರಿಚಾರಿಕೆ ಕೆಲಸ ಮಾಡಿಕೊಡುವ ಹುಡುಗ.
call-day
ನಾಮವಾಚಕ
ವಕೀಲಿ ಸನ್ನದುದಿನ; ಲಂಡನ್ನಿನ ನ್ಯಾಯವಾದಿಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಸನ್ನದು ಕೊಡುವ ದಿನ.
call-girl
ನಾಮವಾಚಕ
ಕರೆವೇಶ್ಯೆ; ಹೋನ್ ಸೂಳೆ; ಟೆಲಿಹೋನ್ ಮೂಲಕ ದೊರೆಯುವ ಸೂಳೆ, ವೇಶ್ಯೆ; ಕರೆಹುಡುಗಿ.