logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

bailsman
ನಾಮವಾಚಕ
ಜಾಮೀನುದಾರ; ಜಾಮೀನಾಗುವವನು; ಜಾಮೀನು ಕೊಡುವವನು.

bain-marie
ನಾಮವಾಚಕ
  • (ಅಡಿಗೆ ಪಾತ್ರೆಗಳನ್ನಿರಿಸಿ ನಿಧಾನವಾಗಿ ಕಾಯಿಸಲು ಉಪಯೋಗಿಸುವ) ಕುದಿಪಾತ್ರೆ; ಕುದಿನೀರು ಕೊಳಗ.
  • = double boiler.

  • Bairam
    ನಾಮವಾಚಕ ಪದಗುಚ್ಛ
    ಬೈರಾಮ್‍; ವರ್ಷಕ್ಕೆರಡು ಬಾರಿ ಬರುವ ಮುಸ್ಲಿಮರ ಒಂದು ಹಬ್ಬ.
  • Greater Bairam ದೊಡ್ಡ ಬೈರಾಮ್‍; ಎಪ್ಪತ್ತು ದಿವಸಗಳ ತರುವಾಯ ಬರುವ ನಾಲ್ಕು ದಿನಗಳ ಹಬ್ಬ.
  • Lesser Bairam ಚಿಕ್ಕ ಬೈರಾಮ್‍; ರಂಜಾನ್‍ ಉಪವಾಸದ ತರುವಾಯ ಬರುವ ಮೂರು ದಿನಗಳ ಹಬ್ಬ.

  • bairn
    ನಾಮವಾಚಕ
    (ಸ್ಕಾಟ್ಲಂಡ್‍, ಉತ್ತರ ಇಂಗ್ಲಂಡ್‍ ಯಾ ಸಾಹಿತ್ಯಕ ಪ್ರಯೋಗ) ಮಗು; ಹಸುಳೆ; ಕೂಸು.

    bait
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
  • (ಕಟ್ಟಿಹಾಕಿದ ಕರಡಿ ಮೊದಲಾದವುಗಳ ಮೇಲೆ) ನಾಯಿಗಳನ್ನು ಛೂಬಿಡು.
  • (ಕಟ್ಟಿದ ಪ್ರಾಣಿಯನ್ನು) ನಾಯಿಗಳನ್ನು ಛೂ ಬಿಟ್ಟು – ಪೀಡಿಸು, ಕಾಡು, ಹಿಂಸಿಸು, ಗೋಳಾಡಿಸು.
  • (ಅಸಹಾಯಕನನ್ನು ಗೇಲಿ, ಅಪಹಾಸ್ಯ, ಮೊದಲಾದವುಗಳಿಂದ) ಪೀಡಿಸು; ಕಾಡು; ಹಿಂಸಿಸು; ಗೋಳಾಡಿಸು.
  • (ಪ್ರಾಚೀನ ಪ್ರಯೋಗ) (ಪ್ರಯಾಣದಲ್ಲಿ ಕುದುರೆಗಳಿಗೆ) ಮೇವಿಡು; ಹುಲ್ಲು ನೀರಿಡು; ಮೇವು ಕೊಡು.
  • (ಗಾಳ, ಬಲೆ ಯಾ ಮೀನು ಹಿಡಿಯುವ ಸ್ಥಳದಲ್ಲಿ, ನಿಜವಾದ ಯಾ ಕೃತಕವಾದ) ಆಹಾರವನ್ನಿಡು; ತಿಂಡಿಯನ್ನಿಡು.
  • (ಆಸೆ ತೋರಿಸಿ) ಸೆಳೆ; ಆಕರ್ಷಿಸು: bait a husband with culinary artistry ಪಾಕ ಕಲೆಯಿಂದ ಗಂಡನನ್ನು ಆಕರ್ಷಿಸು.

  • bait
    ನಾಮವಾಚಕ
  • (ಬೇಟೆಯನ್ನು ಆಕರ್ಷಿಸಲು ಇರುವ) ಆಹಾರ; ತಿಂಡಿ: live bait (ಗಾಳಕ್ಕೆ ಸಿಕ್ಕಿಸುವ) ಎರೆ; ಕಿರುಮೀನು ಯಾ ಚಿಕ್ಕ ಹುಳುಗಳು.
  • (ರೂಪಕವಾಗಿ) ಆಸೆ; ಸೆಳೆತ; ಆಕರ್ಷಣೆ; ಪ್ರಲೋಭನೆ.
  • (ಪ್ರಾಚೀನ ಪ್ರಯೋಗ) (ಪ್ರಯಾಣದಲ್ಲಿ ಉಪಾಹಾರ ಯಾ ವಿಶ್ರಾಂತಿಗಾಗಿ) ತಂಗುವುದು; ತಂಗುವಿಕೆ; ತಂಗಣೆ.
  • (ಕರಗಿದ ಗಾಜು ಮೊದಲಾದವನ್ನು ಉರುಳೆಯಾಗಿ ಎಳೆಯಲು ಬಳಸುವ) ಕಾದ ಕಬ್ಬಿಣದ ಸಲಾಕಿ.

  • bait
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) = 4bate.

    baiting
    ನಾಮವಾಚಕ ಪದಗುಚ್ಛ
    bull baiting ಗೂಳಿಯ ಮೇಲೆ ನಾಯಿಗಳನ್ನು ಛೂ ಬಿಟ್ಟು ಹಿಂಸಿಸುವಿಕೆ.
  • ಪ್ರಾಣಿಪೀಡನೆ; ನಾಯಿಗಳನ್ನು ಛೂ ಬಿಟ್ಟು ಪ್ರಾಣಿಯನ್ನು ಹಿಂಸಿಸುವಿಕೆ.
  • ಕಾಟ; ಪೀಡಿಸುವುದು; ಗೋಳಾಡಿಸುವುದು.

  • baize
    ನಾಮವಾಚಕ
    ಬೇ; ಹೊದಿಸಲು ಬಳಸುವ ಉಣ್ಣೆಯ, ಮುಖ್ಯವಾಗಿ ಹಸಿರು ಉಣ್ಣೆಯ, ಹಾಗೂ ಉದ್ದವಾದ ಜುಂಗುಗಳಿರುವ ಒರಟು ಬಟ್ಟೆ.

    bajra
    ನಾಮವಾಚಕ
    (ಇಂಡಿಯದ) ಜೋಳ; ಬಾಜರಾ; ಜೋಳ ಯಾ ಅಂತಹುದೇ ಧಾನ್ಯ.


    logo