ಅಮೂರ್ತೀಕರಣ; ಭಾವನೆಯೊಂದನ್ನು ಅದರ ಮೂರ್ತರೂಪ, ಗುಣ, ಲಕ್ಷಣಗಳಿಂದ ಬೇರ್ಪಡಿಸುವುದು.
(ಅಮೂರ್ತ) ಭಾವನೆ; ಕಲ್ಪನೆ; ಕೇವಲ ಭಾವನೆಯ ರೂಪದಲ್ಲಿರುವ ವಿಷಯ ಯಾ ಅದನ್ನು ಸೂಚಿಸುವ ಪದ: death is an abstraction like space or time ದೇಶ ಯಾ ಕಾಲಗಳಂತೆಯೇ ಮೃತ್ಯುವೂ ಒಂದು (ಅಮೂರ್ತ) ಭಾವನೆ.
ಕೇವಲ ಕಲ್ಪನೆ; ಕಾಲ್ಪನಿಕ ಭಾವನೆ; ಕಾರ್ಯಸಾಧ್ಯವಲ್ಲದ, ಅವಾಸ್ತವಿಕವಾದ ಯಾ ಯಾವುದೇ ಪ್ರಾಯೋಗಿಕ ಪ್ರಯೋಜನಕ್ಕೆ ಒಯ್ಯದ ಭಾವನೆ: don’t lose yourself in abstractions ಬರಿ ಕಲ್ಪನೆಗಳಲ್ಲಿ ಮುಳುಗಿಹೋಗಬೇಡ (ವಾಸ್ತವಿಕ ಪರಿಸ್ಥಿತಿಗಳನ್ನು ಗವನದಲ್ಲಿಟ್ಟುಕೊ)
ಅಡ್ಡಜ್ಞಾನ; ಅನ್ಯಮನಸ್ಕತೆ.
ಅಮೂರ್ತ ಕಲಾಕೃತಿ; ವಸ್ತುಗಳನ್ನು ಅನುಕರಿಸದ, ಅವುಗಳ ಪ್ರತಿಕೃತಿಗಳನ್ನು ರಚಿಸದ ಕಲಾಕೃತಿ.
abstractionism
ನಾಮವಾಚಕ
ಅಮೂರ್ತವಾದ; ಮುಖ್ಯವಾಗಿ ಕಲೆಯಲ್ಲಿ ಅಮೂರ್ತಗಳ ಸೃಷ್ಟಿ ಯಾ ರಚನೆ.
ಅಮೂರ್ತವಾದ; ಅಮೂರ್ತಕಲೆಯ ತತ್ತ್ವಗಳು ಯಾ ಧ್ಯೇಯಗಳು.
abstractionist
ನಾಮವಾಚಕ
ಕಲ್ಪನಾವಾದಿ; ವಸ್ತುಭೂತ ವಿಷಯಗಳಿಗಿಂತ ಹೆಚ್ಚಾಗಿ ಕಲ್ಪನೆಗಳಲ್ಲಿ, ಭಾವನೆಗಳಲ್ಲಿ ನಿರತನಾಗಿರುವವನು.
ಅಮೂರ್ತ ಕಲಾಕಾರ.
ಅಮೂರ್ತ ಕಲೆಯ ಪ್ರತಿಪಾದಕ ಯಾ ಸಮರ್ಥಕ.
abstractionist
ಗುಣವಾಚಕ
ಅಮೂರ್ತಕಲೆಯ; ಅಮೂರ್ತ ಕಲೆಗೆ ಸಂಬಂಧಿಸಿದ.
abstractly
ಕ್ರಿಯಾವಿಶೇಷಣ
ಸಂಗ್ರಹವಾಗಿ; ಸಂಕ್ಷೇಪವಾಗಿ.
(ವಸ್ತುಗಳಿಂದ ಅವುಗಳ ಲಕ್ಷಣಗಳನ್ನು ಭಾವನೆಯಲ್ಲಿ) ಪ್ರತ್ಯೇಕಿಸಿ.
abstractness
ನಾಮವಾಚಕ
ಅಮೂರ್ತತೆ; ವಾಸ್ತವಿಕವಾಗಿ ಯಾ ಮೂರ್ತವಾಗಿ ಯಾ ಸಾಮಾನ್ಯವಾಗಿ ಇರುವುದರಿಂದ ಭಿನ್ನವಾಗಿರುವಿಕೆ.