(ಆಡುಮಾತು) ತಿಳಿಯದ; ಗೊತ್ತಾಗದ; ಅಜ್ಞಾತ: was there all the time unbeknown to us ನಮಗೆ ಗೊತ್ತಾಗದಂತೆ ಅಷ್ಟು ಕಾಲವೂ ಅಲ್ಲಿಯೇ ಇದ್ದ. unbeknown to ತಿಳಿಯಗೊಡದೆ; ತಿಳಿವಳಿಕೆಗೆ ಬಾರದೆ, ತರದೆ: stole out unbeknown to us ನಮಗೆ ಯಾರಿಗೂ ತಿಳಿಯದಂತೆ ಹೊರಕ್ಕೆ ನುಸುಳಿದ.
unbeknownst
ಗುಣವಾಚಕ
= unbeknown.
unbelief
ನಾಮವಾಚಕ
(ಮುಖ್ಯವಾಗಿ ಮತ, ಗ್ರಂಥ, ಧರ್ಮ, ಮೊದಲಾದವುಗಳಲ್ಲಿ) ಅಪನಂಬಿಕೆ; ಅವಿಶ್ವಾಸ; ಅಶ್ರದ್ಧೆ; ನಂಬಿಕೆಯಿಲ್ಲದಿರುವುದು.