logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

tamponage
ನಾಮವಾಚಕ
= tamponade.

tan
ಕ್ರಿಯಾಪದ ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
ಕಂದುಬಣ್ಣಕ್ಕೆ ತಿರುಗು; ಕಂದಾಗು.
  • (ಟ್ಯಾನಿಕ್‍ ಆಮ್ಲದ ದ್ರಾವಣದಲ್ಲಿ ನೆನಸಿ ಯಾ ಖನಿಜ ಲವಣಗಳು ಮೊದಲಾದವನ್ನು ಬಳಸಿ)(ಚರ್ಮವನ್ನು) ಹದಮಾಡು.
  • (ಬಿಸಿಲಿಗೆ, ನೇರಳಾತೀತ ಬೆಳಕಿಗೆ ಒಡ್ಡಿ) ಕಂದು ಬಣ್ಣಕ್ಕೆ ತಿರುಗಿಸು; ಕಂದಿಸು.
  • (ಅಶಿಷ್ಟ) ಚೆನ್ನಾಗಿ ಹೊಡೆ; ಚಚ್ಚು; ತದುಕು; ಸದೆ ಬಡಿ.

  • tan
    ನಾಮವಾಚಕ ಪದಗುಚ್ಛ
  • ಚರ್ಮ ಹದಮಾಡುವ ತೊಗಟೆ, ಮುಖ್ಯವಾಗಿ ಓಕ್‍ ಮರದ ಜಜ್ಜಿದ ಚಕ್ಕೆ, ತೊಗಟೆ.
  • ಹಳದಿಗಂದು ಬಣ್ಣ.
  • (ಬಿಸಿಲಿನಿಂದ, ನೇರಳಾತೀತ ಬೆಳಕಿನಿಂದ ಆದ ಮೈ ಚರ್ಮದ) ಬಿಸಿಲುಗಂದು (ಬಣ್ಣ).
  • = ಪದಗುಚ್ಛ \((2)\).

  • tan
    ಗುಣವಾಚಕ
    ಹಳದಿ ಕಂದುಬಣ್ಣದ.

    tan-liquor
    ನಾಮವಾಚಕ
    (ಚರ್ಮ ಹದ ಮಾಡುವ) ಚಕ್ಕೆ ಕಷಾಯ; ತೊಗಟೆ ರಸ.

    tan-pit
    ನಾಮವಾಚಕ
    ಚರ್ಮ ಹದಮಾಡುವ ಕಷಾಯದ ಕುಳಿ, ಗುಂಡಿ.

    tan-vat
    ನಾಮವಾಚಕ
    = tan-pit.

    tan-yard
    ನಾಮವಾಚಕ
    = tannery.

    tan.
    ಸಂಕ್ಷಿಪ್ತ
    tangent.

    tanager
    ನಾಮವಾಚಕ
    ಟ್ಯಾನಜರ್‍ ಹಕ್ಕಿ; ತ್ರಾಪಿಡೇ ಉಪವಂಶಕ್ಕೆ ಸೇರಿದ, ಅಮೆರಿಕದ ಒಂದು ಪುಟ್ಟ ಹಕ್ಕಿ (ಇದರ ಗಂಡುಹಕ್ಕಿಗೆ ಸಾಮಾನ್ಯವಾಗಿ ಉಜ್ಜ್ವಲವರ್ಣದ ಗರಿಗಳಿರುತ್ತವೆ).


    logo