(ವಿದ್ಯೆಯಿಲ್ಲದಿರುವುದರಿಂದಾಗುವ) ತಪ್ಪು; ದೋಷ; ಪ್ರಮಾದ: many illiteracies of the first publishers of Shakespeare’s works ಷೇಕ್ಸ್‍ಪಿಯರ್ ಕೃತಿಗಳ ಪ್ರಥಮ ಪ್ರಕಾಶಕರ ಅನೇಕ ಪ್ರಮಾದಗಳು.
illiterate
ಗುಣವಾಚಕ
ಅನಕ್ಷರಸ್ಥ; ಅಕ್ಷರಜ್ಞಾನವಿಲ್ಲದ: a largely illiterate population ಬಹುಮಟ್ಟಿಗೆ ಅನಕ್ಷರಸ್ಥರಾದ ಜನತೆ.
ಕಲಿಕೆಯಿಲ್ಲದ; ವಿದ್ಯೆಯಿಲ್ಲದ; ಅವಿದ್ಯಾವಂತ; ಓದು ಬರಹ ಬಾರದ.
(ನಿರ್ದಿಷ್ಟ ಕ್ಷೇತ್ರದಲ್ಲಿ) ಜ್ಞಾನವಿಲ್ಲದ; ಏನೂ ಗೊತ್ತಿಲ್ಲದ: he is musically illiterate ಅವನು ಸಂಗೀತದಲ್ಲಿ ಏನೇನೂ ಗೊತ್ತಿಲ್ಲದವನು.
illiterate
ನಾಮವಾಚಕ
ಅನಕ್ಷರಸ್ಥ; ಅಕ್ಷರಜ್ಞಾನವಿಲ್ಲದವನು.
ಅವಿದ್ಯಾವಂತ; ಓದುಬಾರದವ; ಓದುಬರಹ ಬರದವ.
(ನಿರ್ದಿಷ್ಟ ವಿಷಯದಲ್ಲಿ) ಅಜ್ಞಾನಿ; ಮೂಢ; ಏನೂ ತಿಳಿಯದವನು.