logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

daubster
ನಾಮವಾಚಕ
= dauber.

dauby
ಗುಣವಾಚಕ
  • (ಗೋಂದು ಮೊದಲಾದವುಗಳ ವಿಷಯದಲ್ಲಿ) ಅಂಟಿಕೊಳ್ಳುವ; ಹತ್ತುವ; ಅಂಟಾದ; ಮೆತ್ತಿಕೊಳ್ಳುವ.
  • (ಚಿತ್ರ ಮೊದಲಾದವುಗಳ ವಿಷಯದಲ್ಲಿ) ಒರಟೊರಟಾಗಿ ಬಣ್ಣ ಬಳಿದ ಯಾ ಮೆತ್ತಿದ.
  • ಕೊಳಕಾದ; ಮಲಿನವಾದ.

  • daughter
    ನಾಮವಾಚಕ ಪದಗುಚ್ಛ
    Daughters of the American Revolution ಅಮೆರಿಕಕ್ರಾಂತಿಯ ಪುತ್ರಿಯರು; ದೇಶಪ್ರೇಮಿ ಅಮೆರಿಕನ್‍ ಮಹಿಳೆಯರ ಒಂದು ಸಂಘ.
  • ಹೆಣ್ಣು ಮಗು; ಮಗಳು; ಪುತ್ರಿ; ತನಯೆ; ತನುಜೆ; ದುಹಿತೆ.
  • ಹೆಣ್ಣು; ಸ್ತ್ರೀ; ಕುಟುಂಬ, ಕುಲ, ಸ್ಥಳ, ನಾಡು, ಮೊದಲಾದವುಗಳ ಹೆಣ್ಣು ಸಂತತಿ.
  • (ಪಂಥದ, ಗುರುವಿನ) ಶಿಷ್ಯೆ.
  • ಮಗಳೆ; ಪುತ್ರಿ; ಹಿರಿಯರು ಕಿರಿಯವಳನ್ನು ಕರೆಯುವಾಗ ಬಳಸುವ ಪದ.
  • ಮಗಳು; ಪುತ್ರಿ; ಹೆಣ್ಣಾಗಿ ಭಾವಿಸಿದ ವಸ್ತು ಮೊದಲಾದವು: Bengali is a daughter of Sanskrit ಬಂಗಾಳಿ ಸಂಸ್ಕೃತದ ಮಗಳು.
  • ಜನ್ಯ; ಜಾತ:
    1. (ಭೌತವಿಜ್ಞಾನ) ಯಾವುದೇ ಪರಮಾಣುಬೀಜದ ವಿಕಿರಣಾತ್ಮಕ ವಿಘಟನೆಯಿಂದ ದೊರೆತ ಇನ್ನೊಂದು ಪರಮಾಣುಬೀಜ: radon, the daughter of radium ರೇಡಿಯಂನ ಜನ್ಯವಾದ ರೇಡಾನ್‍.
    2. (ಜೀವವಿಜ್ಞಾನ) ಜೀವಕೋಶವೊಂದರ ವಿದಳನದಿಂದ ದೊರೆತ ಇನ್ನೊಂದು ಜೀವಕೋಶ.

  • daughter-in-law
    ನಾಮವಾಚಕ
  • (ಬಹುವಚನ daughters-in-law). ಸೊಸೆ; ಸ್ನುಷೆ; ಮಗನ ಹೆಂಡತಿ.
  • (ಸಡಿಲವಾಗಿ ಪ್ರಯೋಗ) ಸವತಿಯ ಮಗಳು; ಮಲಮಗಳು.

  • daughterhood
    ನಾಮವಾಚಕ
  • ಪುತ್ರೀತ್ವ.
  • (ಸಾಮೂಹಿಕವಾಗಿ) ಹೆಣ್ಣು ಮಕ್ಕಳು.

  • daughterly
    ಗುಣವಾಚಕ
  • ಮಗಳಂಥ; ಪುತ್ರಿಯಂಥ.
  • ಮಗಳಿಗೆ ತಕ್ಕ; ಪುತ್ರೀಸದೃಶ.
  • ಮಗಳಿಗೆ ಸಂಬಂಧಿಸಿದ.

  • daunt
    ಸಕರ್ಮಕ ಕ್ರಿಯಾಪದ
  • ಎದೆಗುಂದಿಸು; ಧೈರ್ಯಗೆಡಿಸು.
  • ಅಂಜಿಸು; ಭಯಪಡಿಸು; ಬೆದರಿಸು.
  • (ಉಪ್ಪುಮೀನನ್ನು ಪೀಪಾಯಿಯಲ್ಲಿ) ಗಿಡಿ; ಅದುಮು; ಜಡಿ; ಕೂರಿ ಭರ್ತಿ ಮಾಡು.

  • dauntless
    ಗುಣವಾಚಕ
    ಹೆದರದ; ಅಂಜದ; ಎದೆಗುಂದದ; ನಿರ್ಭೀತ.

    dauntlessly
    ಕ್ರಿಯಾವಿಶೇಷಣ
    ಅಂಜದೆ; ನಿರ್ಭೀತವಾಗಿ.

    dauntlessness
    ನಾಮವಾಚಕ
    ನಿರ್ಭೀತಿ; ಎದೆಗುಂದದಿರುವಿಕೆ.


    logo