logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

caliology
ನಾಮವಾಚಕ
ನೀಡಶಾಸ್ತ್ರ; ನೀಡವಿಜ್ಞಾನ; ಹಕ್ಕಿಗಳ ಗೂಡನ್ನು ಕುರಿತ ಅಧ್ಯಯನ.

calipash
ನಾಮವಾಚಕ
ಕ್ಯಾಲಿಪ್ಯಾಷ್‍; (ಆಮೆಯ ಮೇಲ್ಚಿಪ್ಪಿನ ಕೆಳಗಿರುವ, ಬಹಳ ರುಚಿಕರವೆಂದು ಪರಿಗಣಿಸಿರುವ, ಮಬ್ಬುಹಸಿರು ಬಣ್ಣದ) ಜೆಲ್ಲಿಯಂಥ ಪದಾರ್ಥ.

calipee
ನಾಮವಾಚಕ
=calipash.

caliper
ನಾಮವಾಚಕ
=calliper.

caliph
ನಾಮವಾಚಕ
ಕಲೀಹ; ಮಹಮ್ಮದನ ತರುವಾಯ ಆ ಸ್ಥಾನಕ್ಕೆ ಬಂದ, ಮಹಮ್ಮದೀಯ ಲೌಕಿಕ ಮತ್ತು ಧಾರ್ಮಿಕ ಪ್ರಭು.

caliphate
ನಾಮವಾಚಕ
ಕಲೀಹಗಿರಿ; ಕಲೀಹನ–ಅಧಿಕಾರ, ಸ್ಥಾನ, ದರ್ಜೆ, ಘನತೆ, ಅಧಿಕಾರ ವ್ಯಾಪ್ತಿ.

calisthenic
ಗುಣವಾಚಕ
=callisthenic.

calix
ನಾಮವಾಚಕ
(ಅಂಗರಚನಾಶಾಸ್ತ್ರ) ಬಟ್ಟಲುಕುಳಿ; ಬಟ್ಟಲಿನಾಕಾರದ–ಅಂಗಭಾಗ ಯಾ ಕುಳಿ.

calk
ನಾಮವಾಚಕ
(ಅಮೆರಿಕನ್‍ ಪ್ರಯೋಗ) ಲಾಳದ ಮೊಳೆ; ಮೋಜದ ಮೊಳೆ; ಜೋಡಿನ ಆಣಿ; ಲಾಳದ ಆಣಿ; ಹಿಮ ಮೊದಲಾದವುಗಳಲ್ಲಿ ಕಾಲುಜಾರದಂತೆ ಜೋಡು ಯಾ ಲಾಳಗಳಿಗೆ ಹೊಡೆಯುವ, ಹಿಮ್ಮಡಿ ಮೊಳೆ.

calk
ಸಕರ್ಮಕ ಕ್ರಿಯಾಪದ
(ಅಮೆರಿಕನ್‍ ಪ್ರಯೋಗ) (ಜೋಡಿಗೆ ಯಾ ಲಾಳಕ್ಕೆ) ಮೊಳೆ, ಆಣಿ–ಹೊಡೆ.


logo