logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

bailer
ನಾಮವಾಚಕ
  • ಮೊಗೆಯಾಳು; ದೋಣಿಯಿಂದ ನೀರನ್ನು ಮೊಗೆದು ಹೊರಕ್ಕೆ ಚೆಲ್ಲುವವ.
  • ಮೊಗೆ – ಪಾತ್ರೆ ಯಾ ಯಂತ್ರ; ನೀರನ್ನು ಮೊಗೆದು ಹೊರಕ್ಕೆ ಚೆಲ್ಲುವ ಪಾತ್ರೆ ಯಾ ಯಂತ್ರ.

  • bailer
    ನಾಮವಾಚಕ
    (ಕ್ರಿಕೆಟ್‍) ಬೇಲುಗಳನ್ನು ಕೆಳಕ್ಕುರುಳಿಸುವ ಚೆಂಡು.

    bailey
    ನಾಮವಾಚಕ ಪದಗುಚ್ಛ
    Old Bailey (ಹಿಂದೆ ಲಂಡನ್ನಿನ ದುರ್ಗದ ಒಳಾಂಗಣದಲ್ಲಿದ್ದ) ಓಲ್ಡ್‍ಬೇಲಿ; ಲಂಡನ್ನಿನ ಕೇಂದ್ರ ಕ್ರಿಮಿನಲ್‍ ನ್ಯಾಯಾಲಯ.
  • ದುರ್ಗದ ಹೊರ ಪ್ರಾಕಾರ.
  • ರಕ್ಷಣೆಗಾಗಿ ಉದ್ದೇಶಿಸಿದ ದುರ್ಗದ ಯಾವುದೇ ಒಳವಲಯ.
  • ರಕ್ಷಿತ ಒಳಾಂಗಣ; ದುರ್ಗದ ಒಳವಲಯಗಳ ಮಧ್ಯದಲ್ಲಿರುವ ಯಾವುದೇ ಒಳಾಂಗಣ.

  • Bailey
    ನಾಮವಾಚಕ
    Bailey bridge.

    Bailey bridge
    ನಾಮವಾಚಕ
    ಬೇಲಿ ಸೇತುವೆ; ತುರ್ತು ಪರಿಸ್ಥಿತಿಯಲ್ಲಿ ಕ್ಷಿಪ್ರವಾಗಿ ಕಟ್ಟಲು, ವಿವಿಧ ಭಾಗಗಳನ್ನು ಮೊದಲೇ ತಯಾರಿಸಿಕೊಂಡಿರುವ, ಉಕ್ಕಿನ ಜಾಲಂದರದ ಹಂದರವಿರುವ ಸೇತುವೆ.

    bailie
    ನಾಮವಾಚಕ
  • (ಸ್ಕಾಟ್ಲಂಡಿನಲ್ಲಿ) ಬೇಲಿ; ಮುನಿಸಿಪಲ್‍ ನ್ಯಾಯಾಧಿಪತಿ.
  • (ಇಂಗ್ಲಂಡಿನ) ಪೌರಸಭಾಸದಸ್ಯ.

  • bailiff
    ನಾಮವಾಚಕ
  • (ಚರಿತ್ರೆ) (ಔಪಚಾರಿಕ ಬಿರುದುಗಳನ್ನು ಬಿಟ್ಟು) ಜಿಲ್ಲೆಯಲ್ಲಿ ರಾಜನ ಪ್ರತಿನಿಧಿ; ಮುಖ್ಯವಾಗಿ ಜಿಲ್ಲಾಧಿಪತಿ ಯಾ ಮುಖ್ಯ ಜಿಲ್ಲಾಧಿಕಾರಿ.
  • ಬೇಲಿಹ್‍:
    1. (ಕೋರ್ಟಿನ) ಅಮೀನ; ದಂಡಾಧಿಕಾರಿ; ಹುಕುಂ ಜಾರಿ, ಸ್ವತ್ತು ಜಹ್ತಿ, ದಸ್ತಗಿರಿ, ಮೊದಲಾದವನ್ನು ಮಾಡಲು ಅಧಿಕಾರವುಳ್ಳ, ಷೆರಿಹ್‍ನ ಕೈಕೆಳಗಿನ ಅಧಿಕಾರಿ.
    2. (ಕಂದಾಯ ಮೊದಲಾದವನ್ನು ವಸೂಲು ಮಾಡುವ) ಜಮೀನುದಾರನ ಕಾರ್ಯಭಾರಿ, ಏಜೆಂಟು.
    3. ಜಮೀನುದಾರನ, ಜಮೀನಿನ ಮೇಲ್ವಿಚಾರಕ ಯಾ ಪಾರುಪತ್ಯೆಗಾರ.
    4. (ಅಮೆರಿಕನ್‍ ಪ್ರಯೋಗ) ನ್ಯಾಯದರ್ಶಿಗಳ ರಕ್ಷಣೆ, ನ್ಯಾಯಾಲಯದ ಶಿಸ್ತು, ಮೊದಲಾದವನ್ನು ನೋಡಿಕೊಳ್ಳುವ ಕೋರ್ಟಿನ ಅಧಿಕಾರಿ.

  • bailiwick
    ನಾಮವಾಚಕ
  • ಬೇಲಿಹನ ಯಾ ಬೇಲಿಯ – ಅಧಿಕಾರಿ ಕ್ಷೇತ್ರ, ಅಧಿಕಾರಕ್ಕೆ ಒಳಪಟ್ಟ ಜಿಲ್ಲೆ.
  • (ಹಾಸ್ಯ ಪ್ರಯೋಗ) (ಒಬ್ಬನ) ಕಾರ್ಯಕ್ಷೇತ್ರ; ಕಾರ್ಯರಂಗ.

  • bailment
    ನಾಮವಾಚಕ
  • (ನ್ಯಾಯಶಾಸ್ತ್ರ) (ಮಾಲನ್ನು ಒಬ್ಬನ) ವಶಕ್ಕೆ ಕೊಡುವಿಕೆ; ಮಾರಿಫತ್ತು ಕೊಡುವಿಕೆ; ಯಾವುದೋ ಉದ್ದೇಶಕ್ಕಾಗಿ ಮತ್ತು ಆ ಉದ್ದೇಶ ನೆರವೇರಿದ ತರುವಾಯ ಸರಕನ್ನು ವಾಪಸು ಕೊಡುವ ಭರವಸೆಯಿಂದ ಒಬ್ಬನ ಸರಕನ್ನು ಇನ್ನೊಬ್ಬನಿಗೆ ಕೊಡುವುದು.
  • (ಕೈದಿಯನ್ನು) ಜಾಮೀನಿನ ಮೇಲೆ – ಬಿಡುವಿಕೆ, ಬಿಡುವುದು.

  • bailor
    ನಾಮವಾಚಕ
    ಮಾರಿಫತ್ತುದಾರ; ಸ್ವತ್ತನ್ನು ಯಾ ಹಣವನ್ನು ಒಂದು ಉದ್ದೇಶಕ್ಕಾಗಿ ಮತ್ತೊಬ್ಬನ ವಶಕ್ಕೆ ಒಪ್ಪಿಸುವವನು.


    logo