logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

abstinent
ನಾಮವಾಚಕ
  • ವರ್ಜಕ.
  • ಸಂಯಮಿ.

  • abstinently
    ಕ್ರಿಯಾವಿಶೇಷಣ
  • ವರ್ಜನಶೀಲವಾಗಿ.
  • ಮಿತವಾಗಿ; ಸಂಯಮದಿಂದ.

  • abstract
    ಗುಣವಾಚಕ ಪದಗುಚ್ಛ
  • ಅಮೂರ್ತ; ಚಿತ್ತಗ್ರಾಹ್ಯ; ಭಾವನಾ ಗೋಚರವಾದ; ಇಂದ್ರಿಯಗಳಿಗೆ ಅಗೋಚರವಾದ; ಭೌತದ್ರವ್ಯ, ಭೌತರೂಪ, ವ್ಯವಹಾರ ಯಾ ನಿರ್ದಿಷ್ಟ ದೃಷ್ಟಾಂತಗಳಿಂದ ಭಿನ್ನವಾದ ಯಾ ಬೇರ್ಪಡಿಸಿದ: a flower is beautiful, but beauty itself is abstract ಹೂವು ಸುಂದರವಾಗಿದೆ, ಆದರೆ ಸೌಂದರ್ಯ ಎಂಬುದು ಅಮೂರ್ತ. an abstract idea ಒಂದು ಅಮೂರ್ತ ಕಲ್ಪನೆ.
  • ಕೇವಲ ಭಾವನಾತ್ಮಕವಾದ; ಸೈದ್ಧಾಂತಿಕ; ಪ್ರಾಯೋಗಿಕವಲ್ಲದ; ವ್ಯಾವಹಾರಿಕವಲ್ಲದ.
  • ದುರ್ಬೋಧ: ದುರವಗಾಹ್ಯ; ದುಜ್ಞೇಯ; ಅರಿಯಲು ಕಷ್ಟವಾದ.
  • (ಕಲೆ ಮೊದಲಾದವುಗಳ ವಿಷಯದಲ್ಲಿ) ಅಮೂರ್ತ; ಅನುಕರಿಸದ; ವಸ್ತುಗಳ ರೂಪ, ಗುಣ, ಆಕೃತಿ, ಮೊದಲಾದವುಗಳನ್ನು ಅನುಕರಿಸದ, ಪ್ರತಿಬಿಂಬಿಸದ.

  • abstract
    ನಾಮವಾಚಕ
  • (ಪುಸ್ತಕ ಮೊದಲಾದವುಗಳಲ್ಲಿಯ ವಿಷಯಗಳ) ತಿರುಳು; ಸಾರಾಂಶ; ಸಂಗ್ರಹ; ಗೋಷ್ವಾರೆ: make an abstract of it ಅದನ್ನು ಸಂಗ್ರಹ ಮಾಡು, ಸಂಗ್ರಹಿಸು.
  • ಭಾವ(ನಾ)ವಾಚಿ; ಭಾವವನ್ನು, ತತ್ತ್ವವನ್ನು ನಿರೂಪಿಸುವ ಪದ.

  • abstract
    ಸಕರ್ಮಕ ಕ್ರಿಯಾಪದ
  • ಬೇರ್ಪಡಿಸು; ತೆಗೆ; ಪ್ರತ್ಯೇಕಿಸು; ಅಪಕರ್ಷಿಸು: abstract metal from ore ಅದಿರಿನಿಂದ ಲೋಹವನ್ನು–ಬೇರ್ಪಡಿಸು, ತೆಗೆ.
  • (ಸೌಮ್ಯೋಕ್ತಿ) ಕದಿ; ಅಪಹರಿಸು: abstracted a purse frome his pocket ಅವನ ಜೇಬಿನಿಂದ ಹಣದ ಚೀಲವನ್ನು ಕದ್ದನು.
  • ಅನ್ಯಮನಸ್ಕನಾಗಿಸು; ಗಮನವನ್ನು ಬೇರೆಡೆಗೆ ಸೆಳೆ; ಮನಸ್ಸನ್ನು ಎಲ್ಲಿಗೋ ಒಯ್ಯು: day-dreaming abstracted him ಹಗಲುಗನಸು ಅವನ ಮನಸ್ಸನ್ನು ಎಲ್ಲಿಗೋ ಒಯ್ದಿತು.
  • ಭಾವರೂಪದಲ್ಲಿ ಗ್ರಹಿಸು; ಮೂರ್ತವಸ್ತುಗಳಿಂದ ಪ್ರತ್ಯೇಕವಾಗಿ ಭಾವಿಸು; ಗುಣ, ಸ್ಥಿತಿ, ಕ್ರಿಯೆ, ಮೊದಲಾದವುಗಳನ್ನು ಭಾವನೆಯ ರೂಪದಲ್ಲಿ ವಸ್ತುಗಳಿಂದ ಪ್ರತ್ಯೇಕಿಸಿ ಗ್ರಹಿಸು: we abstract greenness from green things ಹಸುರು ವಸ್ತುಗಳಿಂದ ಹಸುರನ್ನು ಪ್ರತ್ಯೇಕಿಸಿ ಗ್ರಹಿಸುತ್ತೇವೆ.
  • ಸಂಕ್ಷೇಪಿಸು; ಸಂಗ್ರಹಿಸು.

  • abstract expressionism
    ನಾಮವಾಚಕ
    = action painting.

    abstract noun
    ನಾಮವಾಚಕ
    ಭಾವನಾಮ; ಗುಣವನ್ನು ಯಾ ಸ್ಥಿತಿಯನ್ನು ತಿಳಿಸುವ ನಾಮಪದ: length, goodness, virtue.

    abstracted
    ಗುಣವಾಚಕ
  • (ಮಾನಸಿಕವಾಗಿ ಗುಣ, ಸ್ಥಿತಿ, ಕ್ರಿಯೆ, ಮೊದಲಾದವುಗಳ ವಿಷಯದಲ್ಲಿ) ಬೇರ್ಪಡಿಸಿದ; ಪ್ರತ್ಯೇಕಿಸಿದ; ಪೃಥಕ್ಕರಿಸಿದ.
  • ಅಡ್ಡಜ್ಞಾನದ; ಅನ್ಯಮನಸ್ಕ; ಮನಸ್ಸು ಎಲ್ಲೋ ಹೋಗಿರುವ.

  • abstractedly
    ಕ್ರಿಯಾವಿಶೇಷಣ
  • (ಮಾನಸಿಕವಾಗಿ ಗುಣ, ಸ್ಥಿತಿ, ಕ್ರಿಯೆ, ಮೊದಲಾದವುಗಳ ವಿಷಯದಲ್ಲಿ) ಬೇರ್ಪಡಿಸಿದಂತೆ; ಪೃಥಕ್ಕರಿಸಿದಂತೆ; ಬೇರೆಯಾಗಿ ತೆಗೆದಂತೆ.
  • ಅಡ್ಡಜ್ಞಾನದಲ್ಲಿ; ಅನ್ಯಮನಸ್ಕನಾಗಿ; ಅನವಧಾನವಾಗಿ.
  • ಭಾವನಾ ರೂಪದಲ್ಲಿ; ತಾತ್ತ್ವಿಕವಾಗಿ.

  • abstractedness
    ನಾಮವಾಚಕ
  • (ಮಾನಸಿಕವಾಗಿ, ಗುಣ, ಸ್ಥಿತಿ, ಕ್ರಿಯೆ, ಮೊದಲಾದವುಗಳ ವಿಷಯದಲ್ಲಿ) ಬೇರ್ಪಡಿಸಿರುವಿಕೆ; ಪೃಥಕ್ಕರಿಸಿದ ಸ್ಥಿತಿ.
  • ಅನ್ಯಮನಸ್ಕತೆ.
  • ಭಾವನಾತ್ಮಕತೆ; ತಾತ್ತ್ವಿಕತೆ.


  • logo