logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

abulia
ನಾಮವಾಚಕ
= aboulia.

abundance
ನಾಮವಾಚಕ
  • ಆಧಿಕ್ಯ; ಬಾಹುಳ್ಯ; ಭಾರಿ ಪ್ರಮಾಣ ಯಾ ಸಂಖ್ಯೆ.
  • ಬೇಕಾದಷ್ಟು; ಹೇರಳ; ಸಮೃದ್ಧಿ; ಪುಷ್ಕಳತೆ; ಯಥೇಷ್ಟತೆ.
  • (ರೂಪಕವಾಗಿ) (ಸಂತೋಷ, ಔದಾರ್ಯ, ಮೊದಲಾದವುಗಳ ವಿಷಯದಲ್ಲಿ) ತುಂಬಿ ಹರಿಯುವಿಕೆ: abundance of heart ತುಂಬು ಹೃದಯ; ಹೃದಯ ತುಂಬಿ ಹರಿಯುವ ಸ್ಥಿತಿ.
  • ಸಿರಿ; ಐಶ್ವರ್ಯ; ಸಂಪತ್ತು.
  • (ಬೆಳೆ ಮತ್ತು ವಸ್ತುಗಳ ವಿಷಯದಲ್ಲಿ) ಹುಲುಸು; ಸೊಂಪು.
  • (ವಿಸ್ಟ್‍ ಇಸ್ಟೀಟಾಟದಲ್ಲಿ) ಒಂಬತ್ತು ಪಟ್ಟುಗಳನ್ನು ತೆಗೆದುಕೊಳ್ಳುತ್ತೇನೆಂಬ ಘೋಷಣೆ.

  • abundant
    ಗುಣವಾಚಕ
    ತುಂಬ; ಹೇರಳ; ತುಂಬಿ ತುಳುಕುವ; ಬೇಕಾದಷ್ಟು; ಸಮೃದ್ಧ; ಶ್ರೀಮಂತ; ಯಥೇಷ್ಟ; abundant reason to quarrel ಜಗಳವಾಡಲು ಬೇಕಾದಷ್ಟು ಕಾರಣ. a land abundant in minerals ಖನಿಜಗಳಿಂದ ಸಮೃದ್ಧವಾದ ನಾಡು.

    abundantly
    ಕ್ರಿಯಾವಿಶೇಷಣ
    ಹೇರಳವಾಗಿ; ಧಾರಾಳವಾಗಿ; ಸಮೃದ್ಧವಾಗಿ; ಯಥೇಷ್ಟವಾಗಿ.

    ab urbe condita
    ಕ್ರಿಯಾವಿಶೇಷಣ
    (ತಾರೀಖಿನ ವಿಷಯದಲ್ಲಿ) ರೋಮ್‍ ನಗರದ ಸ್ಥಾಪನೆಯಿಂದ (ಕ್ರಿಸ್ತಪೂರ್ವ 753) ಎಣಿಕೆ ಮಾಡಲಾಗುವ (ಸಂಕ್ಷಿಪ್ತ A.U.C.).

    abusage
    ನಾಮವಾಚಕ
    (ಪದಗಳ ವಿಷಯದಲ್ಲಿ) ಅಪಪ್ರಯೋಗ.

    abuse
    ಸಕರ್ಮಕ ಕ್ರಿಯಾಪದ ಪದಗುಚ್ಛ
    abuse oneself ಮುಷ್ಟಿಮೈಥುನ ಮಾಡಿಕೊ.
  • ದುರುಪಯೋಗಪಡಿಸು; ದುರುಪಯೋಗ ಮಾಡು; ದುರುಪಯೋಗಪಡಿಸಿಕೊ: abuse one’s authority ಅಧಿಕಾರವನ್ನು ದುರುಪಯೋಗಪಡಿಸಿಕೊ.
  • (ಪ್ರಾಚೀನ ಪ್ರಯೋಗ) (ಈಗ ಮುಖ್ಯವಾಗಿ ಕರ್ಮಣಿಪ್ರಯೋಗದಲ್ಲಿ ಮಾತ್ರ) ಮೋಸಗೊಳಿಸು; ವಂಚಿಸು: I did not know that I had been abused ನಾನು ವಂಚಿತನಾದೆನೆಂದು ನನಗೆ ತಿಳಿಯಲಿಲ್ಲ.
  • (ಕೆಟ್ಟದಾಗಿ, ಅಪಶಬ್ದದಿಂದ) ಬಯ್ಯು; ತೆಗಳು; ದೂಷಿಸು; ನಿಂದಿಸು.
  • ನೋಯಿಸು; ನೋವುಂಟುಮಾಡು; ನೋವಾಗುವಂತೆ, ಹಾನಿಯಾಗುವಂತೆ–ವರ್ತಿಸು: to abuse a horse by overworking ಮಿತಿಮೀರಿ ದುಡಿಸಿ ಕುದುರೆಗೆ ನೋವಾಗುವಂತೆ ಮಾಡು. abuse one’s eye sight by reading in dim light ಮಂದ ಬೆಳಕಿನಲ್ಲಿ ಓದುವುದರ ಮೂಲಕ ದೃಷ್ಟಿಗೆ ಹಾನಿಮಾಡಿಕೊ.

  • abuse
    ನಾಮವಾಚಕ
  • ದುರುಪಯೋಗ: an abuse of authority ಅಧಿಕಾರದ ದುರುಪಯೋಗ.
  • ಅನ್ಯಾಯ; ಕೆಟ್ಟ ಪದ್ಧತಿ; ದುರಾಚಾರ: the buying of votes and other abuses ಓಟುಗಳನ್ನು ಕೊಳ್ಳುವುದು ಮೊದಲಾದ (ಚುನಾವಣೆಯ) ದುರಾಚಾರಗಳು.
  • ಬೈಗುಳು; ದೂಷಣೆ; ನಿಂದೆ.
  • ಅಪಪ್ರಯೋಗ: to call it a democracy is an abuse of the term ಅದನ್ನು ಪ್ರಜಾಪ್ರಭುತ್ವವೆಂದು ಕರೆಯುವುದು ಆ ಶಬ್ದದ ಅಪಪ್ರಯೋಗ.

  • abusive
    ಗುಣವಾಚಕ
  • (ಅಪಶಬ್ದಗಳಲ್ಲಿ) ಬೈಯುವ; ನಿಂದಿಸುವ.
  • ದುರುಪಯೋಗದ.

  • abusively
    ಕ್ರಿಯಾವಿಶೇಷಣ
  • ನಿಂದಾತ್ಮಕವಾಗಿ.
  • ದುರುಪಯೋಗದಿಂದ.


  • logo