logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

unbearable
ಗುಣವಾಚಕ
ಅಸಹನೀಯ; ದುಸ್ಸಹನೀಯ; ಸಹಿಸಲಸಾಧ್ಯವಾದ.

unbearableness
ನಾಮವಾಚಕ
ಅಸಹನೀಯತೆ; ದುಸ್ಸಹನೀಯತೆ; ಸಹಿಸಲಸಾಧ್ಯವಾಗಿರುವಿಕೆ.

unbearably
ಕ್ರಿಯಾವಿಶೇಷಣ
ಅಸಹನೀಯವಾಗಿ; ದುಸ್ಸಹನೀಯವಾಗಿ.

unbeatable
ಗುಣವಾಚಕ
ಅಜೇಯ; ದುರ್ಜಯ; ಮೀರಿಸಲಸದಳವಾದ; ಸೋಲಿಸಲಾಗದ.

unbeaten
ಗುಣವಾಚಕ
  • ಸೋತಿಲ್ಲದ; ಅಜಿತ.
  • (ವಿಕ್ರಮ, ದಾಖಲೆ, ಮೊದಲಾದವುಗಳ ವಿಷಯದಲ್ಲಿ) ಮೀರಿಸದ; ಮೀರದ; ಅತಿಶಯದ.
  • (ಹಾದಿ, ಜಾಡು, ಮೊದಲಾದವುಗಳ ವಿಷಯದಲ್ಲಿ) ಯಾರೂ ತುಳಿದಿಲ್ಲದ, ಓಡಾಡಿಲ್ಲದ: unbeaten paths ಯಾರೂ ತುಳಿಯದ ಹಾದಿಗಳು.
  • (ಕ್ರಿಕೆಟ್‍) (ಆಟಗಾರನ ವಿಷಯದಲ್ಲಿ) ಔಟಾಗದ; ಆಟದಿಂದ ನಿರ್ಗಮಿಸದ.

  • unbecoming
    ಗುಣವಾಚಕ
  • ಮರ್ಯಾದೆಗೆಟ್ಟ; ಯೋಗ್ಯವಲ್ಲದ; ತಗದ: an unbecoming speech ಮರ್ಯಾದೆ ಮೀರಿದ ಭಾಷಣ.
  • (ಒಬ್ಬ ವ್ಯಕ್ತಿಯ ಯೋಗ್ಯತೆಗೆ) ತಕ್ಕುದಲ್ಲದ; ಅನುಚಿತ; ತಗದ; ಯೋಗ್ಯವಲ್ಲದ.
  • (ಮುಖ್ಯವಾಗಿ ಉಡುಪಿನ ವಿಷಯದಲ್ಲಿ) (ಧರಿಸಿರುವವನಿಗೆ) ಹೊಂದದ; ಒಪ್ಪದ; ಲಕ್ಷಣವೆನಿಸದ: an unbecoming hat ಅವಲಕ್ಷಣವಾದ ಟೋಪಿ.

  • unbecomingly
    ಕ್ರಿಯಾವಿಶೇಷಣ
  • ಮರ್ಯಾದೆಗೆಟ್ಟು; ಅಯೋಗ್ಯವಾಗಿ; ಅನುಚಿತವಾಗಿ; ತಕ್ಕುದಾಗಿರದಂತೆ.
  • ಅವಲಕ್ಷಣವಾಗಿ; ಕುರೂಪವಾಗಿ; ಒಪ್ಪದ ರೀತಿಯಲ್ಲಿ.

  • unbecomingness
    ನಾಮವಾಚಕ
  • ಅನೌಚಿತ್ಯ; ಅಯೋಗ್ಯತೆ; ಮರ್ಯಾದೆಗೆಟ್ಟ ನಡವಳಿಕೆ ಮೊದಲಾದವು.
  • ಅವಲಕ್ಷಣವಾಗಿರುವುದು.

  • unbefitting
    ಗುಣವಾಚಕ
    ತಕ್ಕುದಲ್ಲದ; ಹೊಂದದ; ಯೋಗ್ಯವಲ್ಲದ; ಸಲ್ಲದ; ಒಪ್ಪದ; ಸರಿಹೋಗದ.

    unbefittingly
    ಕ್ರಿಯಾವಿಶೇಷಣ
    ತಕ್ಕುದಲ್ಲದ್ದಾಗಿ; ಅನುಚಿತವಾಗಿ; ಹೊಂದದೆ; ಸಲ್ಲದ, ಒಪ್ಪದ – ರೀತಿಯಲ್ಲಿ.


    logo