(ಚಿಟ್ಟೆ ಮೊದಲಾದವುಗಳ ರೆಕ್ಕೆಯ ಮೇಲಿನ) ಅನ್ಯವರ್ಣಾವೃತ ಕಲೆ; ಬೇರೆ ಬಣ್ಣದ ಪಟ್ಟೆಯಿಂದ ಸುತ್ತುವರಿದ ಯಾವುದೇ ಬಣ್ಣದ ಮಚ್ಚೆ.
ನೇತ್ರಮುಖ; ಸಂಯುಕ್ತನೇತ್ರದ ಒಂದು ಪಾರ್ಶ್ವ, ಮುಖ.
ocelot
ನಾಮವಾಚಕ
ಆಸಿಲಾಟ್:
ಚಿರತೆ ಬೆಕ್ಕು; ದಕ್ಷಿಣ ಮತ್ತು ಮಧ್ಯ ಅಮೆರಿಕದಲ್ಲಿ ವಾಸಿಸುವ, ಗಾಢ ಹಳದಿ ಯಾ ಕಿತ್ತಳೆ ಬಣ್ಣದ ಚರ್ಮದ ಮೇಲೆ ಕಪ್ಪು ಪಟ್ಟೆಗಳು ಮತ್ತು ಚುಕ್ಕೆಗಳುಳ್ಳ, ಚಿರತೆಯನ್ನು ಹೋಲುವ, ಹೆಲಿಸ್ ಪಾರ್ಡಾಲಿಸ್ ಕುಲಕ್ಕೆ ಸೇರಿದ, ಬೆಕ್ಕಿನ ಜಾತಿಯ ಒಂದು ಪ್ರಾಣಿ.
ಅದರ ತುಪ್ಪಟ.
och
ಭಾವಸೂಚಕ ಅವ್ಯಯ
(ಸ್ಕಾಟ್ಲೆಂಡ್ ಮತ್ತು ಐರ್ಲೆಂಡು) (ಆಶ್ಚರ್ಯ ಯಾ ವಿಷಾದವನ್ನು ಸೂಚಿಸುವ ಪದ) ಅಹ್! ಓ!