logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

mainliner
ನಾಮವಾಚಕ
(ಅಶಿಷ್ಟ) ರಕ್ತನಾಳಗಳ ಮೂಲಕ ಮಾದಕ ಪದಾರ್ಥಗಳನ್ನು ಚುಚ್ಚಿಕೊಳ್ಳುವವನು.

mainly
ಕ್ರಿಯಾವಿಶೇಷಣ
ಪ್ರಧಾನವಾಗಿ; ಪ್ರಮುಖವಾಗಿ; ಮುಖ್ಯವಾಗಿ.

mainmast
ನಾಮವಾಚಕ
(ನೌಕಾಯಾನ) ಪ್ರಧಾನ ಕೂವೆ; ಹಡಗಿನ ಮುಖ್ಯ ಕೂವೆ.

mainplane
ನಾಮವಾಚಕ
ಪ್ರಧಾನ ಫಲಕ; ವಿಮಾನದ ಮುಂಭಾಗದಲ್ಲಿ ಅಡ್ಡಲಾಗಿ ಹೊರಚಾಚಿರುವ, ವಿಮಾನ ಮೇಲಕ್ಕೇರಲು ಸಹಾಯಕವಾಗಿರುವ, ಮುಖ್ಯ ವಾಯುಫಲಕ.

mainsail
ನಾಮವಾಚಕ
(ನೌಕಾಯಾನ)
  • (ಚೌಕಾಕಾರದ ಹಾಯಿಗಳುಳ್ಳ ನೌಕೆಯ) ಪ್ರಧಾನ ಕೂವೆಯಲ್ಲಿರುವ ಹಾಯಿಗಳಲ್ಲಿ ಅತ್ಯಂತ ಕೆಳಗಿನದು.
  • (ಎರಡೂ ತುದಿಗಳಲ್ಲಿ ಹಾಯಿಗಳಿರುವ ನೌಕೆಯ ವಿಷಯದಲ್ಲಿ) ಮುಖ್ಯ ಕೂವೆಯ ಹಿಂಭಾಗಕ್ಕೆ ಕಟ್ಟಿದ ಹಾಯಿ(ಪಟ).

  • mainspring
    ನಾಮವಾಚಕ
  • (ಗಡಿಯಾರ ಮೊದಲಾದವುಗಳ) ಮುಖ್ಯ ಸ್ಪ್ರಿಂಗು; ಪ್ರಧಾನ ಸ್ಪ್ರಿಂಗು.
  • ಪ್ರಧಾನ ಪ್ರೇರಣೆ; ಮುಖ್ಯ ಪ್ರಚೋದನೆ; ಪ್ರಧಾನ ಕಾರಣ ಯಾ ಕಾರಕ ಶಕ್ತಿ.

  • mainstay
    ನಾಮವಾಚಕ
  • ಪ್ರಧಾನ ಕೂವೆಯ ನೆತ್ತಿಯಿಂದ ಮುಂಕೂವೆಯ ಬುಡಕ್ಕೆ ಬಿಗಿದಿರುವ ಕಟ್ಟು, ಹಗ್ಗ.
  • (ರೂಪಕವಾಗಿ) ಪ್ರಧಾನ ಆಧಾರ; ಮೂಲಾಧಾರ; ಮುಖ್ಯಾಧಾರ; ಆಧಾರಸ್ತಂಭ.

  • mainstream
    ನಾಮವಾಚಕ
  • (ಅನೇಕ ವೇಳೆ ವಿಶೇಷಣವಾಗಿ) (ಅಭಿಪ್ರಾಯ, ಹ್ಯಾಷನ್ನು, ಮೊದಲಾದವುಗಳಲ್ಲಿ) ಪ್ರಚಲಿತ ಪ್ರವೃತ್ತಿ; ಮುಖ್ಯವಾಹಿನಿ.
  • 1930ರ ದಶಕದ ಓಲಾಟದ ಶೈಲಿಯನ್ನು ಆಧರಿಸಿದ ಜಾಸ್‍ ಸಂಗೀತ.
  • ಮುಖ್ಯಧಾರೆ; (ನದಿಯ) ಮುಖ್ಯ ಪ್ರವಾಹ.

  • maintain
    ಸಕರ್ಮಕ ಕ್ರಿಯಾಪದ
  • (ಯುದ್ಧ, ಸ್ಪರ್ಧೆ, ಕೋರ್ಟು ವ್ಯವಹಾರ, ಸ್ಥಿತಿಗತಿಗಳು, ಸ್ಥಾನಮಾನ, ಮನೋಭಾವ, ಸಂಬಂಧಗಳು, ಪತ್ರವ್ಯವಹಾರ, ಮೊದಲಾದವನ್ನು) ನಡೆಸಿಕೊಂಡು ಬರು; ಪಾಲಿಸಿಕೊಂಡು ಬರು; ತಪ್ಪದೆ ಉಳಿಸಿಕೊಂಡು ಬರು: maintain friendly relations ಸ್ನೇಹದ ಸಂಬಂಧಗಳನ್ನು ಉಳಿಸಿಕೊಂಡು ಬರು.
  • (ವ್ಯಕ್ತಿ ಮೊದಲಾದವರನ್ನು ಒಂದು ಸ್ಥಿತಿಯಲ್ಲಿ , ಒಂದರ ಅನುಭೋಗ ಮೊದಲಾದವಲ್ಲಿ) ಉಳಿಸಿಕೊಂಡು ಬರು; ಮುಂದುವರೆಸು; ಇದ್ದುಕೊಂಡು ಬರುವಂತೆ ಮಾಡು.
  • (ಆಹಾರದ ಮೂಲಕ) ಬದುಕನ್ನು ಪೋಷಿಸು; ಬಾಳು ಸಾಗಿಸು; ಜೀವನ ನಡೆಸು.
  • (ಹಣ, ಕೆಲಸ, ಉದ್ಯೋಗ, ಮೊದಲಾದವುಗಳ ಮೂಲಕ ಬದುಕು, ಸ್ಥಿತಿ, ಸ್ಥಾನಮಾನಗಳನ್ನು) ಪೋಷಿಸು; ಉಳಿಸಿಕೊಂಡು ಬರು: maintain oneself by farming ವ್ಯವಸಾಯದ ಮೂಲಕ ತನ್ನನ್ನು ಪೋಷಿಸಿಕೊ.
  • (ತನಗೆ, ಮಕ್ಕಳುಮರಿಗೆ) ಜೀವನೋಪಾಯ ಕಲ್ಪಿಸಿಕೊ, ಕಲ್ಪಿಸು; ಅನ್ನಬಟ್ಟೆ ಒದಗಿಸಿಕೊ, ಒದಗಿಸು; ಯೋಗಕ್ಷೇಮ ನೋಡಿಕೋ, ನೋಡು; (ತನ್ನ ಮಕ್ಕಳುಮರಿಯನ್ನು) ಕಾಪಾಡು; ಸಲಹು; ಸಂರಕ್ಷಿಸು: maintain one’s family ತನ್ನ ಕುಟುಂಬವನ್ನು ಸಲಹು.
  • (ರಸ್ತೆ, ಕಟ್ಟಡ, ಯಂತ್ರ, ಮೊದಲಾದವನ್ನು)
    1. ದುರಸ್ತಾಗಿಟ್ಟಿರು; ಸುಸ್ಥಿತಿಯಲ್ಲಿಟ್ಟಿರು; ಸರಿಯಾಗಿಟ್ಟಿರು.
    2. ಸುಸ್ಥಿತಿಯಲ್ಲಿಡುವ ವ್ಯವಸ್ಥೆ ಮಾಡು, ಕಲ್ಪಿಸು.
  • (ಉದ್ದೇಶವನ್ನು, ಪಕ್ಷವನ್ನು) ಸಮರ್ಥಿಸು; ಬೆಂಬಲಿಸು; (ಉದ್ದೇಶಕ್ಕೆ, ಪಕ್ಷಕ್ಕೆ) ಬೆಂಬಲ ಕೊಡು.
  • (ಅಭಿಪ್ರಾಯ, ಹೇಳಿಕೆ, ಮೊದಲಾದವನ್ನು) ಸಮರ್ಥಿಸು; ನಿಜವೆಂದು ಸಾಧಿಸು: maintained his story was true ತನ್ನ ನಿರೂಪಣೆ ಸತ್ಯವೆಂದು ಸಾಧಿಸಿದ.
  • (ಠಾಣ್ಯ ಮೊದಲಾದವು ಸಜ್ಜಿನಿಂದಿರಲು) ಅನುಕೂಲ ಕಲ್ಪಿಸು; ವ್ಯವಸ್ಥೆಮಾಡು.

  • maintainability
    ನಾಮವಾಚಕ
    (ಮುಖ್ಯವಾಗಿ ಒಂದು ಅಭಿಪ್ರಾಯದ ಯಾ ಕೋರ್ಟು ವ್ಯವಹಾರದ ವಿಷಯದಲ್ಲಿ) ಸಮರ್ಥನೀಯತೆ; ಸಮರ್ಥಿಸಲಾಗುವಂತಿರುವಿಕೆ; ನಿಜವೆಂದು ಸಾಧಿಸಲು ಸಾಧ್ಯವಾಗಿರುವಿಕೆ.


    logo