logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

lambkin
ನಾಮವಾಚಕ
  • ಪುಟಾಣಿ ಕುರಿಮರಿ.
  • ಪುಟಾಣಿ; ಪೋರ; ಚಿಣ್ಣ; ಎಳೆಯ.

  • lamblike
    ಗುಣವಾಚಕ
  • ಕುರಿಮರಿಯಂಥ; ಕುರಿಮರಿಯನ್ನು ಹೋಲುವ.
  • ಸಾಧುವಾದ; ಸೌಮ್ಯಸ್ವಭಾವದ.
  • ವಿನೀತ; ಪ್ರತಿಭಟಿಸದ; ನಮ್ರ ಸ್ವಭಾವದ.
  • ಮುಗ್ಧ; ಏನೂ ಅರಿಯದ.

  • lambrequin
    ನಾಮವಾಚಕ
  • (ಅಮೆರಿಕನ್‍ ಪ್ರಯೋಗ) ಇಳಿ – ತೆರೆ, ಪರದೆ; ಬಾಗಿಲು ಕಿಟಕಿಗಳ ಯಾ ಬೆಂಕಿಗೂಡಿನ ಮೇಲಿಂದ ಅಲಂಕಾರವಾಗಿ ಇಳಿಯಬಿಡುವ ವಸ್ತ್ರ, ಬಟ್ಟೆಯ ಹೊದಿಕೆ.
  • (ವಂಶಲಾಂಛನ ವಿದ್ಯೆ) = mantling.

  • lambskin
    ನಾಮವಾಚಕ
    (ಉಣ್ಣೆ ಇರುವ) ಕುರಿಮರಿ – ತೊಗಲು, ಚರ್ಮ.

    lame
    ಗುಣವಾಚಕ ಪದಗುಚ್ಛ
    lame of (or in) a leg ಕಾಲು – ಕುಂಟಾದ, ಊನವಾದ.
  • (ಅವಯವದ, ಮುಖ್ಯವಾಗಿ ಪಾದದ ಯಾ ಕಾಲಿನ ವಿಷಯದಲ್ಲಿ) ಊನವಾದ; ಕುಂಟಾದ; ಕುಂಟನಾದ; ಕುಂಟುವ; ಹೆಳವನಾದ; ನಡೆಯಲಾರದ: lame in his right leg ಬಲಗಾಲು ಕುಂಟಾದ.
  • (ವಾದ, ಕಥೆ, ನೆಪ, ಮೊದಲಾದವುಗಳ ವಿಷಯದಲ್ಲಿ) ಕುಂಟು; ಅಸಮರ್ಪಕವಾದ; ಅತೃಪ್ತಿಕರವಾದ.
  • (ಪದ್ಯ ಮೊದಲಾದವುಗಳ ವಿಷಯದಲ್ಲಿ) ಓಟವಿಲ್ಲದ; ಕುಂಟುವ; ಸರಾಗವಾದ ಹರಿವಿಲ್ಲದ; ಎಡವುತ್ತಾ ಸಾಗುವ.

  • lame
    ಸಕರ್ಮಕ ಕ್ರಿಯಾಪದ
  • ಕುಂಟು(ವಂತೆ) ಮಾಡು; ಕುಂಟುಗೊಳಿಸು; ಕುಂಟಿಸು.
  • ಊನಮಾಡು; ಊನಗೊಳಿಸು; ದುರ್ಬಲಗೊಳಿಸು; ಶಕ್ತಿಗುಂದಿಸು (ರೂಪಕವಾಗಿ ಸಹ).

  • lame
    ನಾಮವಾಚಕ
    ಜರತಾರಿ ಬಟ್ಟೆ; ಸರಿಗೆ ವಸ್ತ್ರ; ಕಲಾಬತ್ತು ಬಟ್ಟೆ; ಚಿನ್ನದ ಯಾ ಬೆಳ್ಳಿಯ ಕಲಾಬತ್ತು ಸೇರಿಸಿ ಹೆಣೆದ ಬಟ್ಟೆ.

    lame
    ಗುಣವಾಚಕ
    (ಬಟ್ಟೆ, ಉಡುಪು, ಮೊದಲಾದವುಗಳ ವಿಷಯದಲ್ಲಿ) ಸರಿಗೆಯ; ಕಲಾಬತ್ತಿನ; ಜರತಾರಿಯ; ಚಿನ್ನದ ಯಾ ಬೆಳ್ಳಿಯ ಕಲಾಬತ್ತು ಸೇರಿಸಿ ಹೆಣೆದ.

    lame duck
    ನಾಮವಾಚಕ
  • ಅಂಗವಿಕಲ(ವ್ಯಕ್ತಿ); ವಿಕಲಾಂಗ; ಅಂಗಹೀನ; ಊನಾಂಗ.
  • ಅಶಕ್ತ; ದುರ್ಬಲ ವ್ಯಕ್ತಿ.
  • ಷೇರುಕಟ್ಟೆ ಬಾಕಿದಾರ; ಷೇರುಕಟ್ಟೆಯಲ್ಲಿ ಕೊಡಬೇಕಾದ ಹಣಕಟ್ಟಲು ತಪ್ಪಿದವನು.
  • ಅಶಕ್ತ ಸಂಸ್ಥೆ; ಹಣದ ವಿಷಯದಲ್ಲಿ ತನ್ನ ಒಪ್ಪಂದಗಳನ್ನು ಪಾಲಿಸಲು ಶಕ್ತಿಯಿಲ್ಲದ ವಾಣಿಜ್ಯ ಮೊದಲಾದ ಸಂಸ್ಥೆ.
  • (ಅಮೆರಿಕನ್‍ ಪ್ರಯೋಗ) ವಿಕಲಾಧಿಕಾರಿ; ಮತ್ತೆ ಚುನಾಯಿತನಾಗದಿರುವುದರಿಂದ ನಿವೃತ್ತನಾಗಲಿರುವ ಅಧಿಕಾರಿ (ಮುಖ್ಯವಾಗಿ ಅಧ್ಯಕ್ಷ).

  • lame-brain
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) (ಆಡುಮಾತು) ದಡ್ಡ; ಗುಗ್ಗು; ಪೆದ್ದ; ಗಾಂಪ.


    logo